ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

18

ಪ೦ಪರಾಮಾಯಣದ ಕಥೆ

ಅಲ್ಲಿಂದ ರಾಮಲಕ್ಷ್ಮಣರು ಸೀತೆಯೊಡನೆ ದಕ್ಷಿಣಾಭಿಮುಖವಾಗಿ ಹೊರಟು ವಿಂಧ್ಯಾಚಲದ ಬಳಿಗೆ ಬಂದರು. ಆ ವಿಂಧ್ಯಾ ಟಿವಿಯಲ್ಲಿದ್ದ ಕ್ರೀಡಾಪೂತನೆಂಬ ಯಕ್ಷರಾಜನು ಇವರ ಪ್ರಭಾವವನ್ನರಿತು ಇವರಿಗಾಗಿ ಆ ಪ್ರದೇಶದಲ್ಲಿ ಅಳಕಾ ಪುರಕ್ಕೆ ಸಮನಾದ ಪಟ್ಟಣವೊಂದನ್ನು ಕೂಡಲೆ ನಿರ್ಮಾಣಮಾಡಿ ತನ್ನ ಪರಿ ವಾರದೊಡನೆ ರಾಮಲಕ್ಷ್ಮಣರನ್ನು ಕಂಡು ಪೂಜಿಸಿ, ಮಳೆಗಾಲವು ಸವಿಾಪಿಸಿ ದುದರಿಂದ ತಾನು ನಿರ್ಮಾಣಮಾಡಿರುವ ಪಟ್ಟಣದಲ್ಲಿ ಮಳೆಗಾಲ ಕಳೆಯುವ ವರೆಗೂ ವಾಸವಾಗಿರಬೇಕೆಂದು ಪ್ರಾರ್ಥಿಸಿ ರಾಮನಿಗೆ ಆ ರಾಜ್ಯಾಭಿಷೇಕವನ್ನು ಮಾಡಿದನು. ಸೀತಾ ರಾಮ ಲಕ್ಷ್ಮಣರು ಆ ಪಟ್ಟಣದಲ್ಲಿದ್ದು ಮಳೆಗಾಲವನ್ನು ಕಳೆಯಲು, ಶರತ್ಕಾಲವು ಬ೦ದೊದಗಿತು.


ಆಶ್ವಾಸ ೮- ಚಾರಣಯುಗಳ ದರ್ಶನ
ರಾಮ ಲಕ್ಷ್ಮಣ ಸೀತಾದೇವಿಯರು ಯಕ್ಷನಿರಿತವಾದ ಪುರದಿಂದ ಹೊರಡುವಾಗ ಯಕ್ಷನು ಅವರಿಗೆ ಅಮೂಲ್ಯವಾದ ಆಭರಣಗಳನ್ನು ಕೊಟ್ಟು ಓಲಗಿಸಿ, ಎಡರೊದವಿದಾಗ ತನ್ನನ್ನು ನೆನೆಯುವಂತೆ ಹೇಳಿ, ಆ ಪುರವನ್ನ ದೃಶ್ಯಮಾಡಿ ತನ್ನರಮನೆಗೆ ಹೋದನು. ರಾಮಲಕ್ಷ್ಮಣರು ನಿತ್ಯ ಪ್ರಯಾಣಗಳಿಂದ ವಿಜಯಪುರ ವೆಂಬ ಸ್ಥಳಕ್ಕೆ ಬಂದು ಅಲ್ಲಿಯ ಉದ್ಯಾನವನದಲ್ಲಿ ಸೀತೆಯೊಡನೆ ವಿಶ್ರಮಿಸಿ ಕೊಂಡರು. ಆ ಪುರದರಸನ ಮಗಳಾದ ವನಮಾಲೆಯು ಹಿಂದೆ ಲಕ್ಷಣನ ವರ್ಣನೆಯನ್ನು ಕೇಳಿ ಆತನನ್ನಲ್ಲದೆ ಮತ್ತಾರನ್ನೂ ವರಿಸೆನೆಂದು ಶಪಥಮಾಡಿ ಆತನು ದೊರೆಯದುದರಿಂದ ಆ ದಿನ ರಾತ್ರಿ ಅಕಸ್ಮಾತ್ತಾಗಿ ಅದೇ ವನಕ್ಕೆ ಬಂದು ಒಂದು ಬಳ್ಳಿಯನ್ನು ಕೊರಳಿಗೆ ಸುತ್ತಿಕೊಂಡು ಪ್ರಾಣವನ್ನು ಬಿಡಬೇಕೆಂದಿದ್ದಳು. ಆ ಹೊತ್ತಿಗೆ ಸರಿಯಾಗಿ ಲಕ್ಷ್ಮಣನು ಅದೇ ಸ್ಥಳಕ್ಕೆ ಬಂದು ಅದನ್ನು ನೋಡಿ ಆ ಬಾಲೆಯನ್ನು ಬಿಡಿಸಿ ಅವಳನ್ನು ಸೀತಾರಾಮರಿದ್ದೆಡೆಗೆ ಕರೆತಂದನು. ಈ ವಾರ್ತೆಯು ಆ ಪುರದ ದೊರೆಯಾದ ಪೃಥ್ವಿ ಧರನಿಗೆ ತಿಳಿದ ಕೂಡಲೆ ಆತನು ಬಹಳ ಸಂಭ್ರಮ ದಿಂದ ಅಲ್ಲಿಗೆ ಬಂದು ಅವರನ್ನು ಬಹಳ ಮರ್ಯಾದೆಯಿಂದ ತನ್ನರಮನೆಗೆ ಕರೆದುಕೊಂಡು ಹೋಗಿ ಸತ್ಕರಿಸಿ ಶುಭ ಮುಹೂರ್ತದಲ್ಲಿ ತನ್ನ ಮಗಳನ್ನು ಲಕ್ಷ್ಮಣನಿಗೆ ಕೊಟ್ಟು ಮದುವೆಮಾಡಿದನು.
ಈ ಸಮಯದಲ್ಲಿ ನಂದ್ಯಾವರ್ತಪುರದೊಡೆಯನಾದ ಅತಿವೀರನ ದೂತ ನೊಬ್ಬನು ಸೃಥಿಧರನ ಬಳಿಗೆ ಬಂದು, ತನ್ನೊಡೆಯನು ಅನೇಕ ಮಂದಿ ರಾಜ ರೊಡನೆ ಅನೇಕಾಕ್ಷೌಹಿಣೀ ಬಲ ಸಮೇತನಾಗಿ ಭರತನ ಮೇಲೆ ದಂಡೆತ್ತಿ ಹೋಗ ಬೇಕೆಂದಿರುವನೆಂದೂ ಪೃಥಿಧರನೂ ತನ್ನ ಸೈನ್ಯದೊಡನೆ ಆತನನ್ನು ಸೇರ