ಪುಟ:ರಾಮಚಂದ್ರ ಚರಿತ ಪುರಾಣಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

71

ಆಗ ಸುಗ್ರೀವ ಮೊದಲಾದವರು ರಾಮನ ಬಳಿಗೆ ಬಂದು ಸಚ್ಚರಿತೆಯಾದ ಜಾನಕಿಯನ್ನು ಪರದೇಶದಲ್ಲಿ ಬಿಟ್ಟಿರುವುದು ಸರಿಯಲ್ಲವೆಂದೂ ಕೂಡಲೆ ಅಲ್ಲಿಗೆ ಕರೆಯಿಸುವುದೆಂದೂ ಬೇಡಿಕೊಳ್ಳಲು ರಾಮನು ತಾನು ಲೋಕಾಪವಾದ ಭಯ ದಿಂದ ಆಕೆಯನ್ನು ಕಳೆದೆನಲ್ಲದೆ ಅವಗುಣಾರೋಪಣದಿಂದಲ್ಲವೆಂದೂ ಸಚ್ಚರಿತ ದಲ್ಲಿ ಆಕೆಗೆ ಸಮನಾದವರು ಮತ್ತಾರೂ ಇಲ್ಲವೆಂಬ ವಿಷಯವನ್ನು ತಾನು ಅರಿತಿರುವೆನೆಂದೂ ಹೇಳಿ ಆಕೆಯ ಅಪವಾದವನ್ನು ಕಳೆಯುವುದಕ್ಕಾಗಿ, ಎಲ್ಲರೂ ನೋಡುವಂತೆ, ಅಗ್ನಿ ಪ್ರವೇಶ ಪರೀಕ್ಷೆಯನ್ನು ಮಾಡುವುದೆಂದು ತಿಳಿಸಿದನು. ಅದಕ್ಕೆ ಸುಗ್ರೀವಾದಿಗಳು ಒಪ್ಪಿ ಅಪ್ಪಣೆ ಪಡೆದು ಪುಂಡರೀಕಿಣೀಪುರಕ್ಕೆ ಹೋಗಿ ಸೀತಾದೇವಿಯೊಡನೆ ಈ ವಿಷಯವನ್ನು ತಿಳಿಸಲು, ವಿಷಯ ವಿರಕ್ಕೆ ಯಾದ ಸೀತಾ ದೇವಿಯು ತಾನು ಅಗ್ನಿ ಪ್ರವೇಶ ಮಾಡಿ ಶುದ್ದೆಯಾಗಿ ತಪಸ್ಸೆಯಾಗುವೆನೆಂದು ಮನಸ್ಸಿನಲ್ಲಿ ನಿಶ್ಚಯಿಸಿ ವಿಮಾನವನ್ನೇರಿ ಅಯೋಧ್ಯೆಗೆ ಬ೦ದಳು. ಆ ದಿನ ಮಹೇಂದ್ರೋದ್ಯಾನದಲ್ಲಿ ರಾತ್ರಿಯನ್ನು ಕಳೆದು ಮರು ದಿನ ರಾಘವನನ್ನು ಕಂಡು ಅವಿಚಾರದಿಂದ ತನ್ನನ್ನು ಬಿಸುಟು ತನಗೆ ಬಹಳ ನೋವನ್ನುಂಟುಮಾಡಿದರೆಂದು ಹೇಳಲು, ರಾಮಚಂದ್ರನು ತಾನು ಲೋಕಾಪವಾದಕ್ಕಾಗಿ ಭಯಪಟ್ಟು ಆ ರೀತಿಯಾಗಿ ಮಾಡಿದೆನಲ್ಲದೆ ಆಕೆಯ ಸುಚರಿತೆಯ ವಿಷಯವಾಗಿ ಯಾರಿಗೂ ಸಂಶಯವಿಲ್ಲೆಂದು ತಿಳಿಸಿ ಲೋಕಪ್ರಖ್ಯಾತವಾಗುವಂತೆ ಅಗ್ನಿಪ್ರವೇಶಮಾಡಿ ಬಾರೆಂದು ಹೇಳಲು ಆಕೆಯು ಮಹಾಪ್ರಸಾದವೆಂದು ಒಪ್ಪಿದಳು. ಆಗ ಚಂದನಾಗರು ಸುಗಂಧ ದ್ರವ್ಯಗಳಿ೦ದ ದೊಡ್ಡ ಅಗ್ನಿ ಕುಂಡವನ್ನು ರಚಿಯಿಸಿದುದನ್ನು ದೇವೇಂದ್ರನು ತಿಳಿದು ಮಹಾ ಸತಿಯಾದ ಸೀತಾದೇವಿಗೆ ಕೇಡುಂಟಾಗದಂತೆ ಮಾಡಿ ಬರಲು ಮೇಘಕೇತನನೆಂಬ ದೇವನನ್ನು ನಿಯಮಿಸಿದನು.
