ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

GsY ರಾಮಚಂದ್ರ ಚರಿತ ಪುರಾಣ ೦ ಅಂತು ರತ್ನ ಶ್ರವಂ ಶುಭಸ್ವಪ್ನ ಫಲನಿರೂಪಣಂ ಮಾಲ್ಪುದುಮಾ ನಿತಂಬಿನಿ ನಿರವಧಿ ಪ್ರಮೋದಮಂ ತಳೆದು ಯಥಾಕ್ರಮದಿನನುದಿನಂ ಗರ್ಭ೦ ಬಳೆಯೆ ಮಳೆಯ ಕಂ | ಅಲಸುವುದಿಲ್ಲಾ ಗುಳಿಕೆಯ ಪೊಲಸಿಲ್ಲ ಬಲ್ವುದಿಲ್ಲ ಕೃಶತೆಯ ದೆಸೆಯಿ | ಲ್ಲಲಘುಪರಾಕ್ರಮಿ ಬಸಿಜಿ ನೆಲಸಿದ ಮೆಯ್ಯಲಿ ತನೂಜನೆಂದ೨ ಪುನವೋಲ್ ! 11 ೧೪೧ || ಸ೦ಕಾರ ಪೂರ್ವಕಂ ಕ ಣ್ಣಂ ಕೆಚ್ಚನೆ ಗೆಯು ದೆಸೆಗಳಂ ನೋ ಮು | ತಂ ಕೂರಸಿಯೊಳ್ ನಿಜಮುಖ ಪಂಕಜಮಂ ಸುತನ ದರ್ಶನಂ ಸೂಚಿಸಿಲ್ _11 ೧೪೨ || ಭರತ ಖಂಡ ಮಂಡಲ ಪರಿರಕ್ಷಣ ದಕ್ಷನೀ ತನೂಭವನೆ೦ಬೀ !! ಪರಮೋತ್ಸವಮಂ ಪೇಳ್ವಿಂ ತಿರೆ ಪುರದೊಳ್ ಕುಸುಮವೃಷ್ಟಿ ಕಳೆದುದು ನಿಚ್ಚಂ !! (೪೩ | ಚ || ರಣ ರಸಿಕಂ ಜಗದ್ವಿ ಜಯಿ ಬೇಚರ ಕಾಂತೆಯ ಗರ್ಭದರ್ಭಕಂ | ರಣದೊಳನೇಕ ವೈರಿನ್ಸಪರಂ ತವ ಕೊಂದು ತದೀಯ ಮಾಂಸದಿ೦ || ತಣಿಪುಗುಮೆಮ್ಮನೆಂದು ಪರಮೋತೃವದಿಂ ಸಜಿಗುಟ್ಟೆ ಬಿಚ್ಚತಂ | ಕುಣಿದುವು ಭೂತಕೋಟ ಗಗನೇಚರ ವಲ್ಲಭ ರಾಜಧಾನಿಯೊಳ್ || ೧೪೪ || ಇ೦ತಿವಟಿ ತೋರ್ಕೆಯಿಂ ಗರ್ಭದ ರ್ಭಕನಳುರ್ಕೆಯುಮದಟುಮಖಿಲ ಜನ ಪ್ರತೀತನಾಗೆ ನವನಾಸಂ ನೆಲ್ಲಿಯೆ ಕೂಸಂ ಪೆತ್ತು ದಶಮ ದಿನದೊಳ್ ಭೀಮ ನೆಂಬ ರಾಕ್ಷಸಂ ಕೊಟ್ಟ ನವ ಮುಖ ರತ್ನ ಭೂಷಣದ ಮಾಣಿಕಂಗಳೊಳಾತನ ಮುಖಂ ಪ್ರತಿಬಿಂಬಿಸೆ ದಶಮುಖನೆಂದು ಹೆಸರನ್ನಿಟ್ಟು ಮತ್ತು ಭಾನುಕರ್ಣನುಂ ಚಂದ್ರನಖಿಯುಂ ವಿಭೀಷಣನುವೆಂಬ ಮಕ್ಕಳನನುಕ್ರಮದಿಂ ಪೆತ್ತೊಡವರ್ ಬಳೆದು ಶೈಶವವನತಿ ಕ್ರಮಿಸಿ ಪ್ರಭು ಮಂತ್ರೋತ್ಸಾಹ ಶಕ್ತಿ ತ್ರಯಮೆ ಮೂರ್ತಿಗೊಂಡಂತೆ ಮೂವರುಮಖಿಲಶಾಸ್ತ್ರ 'ಪಾರಾವಾರ ಪಾರಗರೊಂದುದೆವಸಮಾಸ್ಟಾಯಿಕಾ ಮಧ್ಯ ನಾಯಕ ರತ್ನಂಗಳಂತಿರ್ದ ಸಮಯದೊಳ್