ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ರಾಮಚಂದ್ರ ಚರಿತಪುರಾಣಂ

ಚ||ಸುಗತಿಗೆ ಭಕ್ತಿ ದುರ್ಗತಿಗೆ ನಿನ್ನ ಪದ ಪ್ರತಿಕೂಲ ವೃತ್ತಿ ಮು|
ಕ್ತಿಗೆ ನಿಜ'ತತ್ವ ಭಾವನೆಯೆ ಕಾರಣಮೆಂದೊಡೆ ನೀನೆ ದೇಹ ಯಾ||
ತ್ರೆಗೆ ಸುಖ ದುಃಖ ಯೋಜನೆಗೆ ದೇಹಿಗೆ ಮುಖ್ಯನೆ ನಿನ್ನನಂತರಿಂ||
ಜಗಮನಶೇಷಮಂ ಪಡೆವೆನೆಂಬುದು ಯುಕ್ತಿ ವಲಂ ಜಿನೇಶ್ವರಾ||೭||

ಕೊಲೆಯ ವಿಕಲ್ಪ ಕೋಟಿಗಳೆ ದುಶ್ಕ್ರುತಮೆಲ್ಲಮಬಾಧೆಯೊಂದೆ ಬಂ|
ಬಲ ಸುಕೃತಂಗಳೆಲ್ಲಮನನಿರ್ಬಗೆಯಾಗಿರೆ ಮಾಡಿ ಮಾನವರ್||
ಪೊಲೆಗಿಡದಂತು ದುಃಖ ಸುಖ ಹೇತುಗಳಂ ನಿಜ ದಿವ್ಯ ಭಾಷೆಯಿ೦|
ಜಲಕನೆ ತೋರಿದೈ ಸಕಲ ದೇಹಿಗೆ ನೀನೆ ಶರಣ್‌ ಜಿನೇಶ್ವರಾ||೮||

ಮದನ ಪತತ್ರಿ ನಿನ್ನ ದೆಸೆಗಾಣದು ಮೋಹ ಮಹಾಹಿ ನಿನ್ನ ನ|
ಣ್ಮದು ಕಲುಷಾನಲಂ ನಿಜದಯಾರಸದಿಂ ಮಸಿಯಾಯ್ತು ಪಾಪವಿ||
ಲ್ಲದ ಪಯಣಕ್ಕೆ ನಿನ್ನ ನುಡಿ ಸಂಬಳಮಾಯ್ತೆನೆ ಪೆಣ್ಣ ಮಣ್ಣ ಮೋ|
ಹದ ಪರಮಾತ್ಮರಂತಿರಲಿ ನೀನೆ ಜಗತ್ಸ್ತುತನೈ ತನೈ ಜಿನೇಶ್ವರಾ||೯||

ಉ||ನೋಟದ ತೀಟದಾಲಿಸುವ ಸೇವಿಸ ವಾಸನೆಗೊಳ್ವ ಸೌಖ್ಯಮಂ|
ಮಾಟದ ಸೌಖ್ಯಮೆಂದು ಪೆಸರ್ಗೊಳ್ಳದೆ ನಿನ್ನೊಳಭೇದವಾದ ಕೋಂ||
ಡಾಟದನಂತಸೌಖ್ಯಮನೆ ಮರ್ಚಿದ ಮರ್ಚುಗೆಯೊಳ್ ತೊಡರ್ಚು ಮಾ|
ರೂಟದಿನೆನ್ನ ದರ್ಶನವಿಶುದ್ಧಿಯೆ ಮೂಲ್ಯಮೆನಲ್ ಜಿನೇಶ್ವರಾ||೧೦||

ಎಂದು ದರ್ಶನಸ್ತುತಿಗೆಯ್ದು--

ಕಂ||ಜಿನ ಮುಖ ದರ್ಶನದಿಂದಂ
ಜನಕಂ ಮುನ್ನಾದ ಖೇದಮಂ ಮರೆದು ಸುಧಾ|
ವನನಿಧಿಯೊಳ್ ಮುಳುಗಿದವೋಲ್ತ
ನುಪುಳಿಕಿತಮಾಗೆ ಹರ್ಷರಸಮಯನಾದಂ||೧೧||

ಅನ್ನೆಗಮಿತ್ತಲ್‌--

ಚ||ಕೃತಕ ತುರಂಗಮಾಕೃತಿಯನಂದುಪಸಂಹೃತಿ ಮಾಡಿ ಮುನ್ನಿನಾ।
ಕೃತಿಯೊಳೆ ಪೋಗಿ ಪೊಕ್ಕನುಚರಂ ಖಚರಂ ಖಚರೇಂದ್ರಸದ್ಮಮಂ||


  1. ೭, ೮, ೯, ೧c-ಈ ನಾಲ್ಕು ಪದ್ಯಗಳೂ ಗ, ಚ, ಗಳಲ್ಲಿಲ್ಲ ; ಅವು ಮಲ್ಲಿನಾಥಪುರಾಣದ ೧೨ ನಯಾಶ್ವಾಸದ ಅಂತ್ಯದಲ್ಲಿ ಇವೆ.