ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೩

ಚತುರ್ಥಾಶ್ವಾಸಂ

     
     ಕಂ||ಶಿಶಿರೋಪಚಾರದಿಂ ಖಚ
          ರ ಶಿರೋಮಣಿ ನಯನ ಕುವಲಯಂ ಬಿರ್ಚೆ ಮನೋ||
          ಜ ಶಿಲೀಮುಖ ಕೀಲಿತ ಹೃ
          ತ್ಕುಶೇಶಯಂ ತಡೆದು ಮೂರ್ಛೆಯಿಂದೆಳ್ಚಿರ್ತ್ತಂ||೯೪||

      ತದನಂತರಮಾವಿಯಚ್ಚ ರಾಧಿರಾಜನೀಪಟಮನಿಲ್ಲಿ ಗಾರ್ತ೦ದರೆ೦ದುಮ್ಮಳಿಸು
ತ್ತುಮಿರೆ ನಾರದನಾಗಳಲ್ಲಿಗೆ ಬಂದುಚಿತಾಸನದೊಳಿರ್ದು ಖಚರಪತಿಗಿಂತೆಂದಂ--

     ಕಂ||ಜನಕಂ ಮಿಥಿಲಾಧಿಪನಾ
          ತನ ವನಿತೆ ವಿದೇಹಿಯೆಂಬಳಾಕೆಗೆ ವಿಯದಂ||
          ಗನೆಗೆ ತುಹಿನಾಂಶು ಕಳೆಯೆನೆ
          ಜನಿಯಿಸಿದಳ್ ಸೀತೆಯೆಂಬ ಕನ್ಯಾರತ್ನಂ||೯೫||

ಮ|| ಸುರ ವಿದ್ಯಾಧರ ಕನ್ಯಕಾ ಜನದೊಳಾ ಸ್ತ್ರೀರತ್ನಮಂ ಪೋಲ್ವರೊ |
      ರ್ವರುಮಿಲ್ಲೀ ನೃಪರತ್ನವಾಕೆಗನುರೂಪಂ ರತ್ನ ಮೇಳಾಪಕಂ||
      ದೊರೆವೆತ್ತಿರ್ಕುಮಿದಂ ನಿವೇದಿಸುವೆನೆಂದಾ ಕನ್ಯಕಾವಿದ್ಧಮಂ|
      ಬರೆದಾನಿಲ್ಲಿಗೆ ತಂದನಕ್ಕೆ ನಿಮಗಂ ಭದ್ರಂ ಶುಭಂ ಮಂಗಳಂ||೯೬||

      ಎಂದು ನಾರದಂ ಪರಸಿ ಪೋಪುದುಮಿತ್ತಲ್--
ಉ || ಏನುಮನಾರೊಳಂ ನುಡಿಯದುಮ್ಮಳದಿಂ ವಿರಹಾಕುಲಂ ಮನೋ|
      ಗ್ಲಾನಿಯನೊಂದಿ ಪೆಣ್ಣಬರೆಪಂ ಬರೆದಂತಿರೆ ಚಿತ್ತಭಿತ್ತಿಯೊಳ್||
      ಜಾನಿಸಿ ಚಿತ್ತಮಂ ಪುದಿಯೆ ಮೋಹತಮಂ ಬೆಮರುಣ್ಮಿ ಪೊಣ್ಮೆ
      ಜ್ಞಾನಮಿತಾನನಂ ತಳೆದನಾ ಖಚರಾಗ್ರಣಿ ಮೌನಮುದ್ರೆಯ೦ ||೯೭||

      ಅಂತು ದಿಙ್ಮೂಢನಾದ ಮಗನ ಮೊಗಮನಿಂದುಗತಿ ನೋಡಿ--

ಉ || ಮಾನವ ಕನ್ಯೆಯಂ ಬಯಸಿ ನಂದನ ನಿನ್ನ ಮನಕ್ಕೆ ಚಿ೦ತೆಯಂ ।
      ಮ್ಲಾನತೆಯ೦ ಮುಖಕ್ಕೆ ತರವೇಳ್ಪುದೆ ಕೊಳ್ಕೊಡೆಗಳ್ತು ವಟ್ಟೆನೆಂ||
      ದಾನೆರೆದಟ್ಟಿ ನಿನ್ನ ದೊರೆಯಂ ವರನಂ ಪಡೆದಿರ್ಮೆ ಕೇಳ್ವೆನೇ|
      ಜಾನಕಿಯಂ ವಿವಾಹವಿಧಿಯಿಂ ಜನಕಂ ನಿನಗೀಯದಿರ್ಪನೇ||||೯೮||

      ಎ೦ದು ನಿಜನಂದನನ ಮನೋವಿಷಾದಮಂ ಕಳೆದು ನಮಗಿಲ್ಲಿಗೆ ತಕ್ಕುದಾ
ವುದೆನೆ ವಿಯಚ್ಚರ ವೀರನೊರ್ವನಿಂತೆಂದಂ--