ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಪ್ತಮಾಶ್ವಾಸಂ

೧೭೯

ಕ೦ || ಇಂದೊವರೆನಿಸಿದ ತನಿರಸ
ದಿಂದೊದವಿದ ನೀಲ ಪಾಟಲಚ್ಛವಿಯಿಂ ನು ||
ಣ್ಣಿಂದೆಸೆವರನೇರಿಲ ಪ
ಣ್ಣಂದರಗಿಳಿಗಾವುದೊಲವನೇಂ ತೊಲಗಿಸಿತೋ ||೧೫೫ ||

ಶಾ || ಮಾಕಂದಂ ಫಲಹೀನವಾದ ಪದದೊಳ್ ಜ೦ಬೂರಸಾಸ್ವಾದನ |
ಸ್ವೀಕಾರೋತ್ಸವದಿಂದದ ಮಆರೆದು ಕೀರಂ ಪ್ರೌಢಿಯಂ ತಾಳಿದ |
ತೇಕ ಗ್ರಾಹಿ ಕನಲ್ಲು ಚೂತ ಕಳಿಕಾಸ್ವಾದ ವ್ಯವಚ್ಛೇದದಿ೦ |
ಮೂಕೀಭಾವಮನಸ್ಸು ಕೆಯ್ಯುದು ವಿವೇಕ ವ್ಯಾಕುಲಂ ಕೋಕಿಲಂ || ೧೫೬ ||

ಮ || ಸ್ತ|| ಪಸುರ್ವುಲ್ಲಂ ಮೇದು ಸಂದೊಂದೆಡೆಯೊಳನೊಡಲಿಂಬಿಲ್ಲಿನಲ್ ಕೊಚ್ಚಿ ಕೆಚ್ಚಲ್
ಕುಸಿವನ್ನ ಬೀಗಿ ಪಾಲಂಬಿ ಜಿವಿಡೆ ಮೊಲೆಯಿಂ ವತ್ಸ ಪೀತಾವಶೇಷಂ ||
ಪೊಸಗಾರೊಳ್ತಾರಲೊಳ್ ಕಣ್ಣರೆಮುಗಿದಿರೆ ಸೃಕ್ವ೦ಗಳಿ೦ ಸೂಸೆ ಫೇನ |
ಪ್ರಸರಂ ಮೆಲ್ಗೊತ್ತು ತುಂ ನಿಂದುದು ವನಮಹಿಷಿ ವೃಂದಮಾನಂದದಿಂದಂ ||

ಕ್ರಂ || ಸುರಿವ ಮಳೆಗಳ್ಳಿ ಗಿರಿ ಕಂ
ದರದೊಳ್ ಮಡಗಿಟ್ಟ ತಮ್ಮ ಶಾಬ ಕದಂಬ ||
ಕರೆಗರ್ಚಿ ಹರಿತ ದೂರ್ವಾ೦
ಕುರಮಂ ಕೊಂಡುಯು ದಂದು ಹರಿಣೀಯಧಂ || ೧೫೮ ||

ಭೋರೆಂದೆಂಗುವ ಜಲಧರ
ಧಾರಾ ಪುಷ್ಕರದಿನಾತ್ಮಕರ ಪುಷ್ಕರನಂ ||
ಪೂರಿಸಿ ಸಿಂಪಿಣಿಯಂ ಕಾಂ
ತಾರದೊಳಾಡಿದುವು ಕರಿಗಳುಂ ಕರಿಣಿಗಳುಂ || ೧೫೯ ||

ಮಾರಂ ಬರಯಿಗೊಡರ್ಚಿದ
ಮಾರಣ ಹೋಮಾಗ್ನಿ ಧೂಮ ಪಟಲಂಗಳವೋಲ್ ||
ಕಾರ ಮುಗಿಲ್ ನೆಗೆದುವು ರತಿ
ನೀರೆಳೆದೋವಿದ ತಮಾಲ ಷಂಡಂಗಳವೋಲ್ || ೧೬೦ ||

ಪೋಗಿ೦ ಪೋಗಿ೦ ಮೊಲ್ಲೆಯ
ಪೂಗಣೆದೊಟ್ಟಂ ಮನೋಭವಂ ಬರಯಿಗಳೊಂ ||
ದಾಗಿರಿಮೆಂದೊದಲುವವೋಲ್
ಸೋಗೆಗಳ ಕೆದ ಸೋಗೆ ಕೇಗಿದುವಾಗಳ್ ||೧೬೧||


1. ಈ೦ದೂವ. ಚ.