ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೦ ರಾಮಚಂದ್ರ ಚರಿತಪುರಾಣಂ ಕಂ ! ಎನೆ ಮುಳಿದಿಂದ್ರಂ ದಶವದ ನನ ಮೇಲೇ ರ್ಪ ಮಸಕದಿಂದೇಲ್ಕು ದುಮಾ || ತನ ಮಂತ್ರಿಮುಖ್ಯರೆಂದರ್ ನಿನಗಿದು ಪದನು ನೆರೆದು ಕಾದುವುದವನೊಳ್ || ೧೬೪ !! ಎಂದವರ್ ನಯಮಂ ನುಡಿಯೆ ಮಾಡೋಡಂಬಟ್ಟು ಯಮ೦ಗೆ ಸುರ ಸಂಗೀತಕ ಪುರಮಂ ಕೊಟ್ಟು ವಿಷಯಾಸಕ್ತ ಚಿತ್ರನಪ್ಪುದ ಅನಂತಃಪುರಮಂ ಪೊಕ್ಕು ಮೆಯ್ಯದಿರ್ದನಿತ್ತ ದಶಮುಖಂ ಋಕ್ಷಜ ಸೂರ್ಯ ಜರ್ಗೆ ಕಿಷ್ಕಂಧಪುರಮಂ ಕೊಟ್ಟು ನಿಜಾನ್ವಯಾಗತಮಪ್ಪ ಲಂಕೆಯಂ ಮಾತಾ ಪಿತೃ ಪಿತಾಮಹ ಸಹಿತಂ ಪುಷ್ಪಕ ವಿಮಾನಾರೂಢನತಿಶಯ ವಿಭೂತಿಯಿಂ ಪೊಕ್ಕು ಸುಖದಿಂದಿರೆ ಕೆಲವು ದಿವಸಕ್ಕೆ ಕಂ | ನಿರುಪಮ ಚರಿತ್ರೆ ಸೂರ- ಜ ನರಸಿಯೆನಿಪ್ಪಿಂದುಮಾಲೆ ಪೆತ್ತ ... ಲೋಕೋ || ತರರೆನಿಪ ವಾಲಿ ಸುಗ್ರೀ ವರುಮಂ ಶ್ರೀ ಪ್ರಭೆಯುಮಂ ಯಥಾಕ್ರಮದಿಂದಂ || ೧೬ ೫ || ಅಲಘು ಭುಜರೆನಿಪ ಖೇಚರ ಕುಲ ತಿಲಕರನಖಿಲ ಶಸ್ತ್ರ ವಿದ್ಯಾವಿದರಂ || ಬಲಯುತರೆನಿಪ್ಪ ಋಕ್ಷಜ | ಕುಲವಧು ನಳ ನೀಳರೆಂಬ ಸುತರಂ ಪಡೆದ || ೧೬೬ || ಅಂತು ಕೆಲವು ಕಾಲ೦ ಪೋಪುದುಂ ವಾಲಿ ಸುಗ್ರೀವರನಧಿರಾಜ ಯುವರಾಜ ಪದವಿಯೊಳ್ ನಿಲಿಸಿ ಸೂರಜಂ ಸಿಹಿತಾಸ್ತವ ಭಟ್ಟಾರಕರ ಸಮಕ್ಷದೊಳ್ ದೀಕ್ಷೆ ಯಂ ಕೈಕೊಂಡು ಮೋಕ್ಷಕ್ಕೆ ಪೋದನಿತ್ತಲ್ - ಕಂ | ಪರಿಣಯನ ನಿಮಿತ್ತಂ ದಶ ಶಿರನತ್ತಲ್ ಪೋಗೆ ತೆಜಪುವಾರ್ದಿದ್ರದಟಂ || ಖರಸಿರದುಯ್ದ೦ ಲಂಕಾ ಪುರದಿಂದ ಚಂದ್ರನಖಿಯನಂಬುಜಮುಖಿಯಂ || ೧೬೭ || ಅಂತು ಕಳ್ಳು ಯು ದಶಾನನ೦ಗಾನತನಲ್ಲದ ಚಂದ್ರೋದರನಂ ಯಮೋದರ ಮಂ ಪುಗಿಸಿ ಪಾತಾಳಲಂಕೆಯಂ ಸ್ವೀಕರಿಸಿ ಸುಖದಿನಿರೆಯಿತ್ತ ದಶಾನನಂ ಮದುವೆನಿಂದು ಮಗುಟ್ಟು ಎಂದು