ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೦

ರಾಮಚ೦ದ್ರಚರಿತಪುರಾಣಂ

ಮೇಖಲೆಯಂ ತೊಡರ್ಚಿಯುಂ, ಮದನ ಮದ ರದನಿ ರದನದೊಳ್ ಕೀರ್ತಿಮುಖಮಂ ಕೀಲಿಸುವಂತೆ ಶತಪತ್ರ ಭಂಗಮಂ ತುಂಗನಾಭೋಗದೊಳ್ ಸಂಗಳಿಸಿಯುಂ, ಸೀವರ ಪಯೋಧರ ಮಂಡಳಕ್ಕೆ ಪರಿವೇಷಮಂ ಪಡೆವಂತೆ ಪಂಚರತ್ನದ ಬಣ್ಣ ಸರ ಮಂ ಕೊರಳಿಕ್ಕಿಯುಂ, ಬಾಹುಲತೆಯ ಬಿಳಿಲಂತೆ ರತ್ನ ಕಾಂತಿ ಕವಊರಿವಿನನಂ ಗದವ ನಳವಡಿಸಿಯುಂ, ಸಿರಿಸದ ಬಾಸಿಗನಂ ಭಂಗಮಾಲೆ ಬಳಸುವಂತೆ ನಳಿ ತೋಳೊಳ್ ಪಚ್ಚೆಯ ಪಿಂಡುಗಂಕಣಮನೇ ಅಸಿಯುಂ, ನನೆಗಣೆಗೆ ಗಜಗಟ್ಟುವಂ ತಂಗುಲಿಯೊಳ್ ರತ್ನ ಮುದ್ರಿಕೆಯಂ ಮುದ್ರಿಸಿಯುಂ, ಸ್ಮರ ವಶೀಕರಣ ಯಂತ್ರಮಂ ಬರೆವಂತೆ ಕಪೋಲ ತಳದೊಳ್ ಮಕರಿಕಾ ಪತ್ರವ೦ಬರೆದುಂ, ಪೊಸಮನೆಯ ಪೂಗ ಣೆಗೆ ಪೊಗರಂ ಪಡೆವಂತೆ ನಗೆಗಣ್ಣ ಕೊಳಂಜನಮನಗೆಯು.೦, ಕಣಾಧಿತ ವಿಶ್ರಾಂತ ವಿಲೋಚನದೊಳ್ ಪಡಿಯಿಟ್ಟು ನೋಿಂತೆ ಕಿವಿಯೊಳವತಂಸೋತ್ಪಲಮಂ ತೊಡರ್ಚಿಯುo-

ಚ || ಉರ್ಗಳ ಕಾಂತಿಯಿ೦ದಳಕವಲ್ಲಿಗೆ ನೀರ್ನಳಿನಂತೆ ಮೆಲ್ಲಮೆ |
ಲ್ಲಗೆ ತಲೆವಿಕ್ಕಿ ಚಂದ್ರ ಕಿರಣಂಗಳನಾಗಳೆ ರಾಹು ನುಂಗಿ ಮ||
ತುಗುಳ್ಳ ಪುದೆಂಬಿನಂ ಮುಡಿಸಿ ಬಾಲೆಯ ಸೋರ್ಮುಡಿಯಂ ಲಲಾಟದೊಳ್ |
ಮೃಗಮದ ಬಿಂದುವಂ ಪೆಱಗೆ ನುಣ್ಣ ಅಲೆಯಂ ಪಡೆವಂತೆ ತಿರ್ದಿದರ್||೪೩ ||
ಆಗಳಾಕೆಯ ಮಂಗಳವಸದನ ಮೇ ತನಗೆ ಬೀರವಸದನಮಾಗೆ-

ಕಂ || ಬಾಲೆಯ ಕಡೆಗಣೋಟಮೆ
ಸಾಲದೆ ನನೆಗಣೆಗಳೇವುವೆಂದು ಮನೋಜ೦ ||
ಶೂಲಿಯನೊಸಲುರಿಗಣ್ಣಂ
ಪೀಲಿಯ ಕಣ್ಣೆಂಬನಾವನೆನಗಿದಿರೆಂಬಂ || ೪೪ ||

ಮನಸಿಜನೆನೆ ರತಿಯೆನೆ ಕ
ರ್ವಿನ ಬಿಲ್ಲೆನೆ ಕುಸುಮ ಬಾಣಮೆನೆ ಕೋಕಿಲ ನಿ ||
ಸ್ವನಮೆನೆ ಮಧುಕರ ಝಂಕತ
ಮೆನೆ ಸೀತೆಯ ಪಸದನಕ್ಕೆ ಪರ್ಯಾಯಂಗಳ್ ||೪೫ ||

ಅಂತು ಕೈಗೆಯು ಮಾ ಸಮಯದೊಳ್-
ಕಂ || ಹರಿವಂಶ ನಿಯಮದಿ೦ ಹಿತ
ಪುರೋಹಿತಂ ಶುಭಮುಹೂರ್ತದೊಳ್ ಕನ್ಯಕೆಯಂ ||
ತರಬೇತಿ ವೃದ್ದ ಕಂಚುಕಿ
ವೆರಸು ಮನೋರಥಮನಿಪ್ಪ ರಥಮಂ ತಂದರ್ || ೪೬ ||