ಪುಟ:ರಾಮರಾಜ್ಯ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪ್ರಕರಣ ದು ಮತ್ತಾವುದು ? ಅಮೋಘವಾದ ಶ್ರೀರಾಮವಾಕ್ಯಗಳನ್ನೂ, ಧರ ಜರಾದ ಋಸಿ ಮುನಿಗಳಿಲದ ನಾನು ಕೇಳಿರುವ ಸುಮಧರಗಳನ್ನೂ ಗರ್ಭಿಕರಿಸಿ ಮಧಾರ್ಹವಾಗಿ ಭಾಷಿಸುವನು. ಎಲ್ಲರೂ ಆಲೈಸ ಬೇಕು. “ರಾಜನಾದವನು ತಾನಷ್ಟೇ ಭೂಗಭಾಗ್ಯ ಸಂಪನ್ನನಾಗಿ ದ್ದಾಗ, ಸಾತ್ಯನಾದ ಭಗವಂತನನ್ನು ಮರೆತಿರಬಾರದು, ತನ ಗಂತಹ ರಾಜ್ಯಾಧಿಕಾರವನ್ನ ನುಗ್ರಹಿಸಿದ ಜಗದೀಶರನಲ್ಲಿ ನಿಷ್ಕಳಂಕ ವಾದ ಭಕ್ತಿಯುಳ್ಳವನಾಗಿರಬೇಕು. ಪೂಜ್ಯರಾದ ಗುರುಹಿರಿಯರನ್ನು ಸತ್ತರಿಸಬೇಕು. ಹಿರಿಯರಲ್ಲಿ ವಿನಯದಿಂದಲೂ, ಸಮಾನರಲ್ಲಿ ನಿಶ್ಚಲ ಗೌರವ ಭಾವದಿಂದಲೂ, ಕಿರಿಯರಲ್ಲಿ ಪ್ರೀತಿಯಿಂದಲೂ ಇವರಿಸ ಬೇಕು. ಕೂರರು, ಜಿತೇಂದ್ರಿಯರು, ಸಂಜಾತರೂ, ವಿನಯ ಶೀಲರೂ, ರಸಜ್ಞರೂ ಆದವರನ್ನು ಮಂತ್ರಿ ಸೇನಾಧಿಪತಿ ಪದವಿಗಳಲ್ಲಿ ನಿಯಮಿಸಬೇಕು. ನೀತಿಶಾಸ್ತ್ರ ಕೋವಿದರ, ಧರತತ್ವಿಕಾರದರ ದೇಶೋದ್ದಾರಕರೂ ಆದ ಅನುಭವಸ್ತ ಗನ್ನು ಮಂತ್ರಾಲೋಚನಾ ಸಭೆ ಕರನ್ನಾಗಿ ನಿಯಮಿಸಬೇಕು. ಉತ್ತಮರೊಂದಿಗಲ್ಲದೆ ಎಲ್ಲರೊಂದಿಗೂ ರಹಸ್ಯವಾಗಿ ಮಾತನಾಡಬಾರದು. ಉತ್ತಮ - ಮಧ್ಯವು - ಅಧನು ಕಾರಗಳಿಗೆ ಜನರನ್ನು ನಿಯಮಿಸುವಲ್ಲಿ, ಉತ್ತರಕಾರಗಳಿಗೆ ಉತ್ತ ಮರನ್ನೂ, ಮಧ್ಯಮಕಾರಗಳಿಗೆ ಮಧ್ಯಮರನ್ನೂ, ಆಥವು ಕರಗ ಆಗ ಅಧಮರನ್ನೂ ನಿಯೋಗಿಸಬೇಕು. ರಾಜ್ಯಾಂಗದ ಅಧಿಕಾರವರ ದವರಿಂದ ಪ್ರಜೆಗಳಿಗೆ ಯಾವ ಬಗೆಯಾದ ಕಷ್ಟನಷ್ಟಗಳೂ ಸಂಭವಿಸ ದಂತ ಆಗಾಗ್ಗೆ ಪರೀಕ್ಷಿಸುತ್ತಿರಬೇಕು. ಸೈನ್ಯಸಮೂಹಕ್ಕೂ, ತಾವೇ ದಾರರಿಗೂ, ಸಮಸ್ತ ನೌಕರರಿಗೂ, ಸೇವಕರಿಗೂ ಕಾಲಕಾಲಕ್ಕೆ ಸರಿ ರ ಆಗಿ ಸಂಬಳಗಳನ್ನು ಕಾಡುತ್ತಿರಬೇಕು. ಪ್ರಜೆಗಳ ಅನುಕೂಲ ವನ್ನು ಚನ್ನಾಗಿ ಯೋಚಿಸಿ, ಕರಗಳು - ಕುಂಟೆಗಳು - ಬಾವಿಗಳು ಮುಂತಾದ ಜಲಾಧಾರಗಳನ್ನು ಕಾಲವಿಳಂಬವಿಲ್ಲದೆ ಕಟ್ಟಿಸಿ ಕೂಡ ಬೇಕು. ದುಷ್ಟ ಮೃಗಗಳ ಬಾಧೆಯನ್ನು ಪರಿಹರಿಸಿ, ಬೆಳೆಗಳನ್ನು ಕಾಪಾಡಬೇಕು. ನಾಸ್ತಿಕರು (ಅಂದರ ದೈವಭಕ್ತಿಯಿಲ್ಲದವರು) ತನ್ನ ರಾಜ್ಯದಲ್ಲಿರುವುದಾಗಿ ತಿಳಿಯಬಂದರೆ ಅಂಥವರಿಗೆ ಭಗವದ್ಭಕ್ತಿಯನ್ನು