ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

32

ಪ೦ಪ ರಾಮಾಯಣದ ಕಥೆ

ಸಹಸ್ರಾಕ್ಷನಿಗೆ ಸಮನೆನಿಸಿ ರಾಜ್ಯಭಾರ ಮಾಡುತ್ತ ಅಮರರಾಕ್ಷಸ ಭಾನು ರಾಕ್ಷಸರೆಂಬಿಬ್ಬರು ಮಕ್ಕಳನ್ನು ಪಡೆದು ಒ೦ದು ದಿನ ಕ್ರೀಡಾವನಕ್ಕೆ ಬಂದು ಮಕ ರಂದದ ಆಸೆಗಾಗಿ ಬಂದು ರಾತ್ರಿಯಲ್ಲಿ ಮುಚ್ಚಿಕೊಂಡ ಕಮಲದಿಂದ ಹೊರಕ್ಕೆ ಹೊರಡಲರಿಯದೆ ಅಲ್ಲಿಯೇ ಸತ್ತ ಭಂಗವೊಂದನ್ನು ನೋಡಿ ಸಂಸಾರ ವೈರಾಗ್ಯ ಪರನಾಗಿ ಶ್ರುತಸಾಗರ ಚಾರಣರನ್ನು ಕಂಡು ತನ್ನ ವಿಭವಕಾರಣವನ್ನು ಕೇಳಲು ಅವರು ಅದನ್ನು ವಿಶದವಾಗಿ ತಿಳಿಸಿದರು. ಇದನ್ನು ಕೇಳಿ ಮಹಾರಾಕ್ಷಸನು ತನ್ನ ಮಗನಾದ ಅಮರರಾಕ್ಷಸನಿಗೆ ಲಂಕೆಯನ್ನು ಕೊಟ್ಟು ತಪಸ್ಸು ಮಾಡಿ ಮುಕ್ತಿ ಯನ್ನು ಪಡೆದನು. ಅಮರರಾಕ್ಷಸನಿಗೂ ಅವನ ತಮ್ಮನಾದ ಭಾನುರಾಕ್ಷಸನಿಗೂ ಹತ್ತು ಹತ್ತು ಮಂದಿ ಗಂಡು ಮಕ್ಕಳು ಹುಟ್ಟಿದರು. ಅವರಿಬ್ಬೊಬ್ಬರನ್ನು ಒಂದೊಂದು ಪಟ್ಟಣಕ್ಕೆ ಅರಸುಮಾಡಿ ಅಣ್ಣ ತಮ್ಮಂದಿರಿಬ್ಬರೂ ವೈರಾಗ್ಯ ಪರ ರಾಗಿ ನಿರ್ವಾಣಕ್ಕೆ ಸಂದರು. ಆ ಸಂತತಿ ಯಲ್ಲಿ ಅನೇಕ ಮಂದಿ ಅರಸುಗಳ ರಾಜ್ಯ ಭಾರವು ಕಳೆದ ಮೇಲೆ ಬಹಳ ತೇಜಸ್ವಿಯಾದ ಘನಪ್ರಭನೆಂಬುವನು ಲಂಕಾ ಪುರಕ್ಕರಸಾದನು. ಅವನ ಮಗನಾದ ಧವಳ ಕೀರ್ತಿಯ ಬಹಳ ಯಶಸ್ವಿಯಾಗಿ ರಾಜ್ಯವನ್ನಾಳುತ್ತಿರುವಲ್ಲಿ ರತ್ನ ಪುರದ ಪೂತರನು ತನ್ನ ಮಗನಾದ ಪುಷೋತ್ತರನಿಗೆ ಮೇಘಪುರದರಸನಾದ ಅತೀ೦ದ್ರನೆಂಬ ವಿಯಚ್ಚರನ ಮಗಳಾದ ದೇವಿಲೆಯನ್ನು ಬೇಡಲು, ಅತೀ೦ದ್ರನು ಅವನಿಗೆ ಮಗಳನ್ನು ಕೊಡದೆ ಧವಳ ಕೀರ್ತಿಗೆ ಕೊಟ್ಟು ಮದುವೆ ಮಾಡಿದನು.
ಅತೀಂದ್ರನ ಮಗನಾದ ಶ್ರೀಕಂಠಕುಮಾರನು ಒಂದು ದಿನ ಜಿನವಂದನಾ ನಿಮಿತ್ತವಾಗಿ ಮಂದರ ಕಂದರಕ್ಕೆ ಹೋಗಿ ರತ್ನ ಪುರದಮೇಲೆ ಮೇಘಪುರಕ್ಕೆ ಬರುತ್ತಿರುವ ಸಮಯದಲ್ಲಿ ಪುಷೋತ್ತರನ ತಂಗಿಯಾದ ಪದ್ಯೋತ್ತರೆಯು ರಾಣಿವಾಸದಲ್ಲಿ ಸುಸ್ವರದಿಂದ ಹಾಡುತ್ತಿರುವುದನ್ನು ಕೇಳಿ ಮೋಹ ಪರವಶನಾಗಿ, ಗಾನಕ್ಕೆ ಸೋತುಬರುವ ಜಿ೦ಕೆಯಂತೆ, ಅಲ್ಲಿಗೆ ಬರಲು ಕನ್ನೆಯು ಅವನನ್ನು ನೋಡಿ ಮೋಹಿಸಿದಳು. ಹೀಗೆ ತನ್ನ ವಶವಾದ ಕನ್ನೆಯನ್ನು ಶ್ರೀಕಂಠಕುಮಾರನು ಲಂಕೆಗೆತ್ತಿಕೊಂಡು ಹೋಗಿ ಧವಳ ಕೀರ್ತಿಯ ಬಳಿಯಲ್ಲಿರಲು ಪುಷ್ಟೋತ್ತರನು ಅದನ್ನು ತಿಳಿದು ತನಗೆ ಮಗಳನ್ನು ಕೊಡದೆ ಹೋದುದಕ್ಕೂ ಕುಲಾಚಾರ ವನ್ನು ಬಗೆಯದೆ ಈ ರೀತಿಯಾಗಿ ತನ್ನ ತಂಗಿಯನ್ನು ಅಪಹರಿಸಿದುದಕ್ಕೂ ರೋಷಾವಿಷ್ಟನಾಗಿ ಲ೦ಕೆಯ ಮೇಲೆ ದಂಡೆತ್ತಿ ಬ೦ದನು. ಧವಳಕೀರ್ತಿಯು ಸಾಮೋ ಪಾಯವನ್ನು ಮಾಡಲೆಳಸಿ ತನ್ನ ಮಂತ್ರಿಗಳನ್ನು ಆತನ ಬಳಿಗೆ ಕಳುಹಿಸಿ ಆತನ ತಂಗಿಯನ್ನು ತನ್ನ ಮಗನಿಗೆ ಕೊಟ್ಟು ಮದುವೆ ಮಾಡಬೇಕೆಂದು ಕೇಳಿಕೊಂಡನು. ಪುಷೋತ್ತರನು ಅದಕ್ಕೊಪ್ಪಿ ಶುಭ ಮುಹೂರ್ತದಲ್ಲಿ ಪದ್ಯೋತ್ತರೆಯನ್ನು ಶ್ರೀಕಂಠ ನಿಗೆ ಮದುವೆಮಾಡಿಕೊಟ್ಟು ತನಗೆ ಸವಿಾಪವಾಗಿರುವ ಅನೇಕ ದ್ವೀಪ ಮುಖ್ಯ