ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

26

ಪ೦ಪ ರಾಮಾಯಣದ ಕಥೆ

ವಿರಾಧಿತನು ರಾಮಲಕ್ಷ್ಮಣರನ್ನು ಪಾತಾಳಲಂಕೆಗೆ ಕರೆದುಕೊಂಡು ಹೋಗಿ, ಸೀತೆಯ ಅಣ್ಣನಾದ ಪ್ರಭಾಮಂಡಲನನ್ನು ಕರೆಯಿಸುವೆನೆಂದೂ ತರುವಾಯ ಮುಂದಣ ಕಾರ್ಯವನ್ನು ನೆರವೇರಿಸುವೆನೆಂದೂ ಹೇಳಿದನು.
ರಾವಣನು ಸೀತೆಯನ್ನೆತ್ತಿಕೊಂಡು ಸಮುದ್ರದ ಮೇಲೆ ಹೋಗುತ್ತಿರುವಲ್ಲಿ, ತನ್ನ ವಿಷಯವನ್ನು ಹೇಳಿಕೊಳ್ಳುತ್ತ ಪ್ರಲಾಪಿಸುತ್ತಿರುವ ಸೀತೆಯ ದನಿಯನ್ನು ಅರ್ಕಜಟಿಯ ಮಗನಾದ ರತ್ನ ಜಟಿಯು ಕೇಳಿ ರಾವಣನ ವಿಮಾನವನ್ನಷ್ಟ ಗಟ್ಟಿ ಅವನ ಪಾಪ ಕೃತ್ಯಕ್ಕಾಗಿ ಅವನ ಮರ್ಮೋದ್ಘಾಟನ ಮಾಡಲು, ರಾವ ಣನು ಅವನೊಡನೆ ಕಾದದೆ ಕರುಣಿಸಿ ವಿದ್ಯಾಚ್ಛೇದ ಮಾಡಿದುದರಿ೦ದ ರತ್ನ ಜಟಿಯು ಕಂಬುದ್ವೀಪದಲ್ಲಿ ಬಿದ್ದು ಮೂರ್ಛೆಹೋದನು. ತರುವಾಯ ರಾವಣನು ಲಂಕೆ ಗಭಿಮುಖವಾಗಿ ಹೋಗುತ್ತ ಮೋಹಚೇಷ್ಟೆಗಳನ್ನು ತೋರಿಸಲು, ಸೀತೆಯು ತನ್ನನ್ನು ಮುಟ್ಟಿದರೆ ನಾಲಗೆಯನ್ನು ಕಿತ್ತು ಕೊಂಡು ಸಾಯುವೆನೆಂದು ನುಡಿ ದಳು. ಹಸ್ತ ಪ್ರಹಸ್ತರು ಯುದ್ಧದಲ್ಲಿ ಸೋತು ಓಡಿ ಬಂದು ರಾವಣನನ್ನು ಆಕಾಶದಲ್ಲಿ ಕಂಡು ಜಯಧ್ವನಿ ಮಾಡಲು ಸೀತೆಯು ತನ್ನನ್ನೆತ್ತಿಕೊಂಡು ಬಂದವನು ರಾವಣ ನೆಂದರಿತು ತಾನು ರಾಮನ ಕುಶಲವಾರ್ತೆಯನ್ನು ಕೇಳುವವರೆಗೂ ಊಟ ಮಾಡುವುದಿಲ್ಲವೆಂದು ಶಪಥಮಾಡಿದಳು. ರಾವಣನು ಲಂಕೆಯ ಬಳಿಗೆ ಬಂದು ಗೀರ್ವಾಣ ರಮಣವೆ೦ಬ ತನ್ನ ವಿನೋದ ವನದಲ್ಲಿಯ ರತ್ನಗೃಹದಲ್ಲಿ ಸೀತೆಯನ್ನಿಟ್ಟು ತಾನು ತನ್ನ ಮನೆಗೆ ಹೋದನು. ಆಗ ಖರದೂಷಣರ ಮರಣವಾರ್ತೆಯನ್ನು ಕೇಳಿದ ಚಂದ್ರನಖಿಯು ಅಣ್ಣನ ಬಳಿಗೆ ಮಂಡೋದರಿ ಮೊದಲಾದವರೊಡನೆ ಬಂದು ಬಹಳವಾಗಿ ಅಳಲು, ರಾವಣನು ಖರದೂಷಣರನ್ನು ಕೊಂದವನನ್ನು ತಾನು ಕೊಲ್ಲುವೆನೆಂದು ಹೇಳಿ ಜಿನಾಲಯಗಳಲ್ಲಿ ಮಹಾ ಪೂಜೆಗಳನ್ನು ಮಾಡಿಸಿ, ಮಲಗುವ ಮನೆಯನ್ನು ಹೊಕ್ಕು ಸೀತೆಯ ಮೇಲಣ ಮೋಹದಿಂದ ಮರ ನಾನಸನಂತಿದ್ದನು. ಇದನ್ನು ನೋಡಿ ಮಂಡೋದರಿಯು ಕಾರಣವೇನೆಂದು ಕೇಳಲು, ರಾವಣನು ನಾಚಿಕೆಗೊಂಡು, ಸೀತೆಯನ್ನು ತಂದ ವಿಷಯವನ್ನು ತಿಳಿಸಿ, ಅವಳು ತನ್ನ ವಶವಾಗದಿದ್ದರೆ ತಾನು ಸಾಯುವೆನೆಂದು ಹೇಳಲು ಮಂಡೋದರಿಯು ಭಯ ಗೊಂಡು ರಾವಣನಿಗೆ ಧೈರ್ಯವನ್ನು ಹೇಳಿ ಅ೦ತಃಪುರ ಸ್ತ್ರೀಯರೊಡನೆ ಸೀತೆಯ ಬಳಿಗೆ ಬಂದು ಆಕೆಯ ರೂಪ ಲಾವಣ್ಯಗಳನ್ನು ಹೊಗಳಿ ಆಕೆಗೆ ರಾವಣನೇ ತಕ್ಕ ವರನೆಂದೂ ಅವನೊಡನೆ ಕೂಡಿ ಲ೦ಕೆಯನ್ನಾಳೆಂದೂ ಅನೇಕ ವಿಧವಾಗಿ ಬೋಧಿಸಿದಳು. ಇದನ್ನು ಕೇಳಿ ಜಾನಕಿ ಯು ಕೋಪಗೊಂಡು ಆ ಮಾತುಗಳು ಕುಲಸ್ತೀಯರಾಡತಕ್ಕವಲ್ಲವೆಂದೂ, ಮಂಡೋದರಿಯಂಥವರು ತಮ್ಮ ವಂಶದ ಕೇಡನ್ನೂ ನೋಡದೆ ಸೂರ್ಯವಂಶದ ವನಿತೆಯರಲ್ಲಿ ಈ ರೀತಿಯಾಗಿ ಮಾತನಾಡು ವುದು ಅನುಚಿತವೆಂದೂ ಹೇಳಿದಳು.