ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೨ ರಾಮಚಂದ್ರಚರಿತಪುರಾಣಂ ಆ ಸಮಯದೊಳಿ೦ದ್ರನ ಮಗನಪ್ಪ ಜಯಂತನನಿಂದ್ರಜಿತುವಾರಂ ಬಾಲೆ ದಂದೀಯೆ ರಾವಣನಭಯ ಘೋಷಣೆಯಂ ಮಾಡಿಸಿ ಮಹಾವಿಭವದಿಂ ಬಂದು ಲಂಕೆಯಂ ಪೊಕ್ಕು ಸುಖದಿನಿರೆ ಕಂ || ಪರಿಜನಮುಮುಪಾಯನಮು೦ ಬೆರಸು ಸಹಸ್ರಾರನಾತ್ಮತನಯನ ಮೋಹಂ || ತರೆ ತನ್ನ ಬಂದಂ ದಶ ಶಿರನಲ್ಲಿಗೆ ಮುಂದುಗಾನೇ ಮೋಹಾಂಧಂ || ೨೧೧ || ಅಂತು ಬಂದು ಲಂಕಾಪುರವಂ ಪುಗುವುದುಮುಚಿತ ಪ್ರತಿಪತ್ತಿಯಿಂ ಕಾಣಿಸಿ ಕೊಂಡು ಸಹಸ್ರಾರನಂ ನಿಜ ಜನಕನಿಂದಧಿಕವಾಗೆ ಮನ್ನಿಸಿ ಮಣಿಮಯಾಸನ ದೊಳಿರಿಸಿ ವಿನಯ ವಿನಮಿತಂ ಬೆಸನಾವುದೆನೆ ಸಹಸ್ರಾರನಿಂತೆಂದಂ ಕಂ !! ನಿನಗೆಡವಿದಿಂದ್ರನಂ ಗೆ ಲ್ಲು ನಿನ್ನ ಭುಜಬಲದ ಮಹಿಮೆಯಂ ಬೀರಿದೆ ಜೀ || ಯೆನಿಸಾತನ ಸೆರೆಯಂ ಬಿ ಟ್ಟು ನಿನ್ನ ತಕ್ಕೂರ್ಮೆ ಬಣ್ಣಿಸಲ್ ಬಾರದೆನಲ್ || ೨೧೨ || ಎನೆ ದಶಾನನಂ ಮಹಾಪ್ರಸಾದನಂತೆಗೆಯೋನೆಂದಿ೦ದ್ರನಂ ಬರಿಸಿ ನಿಷ್ಕಷಾ ಯಂ ನಿನ್ನ ರಾಜ್ಯದೊಳ್ ಸುಖಮಿರೆ೦ದು ಕ೦೨ ಪುವುದುಂ ರಾವಣಂಗೆ ನಿಶ್ಚಲ್ಯ ನಾಗಿ ತನ್ನ ಪೊಲ್ಲೆ ವಂದು ಇಂದುವೆಂಬ ತನ್ನ ಪಿರಿಯಮಗಂಗೆ ರಾಜ್ಯ ಮಂ ಕೊಟ್ಟು ತನ್ನ ಮಗನಪ್ಪ ಜಯಂತನುಂ ತನ್ನ ಲೋಕಪಾಲರುಂ ಬೆರಸು ದೀಕ್ಷೆ ಗೊಂಡು ಮೋಕ್ಷಕ್ಕೆ ಪೋದನಿತ್ತಲಿಂದ್ರನಂ ಗೆಲ್ಲು ವಿಯಚ್ಚರೇ೦ದ್ರ೦ ವರುಣನ ಮೇಲೆ ನಡೆಯಲೆಂದು ಸಮಸ್ತ ಸಾಮಂತರಂ ಬರಿಸಿ 'ಹನುಮರದ್ವೀಪಕ್ಕೆ ದೂತನ ನಟ್ಟುವುದು ಮಾತಂ ಬಂದು ಪ್ರತಿ ಸೂರನುಮಂ ಪವನಂಜಯನುನು ಕಂಡು ನಿಜಾಗಮನ ವೃತ್ತಾಂತವನರಿಪುವುದುಂ ಪವನಂಜಯನಾಂಜನೇಯನಂ ಬರಿಸಿ ಮ। ! ವರುಣಂ ಬಾಯ್ದೆಳನೆಂಬೀ ಮುನಿಸನುವಿಸೆ ಮೇಲೆತ್ತಲೆಂದೀಗಳೆಮ್ಮಂ | ಬರವೇಂ ದಾನವೇಂದ್ರಂ ತಡೆವುದು ಪದನಿಪುಗೊಳ್ ರಾಜ್ಯ ರಕ್ಷಾ ಭರಮಂ ನೀನೆಂಬುದುಂ ಮಾರುತಿ ಮುಕುಳಿತ ಹಸ್ತಾಂಬುಜಂ ವೀರಲಕ್ಷ್ಮಿ ಪರಿರಂಭೋತ್ಸಾಹದಿಂದಾ ಬೆಸನನತಿ ಬಳಂ ತಂದೆಯಂ ಬೇಡಿಕೊಂಡಂ||೨೧೩ ಅ೦ತು ಬೆಸನಂ ಬೇಡಿಕೊಂಡು ವಿಮಾನಾರೂಢನಸಂಖ್ಯಾತ ಬಲಸಮೇತಂ ಸಮುದ್ರಮ, ದ್ವೀಪಂಗಳುಮಂ ಪೊಅಳುವನಭೀಕ್ಷಿಸುತ್ತುಂ ಬರ್ಸ ಸಮಯ ದೊಳ್ ರಾವಣಂ ಗಗನ ಮಂಡಲದೊಳಿರ್ದು ಹನುಮನ ಒರವಂ ಕಂಡು ಹನುರುಹದ್ವೀಪಕ್ಕೆ ಕ ಸಿ. - - - - - - - - - - - - - - - - - - - - - - 1,