ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ s || ೧ || ಕಂ| ಶ್ರೀರಮಣನಿಷ್ಟಸಿದ್ದಿಗೆ ಚಾರಣ ಮುನಿ ಪಾದ ಕಲ್ಪ ಮಾದಪಮೆ ವಲಂ || ಕಾರಣವಾದುದೆನುತ್ತುಂ ಚಾರಿತ್ರ ಪವಿತ್ರನೊಸೆದನಭಿನವಪಂಪಂ ಅಲಘು ಮಹಿಮ ಪ್ರಭಾವ ನೆಲೆವೆರ್ಚಿದುದೆಮಗೆ ಯೋಗನಿಷ್ಠಾ ಪರ ನಿ || ಶೃಲರೆನಿಸ ದೇಶ ಭೂಷಣ ಕುಲಭೂಷಣ ದಿವಯೋಗಿ ದರ್ಶನದಿಂದಂ || ೨ || ಎಂದವರಂ ನಿರ್ಭರ ಭಕ್ತಿಯಿಂ ಸ್ತುತಿಗೆಯೇ ಹರ್ಷಭರ ವಿನಮ್ರನಾಗಿ ವರ್ಷ ವರುಣ ಕೃಶಾನು ಬಾಣ೦ಮೊದಲಾ'ಗೆ ಸಲವುಂ ದಿವ್ಯ ಬಾಣಂಗಳುಮಂ ಧವಳಛತ್ರ ಚಾಮರಂಗಳುಮಂ ಸಿಂಹ ಗರುಡಧ್ವಜ೦ಗಳುಮನಭೇದ್ಯ ಕವಚ೦ ಗಳುಮನನರ್ವ್ಯ ರತ್ನಭೂಷಣಂಗಳುಮಂ ರಾಮಲಕ್ಷ್ಮಣರ್ಗೆ ಕೊಟ್ಟು ಚಿಂತಾ ವೇಗಂ ಮನಃಪವನವೇಗದಿಂ ನಿಜ ನಿವಾಸಕ್ಕೆ ಪೋಪುದುಮಿಟ್ಕಲ್ ಕಂ | ಜನ ಧನ್ಮದ ಸಾಮರ್ಥ್ಯದಿ ನಿನಿತು ಮಹಾಮಹಿಮೆ ರಾಮ ಲಕ್ಷ್ಮೀಧರರೊಳ್ || ಜನಿಯಿಸೆ ವಿಸ್ಮಯವಾದುದು ಹನುಮಂತ ಪ್ರಮುಖ ನಿಖಿಲ ವಿದ್ಯಾಧರರೊಳ್ || ೩ || ಅನಂತರಮಾ ಗರುಡವಾಹಿನಿಯ ತನುಪ್ರಭೆ ತಮಮನಭಿಭವಿಸೆ ತತ್ತಕ್ಷ ಪಾತ ಜಾತ ವಾತ ಘಾತದಿಂ ನಾಗಪಾಶ ವಿದ್ಯೆ ಸಡಿಲ್ಲು ಪೋಗೆ ಸುಗ್ರೀವ ಪ್ರಭಾ ಮಂಡಲರಪಗತ ಮೂರ್ಛಾಪ್ರಪಂಚರ್‌ ಪ್ರಸನ್ನ ಮನ‌ ಸಿಂಹ ಗರುಡ ವಾಹನಾ ರೂಢರಾಗಿರ್ದ ರಾಮಲಕ್ಷ್ಮಣರಲ್ಲಿಗೆ ಬಂದವರ ಪುಣ್ಯ ಪ್ರಭಾವಕ್ಕೆ ಸಂತೋಷಂ ಬಟ್ಟು ನಿಮಗೀ ಮಹಾಮಹಿಮೆಯಾದ ವೃತ್ತಾಂತಮಂ ಬೆಸಸಿಮನೆ ಶ್ರೀರಾಮ ದೇವರದೆಲ್ಲಮಂ ನೆರೆಯೆ ಬೆಸಸುತ್ತು ಬೀಡಿಗೆ ಬಿಜಯಂಗೆಯ್ದ೦ದಿನಿರುಳಾ ಮಹೋತ್ಸವ ವ್ಯಾಪಾರದೊಳಿರ್ಪುದುಂ 1. ಗೂಡಯ. ಗ ಘ ಚ.