ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪ ರಾಮಾಯಣದ ಕಥೆ

21

ಪಾಲನೆಗೂ ಶಕ್ತಿಸಂಪತ್ತಿಗೂ ಮೆಚ್ಚಿ, ಆತನು ನೆನೆದಾಗ ಬರುವೆನೆಂದು ವರವನ್ನು ಕೊಟ್ಟು, ತನ್ನ ಲೋಕಕ್ಕೆ ತೆರಳಿದನು. ಇದನ್ನೆಲ್ಲ ತಿಳಿದು ಆ ದೇಶದ ರಾಜನಾದ ಸುಪ್ರಭನು ಅಲ್ಲಿಗೆ ಬಂದು ರಾಮಲಕ್ಷ್ಮಣರನ್ನು ಪೂಜಿಸಿ ಆ ಬೆಟ್ಟದಮೇಲೆ ಅವರಿಗಾಗಿ ಒಂದು ಪಟ್ಟಣವನ್ನು ಕಟ್ಟಿಸಿ ಅಲ್ಲಿ ಅವರನ್ನು ಸೇವಿಸುತ್ತಿದ್ದನು. ಈ ಕಾರಣದಿಂದ ಆ ಬೆಟ್ಟಕ್ಕೆ ರಾಮಗಿರಿಯೆಂಬ ಹೆಸರಾಯ್ತು.
ಅಲ್ಲಿಂದ ಅವರು ದಕ್ಷಿಣಮಾರ್ಗವಾಗಿ ಹೊರಟು ದೊಡ್ಡ ಕಾಡನ್ನು ಹೊಕ್ಕು ಕರ್ಣ ರವೆಯೆಂಬ ತೊರೆಯ ದಡದಲ್ಲಿ ವಿಶ್ರಮಿಸಿಕೊಂಡಿರಲು ಅಲ್ಲಿಗೆ ಸುಗುಪ್ತ ಗುಪ್ತರೆಂಬ ಗಗನ ಚಾರಣದಿಬ್ಬರು ಆಕಾಶದಿಂದಿಳಿದು ಬಂದರು ; ರಾಮನು ಅವರನ್ನು ಕಂಡು ನಮಸ್ಕರಿಸಿ ಭಕ್ತಿಯಿಂದ ಪೂಜಿಸಿದನು.


ಆಶ್ವಾಸ ೯ - ಸೀತಾಪಹರಣ

ರಾಮಲಕ್ಷ್ಮಣರು ಚಾರಣರಿಗೆ ಅತಿಥಿ ಸತ್ಕಾರವನ್ನು ಮಾಡಲು ಅವರು “ ಅಕ್ಷಯ ದಾನಮಸ್ತು” ಎಂದು ಹರಸಿದರು. ಆಗ ಹೂಮಳೆ ಕರೆಯಿತು, ಸುರ ಭೇರೀಧ್ವನಿಯಾಯಿತು, ದೇವತೆಗಳ ಜಯಘೋಷವು ಮೊಳಗಿತು. ರಾಮಾದಿ ಗಳು ಚಾರಣರ ತಪಸ್ವಾಮರ್ಥ್ಯಕ್ಕೆ ಮೆಚ್ಚಿ ಪುಲಕಾಂಕಿತರಾಗಿ ಧರ್ಮ ಕಥಾ ಪ್ರಸಂಗದೊಳಿದ್ದರು. ಆಗ ಅಲ್ಲಿ ಸಾಲವೃಕ್ಷದ ಮೇಲಿದ್ದ ಒ೦ದು ಹದ್ದು ಮುನಿ ದರ್ಶನಮಾತ್ರದಿಂದ ತನ್ನ ಹಿಂದಣ ಜನ್ಮದ ಅರಿವನ್ನು ಪಡೆದು ತನ್ನ ಪಾಪಸಂಚಯ ವನ್ನು ಕಳೆದುಕೊಳ್ಳುವೆನೆಂದಾಲೋಚಿಸಿ ಮುನಿಗಳ ಪಾದೋದಕದಲ್ಲಿ ಹೊರಳಿ ಶಾಂತಚಿತ್ತತೆಯಿಂದಿದ್ದುದನ್ನು ಕಂಡು, ರಾಮನು ಸೀತೆಗೂ ಲಕ್ಷಣನಿಗೂ ಮುನಿ ಗಳ ತಪಸ್ಸಮೃದ್ಧಿಯನ್ನು ವರ್ಣಿಸಿ ಹೇಳಿ, ಮುನಿಗಳಿಗೆ ಕೈ ಮುಗಿದುಕೊಂಡು ಹಿತಾಹಿತ ವಿವೇಕವಿಲ್ಲದ ಪಕ್ಷಿಯು ಈ ರೀತಿಯಾಗಿ ಉಪಶಮ ಹೊಂದಿದುದಕ್ಕೆ ಕಾರಣವೇನೆನ್ನಲು, ಚಾರಣ ಋಷಿಯರು ಅದರ ಜನ್ಮಾಂತರ ವೃತ್ತಾಂತವನ್ನು ತಿಳಿಸಿದರು. ಅದನ್ನು ಕೇಳಿ ಆ ಹದ್ದು ಬಹಳ ಖೇದಗೊಳ್ಳಲು, ತಮ್ಮ ದರುಶನ ವಾದುದರಿಂದ ಅದಕ್ಕೆ ಕರ್ಮಬಂಧವು ಶಿಥಿಲವಾದುದೆಂದರಿಸಿ ಅದಕ್ಕೆ ಅಣುವ್ರತ ವನ್ನು ಕೊಟ್ಟು ರಾಮಲಕ್ಷ್ಮಣರನ್ನೂ ಸೀತೆಯನ್ನೂ ಹರಸಿ ಗಗನಚಾರಣರು ಹೊರಟು ಹೋದರು. ಆಗ ಸೀತೆಯು ಆ ಹದ್ದನ್ನು ತನ್ನ ಕಂದನೆಂದು ಹೇಳಿ ಅದಕ್ಕೆ ತನ್ನ ಒಡವೆಗಳನ್ನಿಡಲು ಅವುಗಳ ಕಾಂತಿ ಲೇಖೆಯು ಜಡೆಗೊಂಡು ಹರಿದು, ಕವಲಾಗಿ ಕಣ್ಣುಗಳನ್ನರಳಿಸಿತು. ಈ ಕಾರಣದಿಂದ ರಘುರಾಮನು ಅದಕ್ಕೆ ಜಟಾಯುವೆಂಬ ಹೆಸರನ್ನಿತ್ತನು.