ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

ರಾಮಚಂದ್ರ ಚರಿತಪುರಾಣಂ

ಅಂತು ಮನ್ನಿಸಿ--

ಚ||ಅಲರ್ದ ಮುಖಾಬ್ಬಮಂದರಿಪೆ ಚಿತ್ತದ ಪತ್ತುಗೆಯಂ ಕಡಂಗಿ ಕ|
ಣ್ಮಲರನುರಾಗಮಂ ಕೆದರಿ ನೋಡಿ ನರೇಂದ್ರ ಮುಖಾರವಿಂದಮುಂ||
ಜಲಜಲಿಸುತ್ತು ಮಿರ್ಪ ದಶನಾಂಶು ಪೊದಳ್ದಿ ತಟದ್ವಿಳಾಸಮಂ|
ಗೆಲೆ ನುಡಿದಂ ಘನ ಧ್ವನಿ ಘನಧ್ವನಿಯಂ ಮಿಗೆ ಖೇಚರಾಧಿಪಂ||೧೭||

ಕಂ||ಎನ್ನ ತನಯಂಗೆ ತಕ್ಕಳ್
ನಿನ್ನ ತನೂಜಾತೆ ರೂಪವತಿ ಸೀತೆ ಗಡಾ||
ಕನ್ನೆಯನೆನ್ನ ಮಗಂಗಿ
ತ್ತೆನ್ನೊಡನೊಡರಿಸು ಧರಾಧಿಪತಿ ಕೊಳ್ಕೊಡೆಯಂ||೧೮||

ಎನೆ ಜನಕನಿಂತೆಂದಂ--

ಕಂ||ನಿನ್ನ ತನಯಂಗೆ ನಮಿವಂ
ಶೋನ್ನತ ಕುಡಲಪ್ಪುದಾದೊಡಂ ಕನ್ನೆಯನಾಂ||
ಮುನ್ನಮೆ ರಾಮಂಗಿತ್ತೆನ
ದನ್ನಿಲೆ ನುಡಿಯದೊಡೆ ಮೆಚ್ಚಲರಿಗುಮೆ ಲೋಕಂ||೧೯||

ಎನೆ ಸನ್ಮತಿವೆಸರ ವಿದ್ಯಾಧರನಿಂತೆಂದಂ--

ಕಂ||ದೊರೆಕೊಂಡ ನಿಧಿಯನೊಲ್ಲದೆ
ಜರಗಂ ಕರ್ಚುವುದೆ ತನ್ನ ತನಯಂಗೆ ವಿಯ||
ಚ್ಚರ ರಾಜನೆರೆದೊಡೀಯದೆ
ದೊರೆಯಲ್ಲದ ಮಾನವಂಗೆ ಕುಡುವುದೆ ಕೂಸಂ||೨೦||

ಆರಾದೊಡಮೆರೆವರ್ಕ
ನ್ಯಾರತ್ನಮನೆರೆದೊಡೀಯೆಮೆಂಬರೆ ಕುಡುವಂ||
ತಾರಾಮನೊಳೇಗಂಡೈ
ಪೌರುಷಮಂ ತಕ್ಕುದಳಿದು ನೆಗಳಿಲ್ವೇಡಾ||೨೧||

ಎನೆ ಜನಕಂ ಮುನಿಸಂ ಮನಕ್ಕೆ ತಾರದೆ ರಾಮನ ಭುಜ ಪ್ರತಾಪಮಿಲ್ಲದಂದುತ
ರಂಗತಮನೆಂಬ ಶಬರ ನಾಯಕನಿಂ ವಿನೀತಾಖಂಡಮನಿತುಂ ಮ್ಲೇಚ್ಛ ದೇಶಮಕ್ಕು


೧: ಳಿಂ ಕಂಡ್ಯ. ಘ