ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೯

ಚತುರ್ಥಾಶ್ವಾಸಂ

ಟ್ಟಾನೆಯುಮಾಕುದುರೆಯುಮಾ
ಸೇನೆಯುಮೇನೆನಗೆ ಮಾಡಲಾರ್ತುವೆ ಹಿತಮಂ||೧೨೬||

ಕಂ||ಸಮನಿಸಿದನಿಷ್ಟ ಸಂಯೋ
ಗಮನಿಷವಿಯೋಗಮಂ ಚತುರ್ಗತಿಗಳೊಳಂ||
ಭ್ರಮಿಯಿಸಿ ಕೈಕೊಳ್ಗುಂ ತಾ
ನೆ ಮಿಕ್ಕವರ್ ನೆರೆದು ತನಗೆ ನೆರವಾದಪರೇ||೧೨೭||

ಉದಯಿಸಿದ ಶುಭಾಶುಭ ಕ
ರ್ಮದ ಫಲಮಂ ಸದೃಶವಾಗೆ ಕಾಣ್ಬುದು ಸಮಚಿ||
ತ್ತದೊಳಿರ್ಪುದು ತಕ್ಕುದು ತ
ಕ್ಕುದಲ್ತು ತಕ್ಕಂಗೆ ತಗದ ಹರ್ಷ ವಿಷಾದಂ||೧೨೮||

ಎಂದು ಉದಾತ್ತಚಿತ್ತನಲ್ಲಿಂ ತಳರ್ದು ವನವಿಳಾಸಮಂ ನೋಡಿ ಮೆಚ್ಚು
ತ್ತುಂ ನಡೆಯೆ ಮುಂದೆ ಮಾಕಂದ ನಂದನದ ಬಳಸಿನೊಳಮಶೋಕವನದ ಪುದಿ
ವಿನೊಳಂ ನಾಗಚಂಪಕ ವನದ ಸುತ್ತಿನೊಳಮತಿ ರಮಣೀಯಮಾಗಿ--

ಮ||ಪದೆಪಂ ಕಣ್ಗೆ ಮನಕ್ಕೆ ಸಂತಸಮನಿತ್ತೇಂ ಮಾಣ್ದುದೇ ಮಾಣ್ಡುದಿ|
ಲ್ಲದು ಬೇರೊಂದಮರಾಚಲೇಂದ್ರಮೆನೆ ನಾನಾರತ್ನ ಕೂಟಾಂಶು ಜಾ||
ಲದಿನಾಶಾವಧುಗಿತ್ತು ಚಿತ್ರಪಟಮಂ ಚೈತ್ಯಾಲಯಂ ಮತ್ತಮಿ|
ತ್ತುದು ಸಪ್ತಾಶ್ವನ ಸಪ್ತಸಪ್ತಿಗೆ ಸಮಗ್ರ ಪ್ರಗ್ರಹಾಶಂಕೆಯಂ||೧೨೯||

ಪೃಥ್ವಿ||ಇರುಳ್ ಕುಮುದನೇತ್ರದಿಂ, ಕಮಳನೇತ್ರದಿಂದಂ ಪಗಲ್|
ನಿರೀಕ್ಷಿಸುವಪೇಕ್ಷೆಯಿಂ ವಸುಧೆ ತಜ್ಜಿನಾವಾಸಮಂ|
ದರಸ್ಮಿತ ಮುಖಂಗಳಂ ಪಲವನಪ್ಪುಕೆಯ್ದಿರ್ಪವೋಲ್|
ಸರಸ್ಸಮಿತಿ ಸುತ್ತಿ ಪೊಮ್ಮಗಿಲ ಸುತ್ತಲುಂ ರಂಜಿಕುಂ||೧೩೦||

ಅ೦ತತಿಶಯಮಪ್ಪ ಜಿನಭವನಮಂ ಕ೦ಡು ಬಲಗೊಂಡು-

ಮ||ಅಳಿ ಮಾಳಾ ಮಿಳಿತ ಪ್ರಸೂನ ಸುರಭಿ ದ್ರವ್ಯ೦ಗಳಿ೦ದರ್ಚನಾ।
ಫಳ ಶಾಲ್ಯಕ್ಷತ ಧೂಪ ದೀಪ ಚರು ಸಂದೋಹಂಗಳಿಂ ಸರ್ವಮಂ||


೧. ದಲ್ತೆ. ಕ. ಖ. ಚ.