ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ರಾಮಚಂದ್ರಚರಿತಪುರಾಣಂ ಅಂತು ಮೂರ್ಛಿತನಾಗಿ ಶೀತಲ ಕ್ರಿಯೆಗಳಿನಂತಾನುಮೆತ್ತನನ್ನೆಗಮಿತ್ತ ವೈದೇಹಿ 'ಪೃಥುಮತಿ ಕಂತಿಯರ ಪಕ್ಕದೆ ತಪಂಗೊಂಡು ಮಹೇಂದ್ರೋದ್ಯಾನ ವನಕ್ಕೆ ಪೋಗಿ ಸಕಲ ಭೂಷಣ ಕೇವಲಿ ಭಟ್ಟಾರಕರ ಸಭೆಯೊಳಿರ್ಪುದುಂ ಕಂ| ಮುಚ್ಚೆದಿಳಿದರಸಿಯೊಳ್ ಬಗೆ ಬೆಚ್ಚಿರೆ ಶೀಲವತಿ ಸೀತೆ ಪೂಣ್ಣು ದನೆಂತುಂ || ಪುಚ್ಚ ಆಯಳೆನ್ನದಲ್ಲಿ ಪಿಂ ಚೆಚ್ಚರಮಾ ಸಭೆಗೆ ರಾಘವಂ ಬಲಸಂದಂ || ೩೫ || ಅ೦ತತಿ ವ್ಯಾಮೋಹದಿಂ ಬಂದು ಸಕಲ ಲೋಕಾಧಿಪರಿಂ ಪರಿವೃತರಾಗಿರ್ದ ಸಕಲಭೂಷಣ ಕೇವಲಿಗಳ ಸಭೆಯನೆಲ್ಲ ಲೊಡಂ ರಾಮನ ಮೋಹನೀಯ ಕಮ್ಮ ಮುಪಶಮಕ್ಕೆ ಸಲ್ಲುದುವಾನೆಯಿಂದಿಳಿದು ಬಂದು ಬಲಗೊಂಡು ಪೊಡೆವಟ್ಟು ಕುಳ್ಳಿರ್ದನಾ ಸಭೆಯೊಳ್ ಸೃಥುಮತಿ ಗಂತಿಯರ ಸಮಕ್ಷದೊಳ್ ದೀಕ್ಷೆಗೊ೦ಡಿರ್ದ ಸೀತಾದೇವಿಯಂ ಕಂಡು ಮ | ತ್ರಿದಶ‌ ಪೂಜಿಸೆ ಮಾನವರ್‌ ಪೊಗತಿ ಶೌಚಾಚಾರಮಂ ದಿವ್ಯದಿಂ| ವಿದಿತಂಮಾಡಿದರಾರ್ ಮಹಾಸತಿಯರಾರ್ ನಿಮ್ಮಂದದಿಂ ಮೋಕ್ಷ ಸಂ || ಪದಮಂ ಮಾಡುವ ದೀಕ್ಷೆಗೊಂಡರೆನುತುಂ ಕೈಕೊಂಡು ಲಕ್ಷ್ಮೀಧರಂ | ಮೊದಲಾಗೆಲ್ಲರುಮಕ್ಕಿ ಜಿಂದೆಆಗಿ ಸೀತಾ ಸಂಸ್ತವಂ ಮಾಡಿದರ್ || ೩೬ 11 ಅಂತು ಗುಣಸ್ತವನಂಗೆಯು ದಿವಿಜ ಸಭೆಯೊಳಿರ್ದು ಧರ್ಮಮಂ ಕೇಳಿ೦ ಬ೨೨ಕ್ಕೆ ವಿಭೀಷಣಂ ಸಕಲಭೂಷಣ ಭಟ್ಟಾರಕರ್ಗೆ ಕರ ಕಮಲಮಂ ಮುಗಿದು ಪೂರ್ವ ಜನ್ಮದೊಳ್ ರಾಮನಾವುದೊಂದು ಪುಣ್ಯ ಮನುಪಾರ್ಜಿಸಿ ಸಕಲ ವಿದ್ಯೆಗಳಂ ಕಲ್ಲು ಮಹಾವಿಭವ ಸಹಿತನಾದಂ ಮತ್ತಂ ಶೌಚಾಚಾರ ಪರಾಯಣನಪ್ಪ ವಿದ್ಯಾ ಧರ ವಲ್ಲಭಂ ರಾವಣನಾವ ಪಾಪಂಗೆಯ್ದನಾಗಿ ಸೀತಾದೇವಿಗೆ ಮರುಳೊ೦ಡು ಪೋದನಾರ್ಗಮಸಾಧ್ಯನುಮಭೇದ್ಯನುಂ ಜಗದ್ವಿಜಯಿಯುವಪ್ಪ ರಾವಣನಂ ಲಕ್ಷಣನಾವುದೊಂದು ಪುಣ್ಯಂಗೆಯ್ದ ನಾಗಿ ಸಂಗ್ರಾಮದೊಳ್ ಕೊಂದು ಭರತ ತ್ರಿಖಂಡ ಮಂಡಲಾಧಿಪತಿಯಾದನದೆಲ್ಲಮಂ ಬೆಸಸಿಮನೆ ಕಂ | ಮದನಫಣಿ ನಿರ್ವಿಕರ ಣ ದಿವ್ಯ ಮಂತ್ರ ಸ್ವನಂ ಜರಾಮರಣ ಶಿಲಾ | ವಿದಳನ ಟಂಕಧ್ವನಿ ಪೊ ದತ್ತು ಕೇವಲಿಯ ಮಧುರ ಗಂಭೀರ ರವಂ 1 ೩೬ 11 1. ಪ್ರ ಮತಿ, ಗ ಘ 2. ದನ್ನ, ಕ, ಖ ಗ ಘ.