ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಂಪರಾಮಾಯಣದ ಕಥೆ

7

ವಲ್ಲಿ ಅಲ್ಲಿಗೆ ನಾರದನು ಬಂದು ಆ ಪಟವನ್ನು ಅಲ್ಲಿಗೆ ತಂದವನು ತಾನೆಂದೂ ಆ ಲಲನಾಮಣಿಯು ಮಿಥಿಲಾಧಿಪನಾದ ಜನಕನ ಮಗಳೆಂದೂ ಆ ಕನ್ಯಗೆಣೆ ಯಾದವರು ಸುರ ವಿದ್ಯಾಧರ ಕನಕೆಯರಲ್ಲಿ ಯಾರೂ ಇಲ್ಲವೆಂದೂ ಹೇಳಿ ಅನ ರನ್ನು ಹರಸಿ ಹೊರಟುಹೋದನು.

ಪ್ರಭಾಮಂಡಲನು ಸೀತೆಯ ಮೇಲಣ ಮೋಹದಿಂದ ದಿಗ್ಬ್ರಮೆಹೊಂದಿರುವುದನ್ನು ಇಂದುಗತಿಯು ಕ೦ಡು ಮಾನವ ಕನೈಯನ್ನು ಬಯಸಿ ಅಷ್ಟು ಚಿಂತೆಗೊಳ್ಳಲೇಕೆಂದು ನುಡಿದು ಜಾನಕಿಯನ್ನು ಸುಲಭವಾಗಿ ಅವನಿಗೆ ಮದುವೆ ಮಾಡಿಸುವೆನೆಂದು ಹೇಳಿ ಪ್ರಭಾಮಂಡಲನನ್ನು ಸಮಾಧಾನಗೊಳಿಸಿದನು. ಇದಕ್ಕೆ ಉಪಾಯವೇನೆಂದು ಆಲೋಚಿಸುತ್ತಿರುವಲ್ಲಿ ವಿಯಚ್ಚರನೊಬ್ಬನು ಮಿಥಿಲೆಗೆ ಹೋಗಿ ಜನಕನನ್ನು ಬೆದರಿಸಿ ಸೀತೆಯನ್ನು ಎತ್ತಿಕೊಂಡುಬರುವುದೇ ಸರಿಯೆಂದು ಹೇಳಲು, ಅದಕ್ಕೆ ಇಂದುಗತಿಯು ಒಪ್ಪದೆ, ಅದು ಖೇಚರವಂಶಕ್ಕೆ ಶ್ರೇಯ ಸ್ವರವಲ್ಲವೆಂದೂ, ಖೇಚರರಿಗೆ ಭೂಚರರೊಡನೆ ಸಂಬಂಧವನ್ನು ಬೆಳೆಯಿಸುವುದು ಸಮನಲ್ಲದಿದ್ದರೂ ಮಗನಮೇಲಣ ಮೋಹದಿಂದ ಆ ಸಂಬಂಧವನ್ನು ಸರಿಯಾದ ರೀತಿಯಲ್ಲಿ ಬೆಳೆಯಿಸಬೇಕೆಂದೂ ಹೇಳಿದನು. ಇದನ್ನು ಕೇಳಿ ಚಪಲವೇಗನೆಂಬ ವಿದ್ಯಾಧರನು ಅಪ್ಪಣೆ ಪಡೆದು ಉಲ್ಕಾಪಾತದಂತೆ ಕೂಡಲೆ ಮಿಥಿಲೆಗಿಳಿದು ಜನಕನು ಹಯಪ್ರಿಯನಾಗಿರುವುದನ್ನರಿತು ಕುದುರೆಯ ರೂಪನ್ನು ಹೊಂದಿ ಉಪ ವನವನ್ನು ತುಳಿದು ಹಾಳುಮಾಡಿ ಪಟ್ಟಣವನ್ನು ನುಗ್ಗಿ ದಾರಿಯಲ್ಲಿ ಸಿಕ್ಕಿದವ ರನ್ನು ಯಮಪುರಿಗಟ್ಟುತ್ತಿರುವಲ್ಲಿ ಜನಕನನ್ನು ಕಂಡು ಸೌಮ್ಯ ರೂಪವನ್ನು ತಾಳಿ ದನು. ಜನಕನು ಆ ಕುದುರೆಗೆ ಜೇನು ಹಾಕಿಸಿ ಕಡಿವಾಣ ಮುಂತಾದುವನ್ನಳ ವಡಿಸಿ ಸವಾರಿಮಾಡುವುದಕ್ಕಾಗಿ ಹತ್ತಲು ಆ ಕುದುರೆಯು ಥಟ್ಟನೆ ಆಕಾಶಕ್ಕೆ ನೆಗೆದು ರಥನೂಪುರಚಕ್ರವಾಳಪುರದ ಉಪವನವನ್ನು ಸೇರಿ ಅಲ್ಲಿ ಅವನನ್ನು ಇಳಿಸಿತು. ಜನಕನು ತನಗೊದವಿದ ವಿಪತ್ತಿಗೆ ವ್ಯಸನ ಪಟ್ಟು ಆ ಉದ್ಯಾನದ ಸೊಬಗನ್ನು ನೋಡುತ್ತ ಸಂಚರಿಸುತ್ತಿರುವಲ್ಲಿ ಅಲ್ಲಿಯೊಂದು ಜಿನಮಂದಿರವು ಕಾಣಿಸಲು ಅದನ್ನು ಪ್ರದಕ್ಷಿಣೆಮಾಡಿ ಭಕ್ತಿಯಿಂದ ಒಳಹೊಕ್ಕನು.


ಆಶ್ವಾಸ ೫ ಸೀತಾಸ್ವಯಂವರ

ಜನಕನು ಜಿನೇಶ್ವರನನ್ನು ಹಲವು ಬಗೆಯಲ್ಲಿ ಸ್ತುತಿಸಿ ತನಗೊದವಿದ ಕಷ್ಟ ನನ್ನೆಲ್ಲ ಮರೆತು ಹರುಷದಿಂದಿದ್ದನು. ಇತ್ತ, ಚಪಲವೇಗನು ಕುದರೆಯಾಕಾರ ವನ್ನುಳಿದು ಮುನ್ನಿನಾಕೃತಿಯಲ್ಲಿ ಖಚರೇಂದ್ರನನ್ನು ಕಂಡು ತಾನು ಜನಕನನ್ನು