ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಂಪರಾಮಾಯಣದ ಕಥೆ

9

ಸಮಾಧಾನಪಡಿಸಿದನು. ತರುವಾಯ ಜನಕನು ಸ್ವಯಂವರ ಗೃಹವನ್ನು ನಿರ್ಮಾಣ ಮಾಡಿಸಿ ಸ್ವಯಂವರಕ್ಕೆ ಬರುವಂತೆ ಎಲ್ಲ ರಾಜಕುಮಾರರುಗಳಿಗೂ ಹೇಳಿಕಳು ಹಿಸಲು, ಅನೇಕ ದೇಶಗಳಿಂದ ರಾಜಕುಮಾರರು ಬಂದು ಸ್ವಯಂವರ ಮಂಟಪ ವನ್ನಲಂಕರಿಸಿದರು. ದಶರಥನೂ ರಾಮ ಲಕ್ಷ್ಮಣ ಭರತ ಶತ್ರುಘ್ನರೊಡನೆ ಬಂದು ಸಭೆಯಲ್ಲಿ ಕುಳಿತು ರತ್ನದುಂಗುರದ ನಾಯಕ ಮಣಿಯಂತೆ ಪ್ರಕಾಶಿಸುತ್ತಿದ್ದನು.
ಆ ಹೊತ್ತಿಗೆ ಸೀತೆಯು ಸಕಲಾಲಂಕಾರ ಭೂಷಿತಳಾಗಿ ಸ್ವಯಂವರ ಮಂಟಪವನ್ನು ಹೊಕ್ಕು ಅಲ್ಲಿದ್ದವರನ್ನೆಲ್ಲ ಮೋಹಪಾಶದಲ್ಲಿ ತೊಡರಿಸಿದಳು. ವೃದ್ದ ಕಂಚುಕಿಯೊಬ್ಬಳು ರಾಜಕುಮಾರರೆಲ್ಲರನ್ನೂ ವರ್ಣಿಸಿ ಸೀತೆಗೆ ತೋರಿಸಿದಳು. ಸೀತಾದೇವಿಯ ಮನಸ್ಸು ಮತ್ತಾರಲ್ಲಿಯೂ ನಿಲ್ಲದೆ ರಾಮನಲ್ಲಿಯೇ ನಿಂತಿತು. ಆ ಸಮಯದಲ್ಲಿ ವಿದ್ಯಾಧರ ಮಹತ್ತರನು ಧನುಸ್ಸನ್ನು ಯಥಾವಿಧಿಯಾಗಿ ಪೂಜಿ ಸಲು, ವಜ್ರಾವರ್ತ ಚಾಪವು ಭಯಂಕರವಾದ ಕಾಲಾಹಿಯ ರೂಪವನ್ನು ಪಡೆದು ಭಯವನ್ನುಂಟುಮಾಡಿತು. ಎರಡು ಧನುಸುಗಳೂ ಸಿಡಿಲಂತೆ ಮೊಳಗಿ ನೆಲವನು ಜಡಿದು ರಭಸವಾಡಿದುವು. ಇದನ್ನು ಖೇಚರರು ನೋಡಿ ಸೀತೆಯು ಪ್ರಭಾಮಂಡಲ ನ ವಶಳಾದಳೆಂದು ನಂಬಿದರು. “ ಈ ವಜ್ರಾವರ್ತ ಚಾಪಕ್ಕೆ ಹೆದೆಯನ್ನೇರಿಸಲು ಸಾಮರ್ಥ್ಯವುಳ್ಳಾ ತನು ಜನಕಜೆಗೆ ವರನಾಗುವನು ” ಎಂಬ ಶಬ್ದವು ಆ ಸಭೆಯಲ್ಲಿ ಕೇಳಿಸಲು, ಕೆಲವರು ರಾಜ ಪುತ್ರರು ಬಂದು ಬಿಲ್ಲುಗಳನ್ನು ಕಂಡು ಭಯಪಟ್ಟು, ಹಿಮ್ಮೆಟ್ಟಿದರು. ಆಗ ರಾಮನು ಎದ್ದು ಬಂದು ಆ ವಿಷಮ ಕೋದಂಡವನ್ನು ಹರಳು ಕಡ್ಡಿಯಂತೆ ಬಗೆದು ಕೊಪ್ಪನ್ನು ಎಡಗೈಯಿಂದೊತ್ತಿ ಹೆದೆಯನ್ನೇರಿಸಿ ನೀವಿ ಟಂಕಾರ ಮಾಡಲು ಭೂಮಿಯು ಅದುರಿತು. ಇದನ್ನು ನೋಡಿ ಸೀತೆಗೆ ರೋಮಾಂಚವೂ ಜನಕನಿಗೆ ಸಂತೋಷವೂ ಖೇಚರರಿಗೆ ಖೇದವೂ ರಾಜಕುಮಾರರಿಗೆ ವ್ಯಥೆಯೂ ಲಲನಾ ಜನಕ್ಕೆ ಸಮ್ಮೋಹವೂ ಪುರಜನಕ್ಕಾಶ್ರವೂ ಹುಟ್ಟಿದುವು. ಸೀತೆಯು ರಾಮನ ಕೊರಳಿಗೆ ಹೂಮಾಲೆಯನ್ನು ಹಾಕಿದಳು.
ತರುವಾಯ, ಎಂಟನೆಯ ಕೇಶವನಾದ ಲಕ್ಷ್ಮಣನು ಸಾಗರಾವರ್ತ ಚಾಪಕ್ಕೆ ದಿವ್ಯ ಬಾಣವನ್ನು ಹೂಡಲು ಖೇಚರ ಬಲವು ತಲ್ಲಣಿಸಿ ಹೋಯಿತು. ಆಗ ಚಂದ್ರ ಧ್ವಜನು ರೂಪಿನಲ್ಲಿ ದೇವೇಂದ್ರ ಸ್ತ್ರೀಯರನ್ನು ಜಯಿಸಿದ ತನ್ನ ಹದಿನೆಂಟು ಮಂದಿ / ಹೆಣ್ಣು ಮಕ್ಕಳನ್ನು ಲಕ್ಷ್ಮಣನಿಗೆ ಕಾಣಿಕೆಯಾಗಿತ್ತನು. ದಶರಥನು ಸೀತೆಯನ್ನೂ ರಾಮಲಕ್ಷ್ಮಣರನ್ನೂ ಮುಂದಿಟ್ಟುಕೊಂಡು ಮಿಥಿಲಾಪಟ್ಟಣವನ್ನು ಪ್ರವೇಶಿಸಿದನು. ಜನಕನು ಅತಿ ವೈಭವದಿಂದ ಸೀತೆಯನ್ನು ರಾಮನಿಗೆ ಧಾರೆ ಯೆರೆದು ಕೊಟ್ಟನು.


2