ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೦

ರಾಮಚಂದ್ರಚರಿತಪುರಾಣಂ

ನ್ನು ರಗಾಕಾರಮನುಪಸಂ
ಹರಿಸಿ ನಿಜಾಕೃತಿಯೆನಿರ್ಪುದೊಂದಚ್ಚರಿಯೇ || ೯೯ ||

ಅ೦ತುಬಂದು-

ಚ || ನಗಧರನೆತ್ತನೇ ಧನುವನೇಜಸನೇ ನರಸಾನು ಕೂಟಮಂ |
ಪಗೆವರನೇ ಅಸಲ್ ನೆಆಲೆವಲಂನ್ಯಬಲಂ ಬಲಗರ್ವದಿಂದದಂ ||
ಬಗೆದನೆ ಪುರ್ಬನೇಜಿಸುವ ಮಾಯಿನಶ್ರಮದಿಂ ಪೊಡರ್ಪು ಕೈ |
ಮಿಗೆ ರಿಪುಮರ್ದನಂ ಧನುವನೆತ್ತಿದನೇ ಅಸಿದ ಜನಾರ್ದನಂ || ೧೦೦ ||

ಪೃಥ್ವಿ || ಪರಾಭವಿಸಿದಂ ಗುಣ ಪ್ರಗುಣ ಚಂಡ ಕೋದಂಡದಿಂ |
ಪರಿಸ್ಸುರಿತ ಪಂಚರತ್ನ ರುಚಿ ಸಾಗರಾವರ್ತದಿಂ ||
ವಿರೋಧಿಬಲ 'ಪೋತ ವೀರರಸ ಸಾಗರಾವರ್ತದಿಂ |
ಸುರೇಂದ್ರ ಧನು ಮೂಡಿದಂಬರಮನಂದು ಪೀತಾಂಬರಂ || ೧೦೧ ||

ಚ || ಉದಧಿ ಕಲಂಕಿದತ್ತು ದೆಸೆ ತಲ್ಲಳಿಸಿತ್ತಮರಾದ್ರಿ ಗಾಳಿಗೊ |
ಡ್ಡಿದ ಸೊಡರಂತೆ ಸ೦ಚಲಿಸಿದತ್ತು ತೆಲಂ ನಡುಗಿತ್ತು ದಿಗ್ಗಜಂ ||
ಮದಮುಡುಗಿತ್ತು ಖೇಚರಬಲಂ ಪಳ ಅತ್ತು ಕರುತ್ತು ದಿವ್ಯ ಚಾ |
ಪದ ತಿರುವಾಯ್ ದಿವ್ಯಶರಮಂ ತರೆ ದೋರ್ಬಲಶಾಲಿ ಲಕ್ಷ್ಮಣಂ || ೧೦೨||

ಚ || ಕರ ಕಮಲಂಗಳಂ ಮುಗಿದು ಲಕ್ಷಣದೇವ ಶರಣ್ಯವೆಂಬ ದೇ |
ವರ ನುಡಿ ಪೊದತ್ತಲರ ಪೆರ್ಮತೆ ಕೊಂಡುದು ದೇವದುಂದುಭಿ ||
ಸ್ವರಮೊಗೆದತ್ತ ವರ್ಕಗಿದು ಖೇಚರ ರಾಜ ಮಹತ್ತರಂ ಭಯಾ |
ತುರನೆಮೆಯಿಕ್ಕದೆಂಟನೆಯ ಕೇಶವನಂ ಬೆಜಿಗಾಗಿ ನೋಡಿದಂ ||೧೦೩ ||

ಕಂ|| ಅದಟಂ ವಜ್ರಾವರ್ತ
ಕ್ಕೆ ದಿವ್ಯಮೆನಿಸಿದ ಹಲಾಯುಧಂಬೆರಸು ಬಲ೦ ||
ಗದೆವೆರಸು ಸಾಗರಾವ
ರ್ತ ದಿವ್ಯ ಚಾಪಕ್ಕುಪೇಂದ್ರನಧಿಪತಿಯಾದಂ || ೧೦೪ ||

ಚ೦ದ್ರಾಸ್ಯೆಯರಂ ಮನದೊಳು
ಪೇಂದ್ರಂಗೀರೊ೦ಬದಿಂಬರಂ ನಿರ್ಜಿತ ದೇ ||
ವೇಂದ್ರ ಗಣಿಕೆಯರನಂಕದ
ಚಂದ್ರಧ್ವಜನಳ್ಳಿ ಕಪ್ಪಮಾನವೊಲಿತ್ತಂ || ೧೦೫ ||


1. ಪಾತ. ಕ. ಖ, ಚ ; ದೈತ್ಯ. ಗ. ಘ 2. ನಂಬ. ಫ.