ಪುಟ:ರಾಮಚಂದ್ರ ಚರಿತ ಪುರಾಣಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



62

ಪ೦ಪರಾಮಾಯಣದ ಕಥೆ

ಮೊಳಗಿತು, ' ಸುರಗಣವು ಉಪೇಂದ್ರನನ್ನು ಹರಸಿತು, ಜಯಧ್ವಜವೇರಿತು, ನಿಶಾಚರ ಬಲವೋಡಿತು, ವಾನರ ಸೈನ್ಯದಲ್ಲಿ ವಿಜಯಾನಕ ಧ್ವನಿಯುತು.
ಆಗ ವಿಭೀಷಣನು ಭೂಮಿಯ ಮೇಲೆ ಬಿದ್ದಿದ್ದ ತನ್ನ ಅಣ್ಣನ ದೇಹವನ್ನು ನೋಡಿ ಸಹೋದರ ಪ್ರೇಮದಿಂದ ಮೂರ್ಛೆಹೋಗಿ, ಶೀತಲ ಕ್ರಿಯೆಯಿಂ ಹೆಚ್ಚತ್ತು ಬಹಳವಾಗಿ ಅಳುತ್ತಿರಲು ಮಂಡೋದರಿ ಮೊದಲಾದ ನಾಲ್ವತ್ತೆಂಟು ಸಾವಿರ ಮಂದಿ ಅ೦ತಃಪುರ ಸ್ತ್ರೀಯರು ರಾವಣನ ಮರಣವಾರ್ತೆಯನ್ನು ಕೇಳಿ ರಣ ಭೂಮಿಗೆ ಬಂದು ಅವನ ದೇಹವನ್ನು ಕಂಡು ಹಲವು ತೆರನಾಗಿ ಹಂಬಲಿಸುತ್ತ ಅಳತೊಡಗಿದರು. ಅದನ್ನು ನೋಡಿ ರಾಮಸ್ವಾಮಿಯು ಅವರನ್ನು ಕರುಣಿಸಿ ರಾವಣನಿಗೆ ಮರಣವು ಆತನ ದುರ್ವ್ಯಸನದಿಂದಾದುದಲ್ಲದೆ ತಮ್ಮಿಂದಾದುದಲ್ಲ ವೆಂದು ಹೇಳಿ ಯಾರಿಗಾದರೂ ಸಂಸಾರ ಸ್ವರೂಪವು ಅದೇ ರೀತಿಯೆಂದರಿಸಿ ಅವರನ್ನೂ ವಿಭೀಷಣನನ್ನೂ ಸಮಾಧಾನ ಪಡಿಸಿದನು. ತರುವಾಯ ರಾವಣನ ದೇಹ ವನ್ನು ಕರ್ಪೂರಾಗರು ಗೋಶೀರ್ಷ ಚ೦ದನಾದಿಗಳಿಂದ ಯಥಾವಿಧಿಯಾಗಿ ಸಂಸ್ಕರಿಸಿ ಇ೦ದಗಿಮೇಘ ವಾಹನ ಕುಂಭಕರ್ಣ ಮಯ ಮಾರೀಚಾದಿಗಳನ್ನು ಬರಿಸಿ ಸೆರೆಯನ್ನು ಬಿಡಿಸಿ ಅವರ ಶೋಕವನ್ನು ಸಶಮಿಯಿಸಿ ವಿಭೀಷಣನಲ್ಲಿ ಸದ್ಭಾವದಿಂದಿರಿ ರೆಂದು ಬೋಧಿಸಿದನು. ಅದನ್ನು ಕೇಳಿ ಕುಂಭಕರ್ಣಾದಿಗಳು ರಾಮಲಕ್ಷ್ಮಣರ ಯೋಗ್ಯತೆಗೂ ಧೈರಕ್ಕೂ ಪರಾಕ್ರಮಕ್ಕೂ ಮೆಚ್ಚಿ ಹೊಗಳಿ ತಮಗೆ ಸಂಸಾರಸುಖವು ಸಾಕೆ೦ದು ಭೋಗ ನಿರ್ವಿಗಪರರಾಗಿ ನುಡಿದು ರಾಮಲಕ್ಷ್ಮಣರೊಡನೆ ಪದ್ಮ ಸರೋವರದಲ್ಲಿ ಜಲದಾನ ಕ್ರಿಯೆಯನ್ನು ತೀರಿಸಿದರು; ಅಷ್ಟರಲ್ಲಿ ಸಂಜೆಯಾಯಿತು. ಆ ಸಮಯಕ್ಕೆ ಐನೂರು ಮಂದಿ ಮುನಿಗಳೊಡನೆ ಅಪ್ರಮೇಯ ಭಟ್ಟಾರಕರು ಸೂರಪಥದಿಂದ ಬಂದು ಲಂಕೆಯ ನಂದನವನದ ಮಧ್ಯದಲ್ಲಿಳಿದರು. ಅವರ ದರುಶನಕ್ಕಾಗಿ ರಾಮಲಕ್ಷ್ಮಣರು ಇಂದ್ರಜಿ ನೋಘವಾಹನ ಕುಂಭಕರ್ಣಾದಿಗಳೊಡನೆ ಕೂಡಿ ಹೊರಟು ವನಕ್ಕೆ ಬಂದು ಅಪ್ರಮೇಯ ಭಟ್ಟಾರಕರನ್ನು ಭಕ್ತಿಯಿಂದರ್ಚಿಸಿದರು.


ಆಶ್ವಾಸ ೧೫-ಸೀತಾ ಪರಿತ್ಯಾಗ

ರಾಮಚಂದ್ರನು ಅಪ್ರಮೇಯ ಭಟ್ಟಾರಕರನ್ನು ಭಕ್ತಿಯಿಂದ ವಂದಿಸಿ ಸಂಸಾರ ಕ್ಷಯ ಕಾರಣವಾದ ಧರ್ಮವನ್ನೂ ಆಪ್ತ ಗುಣಗಳನ್ನೂ ಜೀವಾದಿ ತತ್ವ ಭೇದಗಳನ್ನೂ ಅವರಿಂದ ತಿಳಿದು ಸಂತೋಷಚಿತ್ತನಾದನು. ಇಂದ್ರಜಿತು ಮೇಘ ವಾಹನ ಕು೦ಭಕರ್ಣ ಮಯ ಮಾರೀ ಚಾದಿಗಳು ತಂತಮ್ಮ ಭವಾಂತರವನ್ನು ಕೇಳಿ ತಿಳಿದುಕೊಂಡು ಅಲ್ಲಿಯೇ ದೀಕ್ಷೆಗೊಂಡರು. ಮಂಡೋದರಿಯು ನಲವ