ಸೀತಾದೇವಿಯು ಅಲ್ಲಿ ನೆರೆದಿದ್ದ ವಿಯಚ್ಚರಾಮರ ನರ ಪ್ರಮುಖರು ಕೇಳುವಂತೆ ಸುಸ್ತರದಿಂದ “ ನಾನು ವಸುಂಧರಾ ವಲ್ಲಭನಾದ ರಾಘವನಲ್ಲಲ್ಲದೆ ರಾವ ಸಾದಿಯಾದ ಮಿಕ್ಕವರಲ್ಲಿ ಪ್ರೀತಿಯನ್ನು ಮನಸ್ಸಿಗೆ ತಂದಿದ್ದರೆ ಈ ಯಳ್ಳೇಶ್ವರನಿಂದ ನನಗೆ ಮರಣವುಂಟಾಗಲಿ” ಎಂದು ಪ್ರತಿಜ್ಞೆಗೈದು ಪಂಚ ಪರಮೇಷ್ಠಿಗಳಿಗೆ ನಮ್ಮ ಸ್ವಾರಮಾಡಿ ಧಗಧಗಿಸುತ್ತಿರುವ ಉರಿಯಲ್ಲಿ ಬಿದ್ದಳು. ಆಗ ಸುತ್ತಲಿರುವವರೆಲ್ಲರೂ ಬೆಚ್ಚು ಬಿದ್ದಿರಲು, ಸೀತಾದೇವಿಯು ತಿಳಿಗೊಳದಲ್ಲಿರುವಂತೆ ನಿಶ್ಚಲೆಯಾಗಿ ಜಿನ ಸತಿಯ ಚರಣವನ್ನು ಧ್ಯಾನಿಸುತ್ತಿದ್ದಳು. ಪತಿವ್ರತಾ ಮಹಿಮೆಯಿಂದುಂಟಾದ ಈ ಆಶ್ಚರವನ್ನು ಕಂಡು ಎಲ್ಲರೂ ಬೆರಗಾದರು. ಆಗ ದೇವೇಂದ್ರನಾಜ್ಞೆಯ ಮೇರೆಗೆ ನಿಯಮಿತನಾಗಿದ್ದ ದೇವನು ಆ ಕುಂಡವನ್ನು ಪದ್ಮಸರೋವರವನ್ನಾಗಿ ಮಾಡಿ ತನ್ನ ದೇವಿಯರಿ೦ದ ಆ ಕೊಳದಲ್ಲಿದ್ದ ಸೀತಾದೇವಿಯನ್ನೆತ್ತಿ ತರಿಸಿ ಸಿಂಹಾಸನದಲ್ಲಿ ಕುಳ್ಳಿರಿಸಿ ತಾನು ಆಕಾಶದಲ್ಲಿದ್ದು ಲೋಕಕ್ಕೆಲ್ಲ ಆಶ್ಚದ್ಯವಾಗುವಂತೆ ಹೂಮಳೆಗರೆಯಿಸಿ