ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ارد ರಾಮಚಂದ್ರ ಚರಿತಪುರಾಣಂ ಕಂ || ಒಡನೊಡನೆ ಶೋಕ ರಸಮು೦ ಕಡುಮುಳಿಸು೦ ತಿಣ್ಣಮಾಗೆ ಖೇಚರಿ ಮೊಗಂ | ಸಿಡಿಲಂ ಕೆದಕುವ ಕಲ್ಪದ ಕಡೆಗಾಲದ ಕೆಂಡವತೆಯ ಮುಗಿಲವೊಲಿರ್ದಳ್ | ೩೨ || ರೋದನದಿಂ ಸುತನ ಶಿರ ಶ್ರೇದನದಲಿಲಾ ಅದಾಲಗುಂ ರಿಪು ರುಧಿರಾ || ಸ್ವಾದನದಿನೆಂದು ವಿಲಯೋ ತ್ಪಾದನ ಭೈರವಿಯ ಮಸಕನಂ ಕೈಕೊಂಡಲ್ || ೩೩ || ಅಂತು ಮುಳಿದು ಪಜ್ಜೆವಿಡಿದು ನಡೆದು ರಾಮಲಕ್ಷ್ಮಣರ೦ ಕಂಡು ಚ || ಬಗೆವವರಾರಿದಂ ಖಚರ ಕಾಮಿನಿ ಪುತ್ರ ವಿಯೋಗ ವೇಗಮಂ | ಬಗೆಯದೆ ಕಂದನಂ ಬ ಅದೆ ಕೊ೦ದವನಂ ಕೊಲಲೆಂದು ಪೂಣ್ಣು ದಂ || ಬಗೆಯದೆ ನೋಡಿ ಲಕ್ಷ್ಮಣನ ಗಾಡಿಗೆ ಸೋಲೊಡಗೂಡುವಾಸೆಯಂ 1 ಬಗೆದಳದಂತೆ ದಲ್ ಬಗೆವರೇ ವಿಷಯಾಸವ ಮತ್ತರೇನುಮಂ || ೩೪ || ಅಂತು ಕಂತು ಸಂತಾಪದಿನಾವರ್ತನ ಪರಿವರ್ತನಂ ಬಂದು { ೩೫ || ಕಂ || ರೂಪ ಪರಾವರ್ತನ ವಿ ದ್ಯಾ ಪರಿಣತಿಯಿಂ ವಿಯಚ್ಚರಾಂಗನೆ ಕನ್ಯಾ || ರೂಪನನೇಂ ತಳೆದಳೊ ತಾ ರಾಪತಿ ತಾರುಣ್ಯ ಲಕ್ಷ್ಮೀಯಂ ತಾಳಿದವೋಲ್ ನನೆಗಣೆಯಧಿದೇವತೆಯೆಂ ಬಿನೆಗಂ ಸಾರ್ತ೦ದು ಕೃತಕ ಶೋಕ ರಸಾಲಂ || ಬಿನಿ ನೆಲೆಸಳೊಳಮರ್ದಿನ ಪನಿ ಬಂದಪುದೆನಿಸಿ ಕಣ್ಣ ನೀರಂ ತಂದಳ್ ಆ ರಮಣಿ ಕೃತಕ ಶೋಕಾ ಸಾರದ ಪೊನಲೊಳಗೆ ಬೆಂಡು ನೆಗೆದಿರ್ದುಮದೇಂ || ರಾರಾಜಿಸಲಾರ್ತಳೋ ತಿಳಿ ನೀರೊಳಗಣ ಚ೦ದ್ರ ಕಲೆಯ ನೆಲಲೆಂಬಿನೆಗಂ || ೩೬ || ೩೭ || 1, ದcತನ೮, ಚ,