ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮

ರಾಮಚಂದ್ರಚರಿತಪುರಾಣಂ

      ಕಂ||ಗರ್ಭದ ಹೆಣ್ಗೂಸಿಂಗಂ
           ಗರ್ಭಿಣಿಗಂ ಬಾಧೆ ಪಿಂಗೆ ಪೆತ್ತಾಗಡೆ ಗ||
           ರ್ಭಾರ್ಭಕನನುಯ್ವೆನೆಂಬೀ
           ದುರ್ಭಾವನೆಯಿಂ ವಿದೇಹಿಯಂ ಕಾದಿರ್ದ೦||೧೫||

ಮ|| ಹರಿದಿಕ್ಕಾಂತೆಗೆ ಚಾರು ಚಂದ್ರಕಳೆಯುಂ ಚಂಡಾಂಶುವುಂ ಪುಟ್ಟುವಂ||
     ತಿರೆ ಭೂವಲ್ಲಭ ಚಿತ್ತವಲ್ಲಭೆಗೆ ಪುತ್ರೀಪುತ್ರರೊಂದಾಗಿ ರಾ||
     ಗ ರಸಂ ಕೈಮಿಗೆ ಪುಟ್ಟಿ ಪೂರ್ವಭವ ಬದ್ಧಕ್ರೋಧದಿಂ ಬಾಲನಂ|
     ಸುರನುರ್ವಿ೦ ಪಿಡಿದುಯ್ದನುಯ್ವತೆರದಿಂ ಸ್ವರ್ಭಾನು ಬಾಲಾರ್ಕನಂ||೧೬|

     ಅಂತು ನೆಗೆದು ಗಗನಮಾರ್ಗದೊಳ್ ಪೋಗುತ್ತುಂ--

ಚ|| ಒಗೆವೆನೊ ಬೀಸಿ ಪಾಸಾರೆಯೊಳಳ್ದುವೆನೋ ಕಡಲೊಳ್ ಕರುಳ್ಗಳಂ|
     ತೆಗೆವೆನೊ ಕುತ್ತಿ ಕತ್ತಿಗೆಯೊಳಿಕ್ಕುವೆನೋ ವಿಪಿನಾಗ್ನಿಯೊಳ್ಕರು||
     ತ್ತುಗಿವೆನೊ ಕೂಡೆ ಮೇಯ್ದೊವಲನಲ್ಲದೊಡೆನ್ನ ಳಿಲಾರದೆಂದು ದಿ|
     ಟ್ವಿಗಳೊಳೆ ನುಂಗುವಂತೆ ನಡೆನೋಡಿದನಾ ಶಿಶುವಂ ನಿಶಾಚರಂ||೧೭||

     ಅ೦ತು ನೋಡಲೊಡಮರ್ಭಕನ ಪೂರ್ವಭವದಣುವ್ರತ ಸಾಮರ್ಥ್ಯದೊಳಂ
ನಿಜಮಹಾವ್ರತ ಸಂಸ್ಕಾರದೊಳ೦--

     ಕಂ|| ಫಣಿ ಗರುಡಾಂಕದ ಪಚ್ಚೆಯ
           ಮಣಿಯಂ ಕ೦ಡ೦ತೆ ಮಣಿಯೆ ಶಿಶುವದನ ನಿರೀ||
           ಕ್ಷಣದಿಂದಾಕ್ಷಣದೊಳ್ ದಾ
           ರುಣಭಾವಂ ದೇವನುಪಶಮಕ್ಕೆಡೆಯಾದಂ||೧೮||

           ಒಡಲೊಳಗುಡಿದ ಸರಲ್‌ ಪೊರ
           ಮಡುವುದಯಸ್ಕಾಂತ ಸನ್ನಿಧಾನದೊಳೆಂತಂ||
           ತೊಡಲಿಂ ಪೋದುದು ಮುನಿಸಿನ
           ಪೊಡರ್ಪು ನಕ್ತಂಚರಂಗೆ ಶಿಶುಸನ್ನಿಧಿಯೊಳ್||೧೯||

     ಅ೦ತುಪಶಮ ಭಾವಮುಂ ಪಾಪಭೀರುತ್ವಮುಂ ತನಗೆ ತೊಟ್ಟನೆ ಪುಟ್ಟಿ ತನ್ನ


೧. ನೊರ್ವ೦. ಕ. ಖ. ಗ .ಘ ಚ.
೨. ಡಾ೦ಡದ. ಚ. ; ಡಾಂಗದ, ಕ, ಖ, ಗ, ಘ.