ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦೩ ತ್ರಯೋದಶಾಶ್ವಾಸಂ ಸೆಳತಿ ಸುಗ್ರೀವನುಂ ಪ್ರಭಾಮಂಡಲನುಮಿದಿರ್ಚಲ್ ನೆನೆದು ನಿಲ್ಪುದುವವರ ನಿಂದ್ರಜಿತ್ಸುಮಾರನಿಂತೆಂದಂ ಕಂ । ಕಪಿ ವಂಶಕ್ಕೆ ನಿಸರ್ಗ೦ ಚಪಲತೆ ಖಚರೇಂದ್ರನಪ್ಪ ದಶಕಂಠನ ಪಾ | ದ ಯೋಜ ಸೇವೆಯಂ ಬಿ ಟ್ಟು ಪಶುವೆ ನೀ೦ ಭೂಚರಂಗೆ ಕಿಂಕರನಾದ್ರೆ !! ೧೩೭ || ನಿನ್ನಿಂಬನಜಯದಾಜಿಯೊ ಳೆನ್ನೊಡನೆ ಪೊಣರ್ಕೆಗೆಂದು ಬ೦ದಪೆ ಮುಳಿದಾ೦ || ನಿನ್ನಂ ಕೊಲ್ವೆಡೆಯೊಳ್ ಕಾ ನನ್ನ‌ ಕೈಕೊಂಡು ಭೂಮಿ ಗೋಚರರೊಳರೇ || ೧೩೮ || ಎನೆ ಮುಳಿದು ಕ೦ 11 ಕಾಳೆಗಳನುಲಿದು ಪೆಂಡಿ ರ್ಗಾಳೆಗಮಂ ಮಾತ್ರೆ ಗಂಡುವಾತುಳ್ಳೋ ಡೆ ಕೂ || ರ್ವಾಳ ಮಸೆದೋರ್ಪುದೆನಗೆ ೦ ದೇಳಿಸಿದಂ ದನುಜತನುಜನಂ ಸುಗ್ರೀವಂ || ೧೩೯ ೧. ಅಂತವರಿರ್ವರುಮೋರೊರ್ವರಂ ಮೂದಲಿಸಿ ಕಾದುತಿರ್ದರನ್ನೆಗಮಿತ್ತಲ್ಕಂ | ಜನಕಾತ್ಮಜನೂ ದಶಮುಖ ತನೂಭವೆಂ ಮೇಘವಾಹನಂ ಬಿಲ್ಗೊಯ್ದು ೦ | ಬಿನ ಮ೦ತೆಯಂ ಲಯಸಮಯದ ಘನಾಘನಂ ಕರೆವ ಮಾತ್ರೆಯಿಂದ ಕರೆದಂ !! ೧೪೦ || ಅವನೆಚ್ಚಂಬುಗಳಂ ಚ೦ ಡವಿಕ್ರಮಂ ಮಂಡಲಾಗ್ರದಿಂ ಖಂಡಿಸಿದc | ಬವರದೊಳಿದಿರಾಂಸವರಾ ರವಾರ ಭುಜವೀರನಂ ಪ್ರಭಾಮಂಡಲನಂ | ೧೪ || ಅಂತು ನಿಜ ನಿಶಾತ ಶರ ಸಂಘಾತಮಂ ಖಂಡಿಸಿ ಮೇಘವಾಹನನನ್ನಿ ಬಾಣ ದಿಂದಿಸುವುದುಮದಂ ಪ್ರಭಾಮಂಡಲಂ ವರುಣಾಸ್ತ್ರದಿಂ ಕಡಿಯೆ ಕಡುಮುಳಿದು 1. ಗಿ೦ತು. ಗ, ಘ.