ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೦

ರಾಮಚಂದ್ರಚರಿತಪುರಾಣಂ

ನ್ನ ಪರಾಭವಮಂ ಪಿಂಗಿಸ
ದೆ ಸಿಂಗಿದಂ ರೌದ್ರಭೂತಿಗಿದಿರಾಂಸವರಾರ್ ||೧೧೮||

ಕಂ || ದ್ಯುಮಣಿಗೆ ಕಲೆ ಶರಭ
ಕೈ ಮೃಗೇಂದ್ರಂ ಸೆಡೆವ ಮಾತ್ರೆಯಿಂ ಸೆಡೆದನಿವಂ ||
ನಿಮಗೆ ಸಮರಕ್ಕೆ ಮಿಕ್ಕರ
ಸುಮಕ್ಕಳಂ ರೌದ್ರಭೂತಿ ಲೆಕ್ಕಂಗೊಳ್ಳ೦|| ೧೧೯ ||

ಜ್ಯಾ ತಾಡನ ಟಂಕಾರದೆ
ಭೀತಿಯನೀತಂಗೆ ಪಡೆದು ಪುನ ಜರ್ವಿ೦ ||
ಪೋ ತೆಗೆವರೆ ನೀವಲ್ಲದ
ರೀತನಕೈಯೆಂಬ ಜವನ ಬಾಯಿಂದೆನ್ನಂ ||೧೨೦ ||

ಶಾ || ನಿಮ್ಮಿಂದಾದುದು ಬಂಧಮೋಕ್ಷಮೆನಗೀಗಳ್ ವೃತ್ತಿಯೊಳ್ ಜಾತಿಯೊಳ್ |
ನಿಮ್ಮಿಂ ನಿಂದೆನಪಾರ ದುಃಖ ಭರಮಂ ನಿಮ್ಮಿಂದಮಾಂ ನೀಗಿದೆಂ ||
ನಿಮ್ಮ ಕಂಡು ಕೃತಾರ್ಥನಾದೆನಿಳೆಯೊಳ್ ಮುನ್ನಾದರಿನ್ನಪ್ಪವರ್ |
ನಿಮ್ಮನ್ನರ್‌ ಪೆವಿರಾರುದಾತ್ತ ಚರಿತ‌ ದುರ್ವಾರ ಬಾಹಾಬಲರ್ || ೧೨೧ ||

ಎಂದು ಬಿನ್ನವಿಸಿ ನೀವೆನ್ನ ಪುರಾಕೃತ ಪುಣ್ಯಮ ರೂಪುಗೊಂಡು ಬರ್ಪಂತೆ
ಬಂದಿರೇನಿಮಿತ್ತ ಮೆನಗಿನಿವಿರಿದುಪಕಾರಮನೊಡರ್ಚಿದಿರೆಂಬುದುಂ, ಲಕ್ಷ್ಮಣನದೆಲ್ಲ
ಮಂ ನಿನ್ನ ಪೋಲಿ ಪೋಗಲೊಡಂ ನೀನೆತಿಳಿದಪ್ಪೆಯೆಂದು ರೌದ್ರಭೂತಿಯಂ
ನೋಡಿ ವಾಲಖಿಲ್ಯನಂ ಮುಂದಿಟ್ಟು ಯು ಪೊಲೀಲಂ ಪುಗಿಸಿ ನೀನೀತನ ಪೇಟ್ಟುದಂ
ಗೆಲ್ಲು ಸುಖದಿನಿರಲ್ಲದೊಡೆ ಕಡುಮುಳಿವೆನೆಂದು ನಿಯಮಿಸಿ ಕಲಿಸುವುದು೦,
ರೌದ್ರಭೂತಿ ಮಹಾವಿಭೂತಿಯಿಂ ಪೊಲೀಲಂ ಪುಗಿಸಿ ವಾಲಖಿಲ್ಯಂ ರಾಮಲಕ್ಷ
ಣರ ಸಾಹಸಮಂ ಸನಾಭಿಜನ ಪರಿಜನ ಪುರಜನಕ್ಕೆ ಸಹಸ್ರಮುಖದಿಂ ಸ್ತುತಿಯಿ
ಸುತ್ತುಂ ಶುಭಮುಹೂರ್ತದೊಳ್ ಲಕ್ಷಣಕುಮಾರ೦ಗೆ ನಿಜಕನ್ನೆಯೋಳ್ ಮಹೋ
ತ್ಸಾಹದಿಂ ವಿವಾಹಮನೊಡರ್ಚಿ ಸುಖದಿನರಸುಗೆಯ್ಯುತ್ತಿರ್ದನನ್ನೆಗಮಿತ್ರ ರಾಮ
ಲಕ್ಷ್ಮಣರ್ ದಕ್ಷಿಣಾಭಿಮುಖರಾಗಿ ವಿಪಿನದೊಳಗನೆ ನಡೆಯೆ ನಡೆಯೆ-

ಮ ॥ ಭ್ರಮಿತಾಷ್ಟಾ ಪದಮುಗ್ರ ಖಡ್ಗ ಮೃಗ ಸಂಛನ್ನಂ ಜರದ್ದಂದಶೂ |
ಕ ಮುಖ ಶ್ವಾಸ ವಿಷಾಗ್ನಿ ದಗ್ಗ ವಿಪಿನಂ ಮತ್ತೇಭ ವಿಕ್ರೀಡಿತಂ ||
ತಮದೊಡ್ಡಂಬಿನೆಗಂ ಕಟಿಂಗಿ ನಭಮಂ ನುಂಗಿತ್ತು ಪಾಪರ್ದ್ಧಿ ಸಂ |
ಭ್ರಮ ಕೋಲಾಹಲ ಲುಬ್ಧಕಂ ಕಲುಷಿತಾಂತಸ್ಸಿಂಧು ವಿಂಧ್ಯಾಚಲಂ ||೧೨೨||