ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ 11 ೧೮೩ || ಅಂತು ದೀಕ್ಷೆಯಂ ಕೈಕೊಂಡು ಸಹಸ್ರಬಾಹು ಮೋಕ್ಷಕ್ಕೆ ಪೋಪುದುಮಿತ್ತಲ್ ಕಂ|| ಖೇಚರ ವಿಭು ತಾಂ ಮುನ್ನ ಭೂಚರ ಭೂಭುಜರನೆಯೇ ಸಾಧಿಸಿ ಬSಿಯಂ !' ಖೇಚರರಂ ಸಾಧಿಪನೆಂ ಬೀ ಚಿತ್ತ೦ಬತ್ತು ವಿಜಯಯಾತ್ರೆಗೆ ತಳರ್ದ೦ ಅಂತು ನಿಖಿಲ ರಾಜಕಮನೊತ್ತಿ ಕಪ್ಪಂಗೊಳುತ್ತುಂ ಧರಮಂ ಪ್ರತಿಪಾಲಿ ಸುತ್ತು ಬರುತ್ತು ಮಿರೆ ರಾಜಪುರಮನಾಳ್ವ ಮರುತ್ತೆ೦ಬರಸಂ ಜೀವ ವಧೆಗೆ ಜನ್ನ ಮನೊಡರ್ಚಿ ಪೆಜರಾರ್ಗ೦ ಪೊಡೆವಡದೆ ಹಲವು೦ಪ್ರಾಣಿಗಳಂ ಕೊಂದಪ್ಪ ನೆಂದು ಕೇಳಲ್ಲಿಗೆ ಬಂದು ಯಾಗನಿಮಿತ್ತಂ ಯೂಪಸ್ತ೦ಭಂಗಳೊಳಕೆ ಕಟ್ಟಿ ಪಸು ಗಳಂ ಗೋಳಿಡೆ ಕೊಂದು ಬೇಳ್ಳು ದಂ ಕಂಡು ಕೊಂಡಂಗಳನೊಡೆದು ಶಾಲೆಗಳ ಕೆಡಸಿ ಯೂಪಸ್ತ೦ಭಂಗಳಂ ಕಡಿದು ಸಂವರ್ತಕಂ ಮೊದಲಾಗೆ ಸಕಲ ಋತ್ವಿಜರಂ ಬಡಿದು ಕೊಲಲಿರ್ಪ ಸಮಯದೊಳ್ ಮರುತ್ತೆ೦ಬರಸನತಿಸಂಭ್ರಮದಿಂ ಪರಿತಂದು ರಾವಣನ ಕಾಲಮೇಲೆ ಬಿಟ್ಟು ಕ್ಷಮೆಗೊಂಡು ಕಂ || ಕನಕಪ್ರಭಯಂ ನಿರ್ಜಿತ ಕನಕ ಪ್ರಭೆಯ ಮರುನ್ನರೇ೦ದ್ರ೦ ನಿಜನಂ | ದನೆಯಂ ಖಚರ ಕುಲಾನಂ ದನನೆನಿಪ ದಶಾನನಂಗೆ ನಿಯನಿತ್ತಂ || ೧೮೪ || ಅಂತು ಮದುವೆನಿಂದು ಕನಕ ಪ್ರಭೆಗೆ ಪುಟ್ಟ ದ ತನ್ನ ಮಗಳಪ್ಪ ಸ್ವೀಕೃತ ಚಿತ್ತೆಯಂ ಮಧುರೆಯನಾಳ ಹರಿವಂಶನ ಮಗನಪ್ಪ ಮಧುವಿಂಗೆ ಕೊಟ್ಟು ದಶ ವದನಂ ಮಹಾಬಲ ಸಹಿತನಾಗಿ ಹದಿನೆಂಟು ವರ್ಷಕ್ಕೆ ವಿನೀತಾಖಂಡಮಂ ಬಾಯ್ ಳಿಸಿ ಕ್ರಮದಿಂ ಕೈಲಾಸಪರ್ವತವನೆಯ್ದಿ ವಾಲಿದೇವರ ಸಾಮರ್ಥ್ಯನಂ ನೆನೆದು ಪೊಗಯಿತ್ತು ಮಾ ನಗದ ನಿತಂಬದೊಳ್ ಬೀಡುಬಿಟ್ಟಿ ರ್ಪುದುಮಿತ್ತಲ್‌ ಕಂ || ಸರಿರಕ್ಷಿಸಿ ದೇವೇಂದ್ರನ ' ಶರಧಿ ಶರಾಸನ ತನುತ್ರ ತತಿಯಂ ನಳಕೂ | ಬರ ದಿಕೃತಿ ದುರ್ಧರ ಭುಜ ಪರಿಘಂ ದುರ್ಲಂಘ್ರ ಪುರದೊಳತಿ ಬಲನಿರ್ದ೦ ಆತ , ರಾವಣಂ ಮೇಲೆತ್ತಿ ಬರ್ಪುದಂ ನಮ್ಮರಸಂಗಅಪೆಂದಟ್ಟಿದ ದೂತನ ವಚನದಿನಿಂದ್ರನದನಅದು || ೧೮೫ || 23