ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೧

ಪ೦ಚಮಾಶ್ವಾಸಂ

ಆಗಳನೆಕಾರ್ಚನೆಗಳಿಂ ಧನುರ್ಯುಗಲಮಂ ಜನಕನರ್ಚಿಸುವುದು೦-

ಕಂ|| ಅನರಣ್ಯ ಸುತಂ ದಶರಥ
ಜನಪತಿ ಕರಿಘಟೆಯಾಳಶ್ವದಳದೊಳುಪೇಂದ್ರಂ ||
ಜನಕ ತನೂಜೆಯುಮಂ ರಾ
ಮನುಮಂ ಮುಂದಿಟ್ಟು ಮಿಥಿಳೆಗಭಿಮುಖರಾದರ್ || ೧೦೬ ||

ಅಂತು ಸ್ವಯಂವರಶಾಲೆಯಿಂ ತಳರ್ವುದುಂ-

ಉ || ಅಟ್ಟಳೆಯಂ ಪಳಂಚಿ ಪುರ ಗೋಪುರವಂ ಪರಿದೇಜಿ ಕೋ೦ಟೆಯಂ |
ಮೆಟ್ಟಿ ಸುಧಾ ಗೃಹಾವಳಿಗೆ ಲಂಘಿಸಿ ಹಲ್ಮತಳಕ್ಕೆ ಪಾಯು ಚೌ ||
ವಟ್ಟಮನೆಯ್ಲಿ ದೇವಗುಲದಾದಲೆಯಿಂ ಗಗನೋದರಕ್ಕೆ ದಿಂ |
ಕಿಟ್ಟು ದು ದುಂದುಭಿಶ್ವನಮನೇಲಿಸಿ ಭೋಂಕನೆ ಶಂಖನಿಸ್ವನಂ || ೧೦೭ ||

ಆಗಳಾ ಪುರಜನಂಗಳುತ್ತುಂಗ ಮಾಟ ಕೂಟ ಪ್ರಾಸಾದಂಗಳನೇಜ್-

ಚ || ತಲೆವದಾನೆ ಸುತ್ತಿ ಸಲವುಂ ಬರೆ ತಳ್ಳಿರೆ ಮೇಘಡಂಬರಂ |
ಲಲನೆಯರಿಕ್ಕೆ ಚಾಮರಮನಿರ್ಕೆಲದಾನೆಯ ಪುಷ್ಪ ಕಂಗಳೊಳ್ ||
ನೆಲಸಿ ಕುಳಾಚಳಾಕೃತಿಯನೇಜಿ ಗಜೇಂದ್ರಮನಿಂದ್ರನಂತೆ ಬ |
ರ್ಪಲಘುಪರಾಕ್ರಮಂ ದಶರಥಂ ಪರಿಪೂರ್ಣ ಜಗನ್ಮನೋರಥಂ || ೧೦೮ ||

ವನಧಿತರಂಗದಂತಿರೆ ತುರಂಗ ದಲಿ೦ ಬರೆ ವಾಜಿ ರಾಜ ವ |
ನದಿನುರಸ್ಕೃಲಂಬಿಡಿದು ಲಕ್ಷ್ಮಿಯ ಕೇಕರದಂತೆ ತೋರಮು ||
ತಿನ ತಿಸರ೦ ತೆಲಿಂಬೊಳೆಯ ಮಿ೦ಚಿನವೋಲ್ ಮಣಿಕುಂಡಲಾಂಶುಗಳ್ |
ತೊನೆಯೆ ಕದ೦ಪಿನೊಳ್ ಮದನನಂತಿರೆ ಬರ್ಸನನ ಲಕ್ಷಣ೦ ||೧೦೯ ||

ಮ || ತನಿಸೋ೦ಕಿ೦ ತನಗೀಯೆ ಹರ್ಷಭರಮಂ ಲಜ್ಞಾಭರಾಕುಂಚಿತಾ |
ನನೆ ವೈದೇಹಿ ತದೀಯ ಕುಂತಳ ಸಹಸ್ರಕ್ಕಿತ್ತು ತಿರ್ಯಗ್ವಿಳೋ ||
ಕನಮಂ ಹೇಮ ವರೂಥದೊಳ್ ನೆಲಸಿ ನೇತ್ರಾನಂದಮಂ ನಾಟಿ ರೂ |
ಪಿನ ಚೆಲ್ವಂ ಮದನಂಗೆ ಲಾಘವಮನಿತ್ತಾ ಬರ್ಸವಂ ರಾಘವಂ ||೧೦ ||

ಚಲ ನೀಲಾಚಲ ರತ್ನ ಕೂಟಮನೆ ಕಾದಾನೆಯಂ ದೋರ್ಭುಜಂ |
ಗ ಲತಾ ದಂಷ್ಟಿಕೆ ಕಣ್ಣ ಗುರ್ಮಿಸುವಿನಂ ವಜ್ರಾಂಕುಶಂ ಮೌಕ್ತಿಕಾ ||
ವಲಿ ವಕ್ಷಸ್ಪರಸೀಮೃಣಾಳಿಕೆ ಬೆಡಂಗಂ ಬೀಜತೆ ಚಂದ್ರಾರ್ಕರಂ |
ಗೆಲೆವಂದಾ ಬರುತಿರ್ಪವರ್ ಭರತಶತ್ರುಘ್ನರ್ ಪುರೋಭಾಗದೊಳ್ || ೧೧೧||