ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೦ ರಾಮಚಂದ್ರಚರಿತಪುರಾಣಂ ಕಂ ! ಮಧು ಮಧುರೆಯೊಳಿರೆ ಶೂಲಾ ಯುಧಮಾ ಪುರವರದ ಪೂಲ್ವ ನಂದನ ವನದೊಳ್ 1 ವಧುವು ತಾನುಂ ರತಿಸುಖ ಮಧುಸೇವಾ ಮತ್ಯರತ್ತ ಮೆಯ್ಯದಿರ್ದರ್ || ೫೬ || ಎಂದು ಬಿನ್ನವಿಸೆ ಶತ್ರುಘ್ನಂ ಮನದೆ ಕೊಂಡೊಂದು ಲಕ್ಕ ಕುದುರೆವೆರಸು ದಾಟಿಯಿಟ್ಟು ಮಧುವಿರ್ದ ಬನಮಂ ಮುತ್ತಿ ಪೊಜವೋಲಿಳಿದಿರ್ಚಿದರಂ ಪೇಸೇತಿ ಕೊಲ್ಕು ದಂ ಮಧು ಕೇಳು ನನದಿಂ ಪೊಯಮಟ್ಟು ಯುದ್ದಂಗೆಯ ಸಮಯ ದೊಳ್ ಸೇನಾಪತಿ ಕೃತಾಂತ ವಕ್ರಂ ಮಧು ತನೂಭವನಪ್ಪ ಲವಣಾರ್ಣವನ ಜೀವನಮಂ ಬಡಬಾನಲನಂತೆ ತವಿಸಿ ಕೃತಾಂತ ವಕ್ರಕ್ಕೆ ಸೋವತಂಮಾಚ್ಛುದು ಮದಂ ಕಂಡು ಮಧು ಮುಳಿದು ಬಂದು ಶತ್ರುಘ್ನಂ ಕಾದಲೆಯ ರ್ಪುದುಂ ತನ್ನ ಶೂಲಾಯುಧಮತ್ತಲಿರ್ದುದುಮಂ ತನ್ನ ಸುತಂ ಸತ್ತು ದುಮಂ ಬಗೆದು ತನ್ನ ಸಾವಂ ನಿಶ್ಚಯಿಸಿ ಕೈದುವಿಂಗೆ ಕೈಯನುಯ್ಯದೆ ವಿರೋಧಿಬಲದಾಯುಧಕ್ಕೆ ಮೆಯ ನೊಪ್ಪಿಸಿ ತನ್ನ ಸಹಸ್ರ ಕುಂತಲಮಂ ಸಂಚಮುಷ್ಟಿಯಿಂ ಸಅದುಕೊಂಡು ಬಾಹ್ಯಾ ಭ್ಯಂತರ ಪರಿಗ್ರಹಂಗಳಂ ಪರಿತ್ಯಾಗಂಗೆಯು ಮಹಾವ್ರತಮನೇಲಿಸಿಕೊಂಡು ಸಂನ್ಯಸನದಿಂ ಪ್ರಾಣ ಪರಿತ್ಯಾಗಂಗೆಯು ಸನತ್ಕುಮಾರ ಕಲ್ಪಕ್ಕೆ ಸಂದನಿಲ್ ಕಂ | ಪಗೆಯಂ ಸಾಧಿಸಿ ರಿಪು ವನಿ ತೆಗಿತ್ತು ವೈಧವ್ಯ ದೀಕ್ಷೆಯಂ ಶತ್ರುಘ್ನಂ || ಬಗೆದ ಬಗೆ ಕೂಡೆ ಜಯ ಲ ಕೈಗೆ ವಲ್ಲಭನಾಗಿ ಮಧುರೆಯೊಳ್ ಸುಖನಿರ್ದ೦ 11 ೫೦ || ಇತ್ತ ವಿಜಯಾರ್ಧ ಪರ್ವತದ ದಕ್ಷಿಣ ಶ್ರೇಣಿಯ ರತ್ನ ಪುರಮನಾಳ ರತ್ನ ರಥಂಗಂ ಚಂದ್ರಾನನೆಗಂ ಪುಟ್ಟಿದ ಕನ್ಯಾರತ್ನಮಂ ಮನೋರಮೆಯನಾರ್ಗೆ ಕುಡುವ ಮೆಂದು ನಾರದನಂ ಬೆಸಗೊಳ್ಳುದುಂ ತ್ರಿಖಂಡ ಮಂಡಲಾಧಿಪತಿಯಪ್ಪ ಲಕ್ಷ್ಮಿ ಧರಂಗೆ ಕುಡುವುದೆನೆ ರತ್ನರಥನುಮವನ ಮಕ್ಕಳಪ್ಪ ಹರಿಯುಂ ಮನೋವೇಗನುಂ ಮೊದಲಾಗೆಲ್ಲರು ಕೇಳು ಕಲುಷವಶ ಗತರಾಗಿ ಕಂ|| ಕಳೆಯ ಪಗೆಯೊಡನೆ ಪಗೆಯಂ ಬಳೆಯಿ ಪುದಂ ಬಿಟ್ಟು ಕೂಸುಗೊಟ್ಟನುನಯನಂ | ಬಳಯಿಸುವುದೆಂದು ನುಡಿದೀ ಗಜಪಂ ನಮ್ಮಳವನಜಿಯಿ ಡರಿಸಿ ನುಡಿದಂ || ೫೮ ||