ಪುಟ:ರಾಮರಾಜ್ಯ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಐದನೆಯ ಪ್ರಕರಣ ಸೇವಕ-ಯಜಯಶ್ರೀರಾಮಚಂದ, ಮಹಾರಾಜಾ ! ಶ್ರೀರಾಮ-ಚಾರನೇ ! ಸಮಾಚಾರವೇನು? ಸೇವಕ: ಲಕ್ಷಣ ಮಹಾರಾಜರು ಬಂದಿರುವರು. ಶ್ರೀರಾಮ:-ಅನುಷಾ ಲಕ್ಷಣಾ ! ಒಳಗಚಾ ! [ಲಕ್ಷಣನು ಪ್ರವೇಶಿಸಿ ಸೀತಾರಾಮರಿಗೆ ವಂದಿಸುವನು.) ಶ್ರೀರಾಮ: ಆಯುಷ್ಮಂತನಾಗು. ಈ ಪೀಠವನ್ನಲಂಕರಿಸು. (ಲಕ್ಷಣನೊಂದು ಪೀಠದಲ್ಲಿ ಆಸೀನನಾಗುವನು.) ಶ್ರೀರಾಮ-ಲಕ್ಷಣಾ ! ವಿಶೇಷ ವರಮಾನಗಳೇನಾದರೂ ಉಂಟೋ? ಲಕ್ಷಣ:-ಅಣ್ಣಾ! ಇತರವರಮಾನಗಳೇನೂ ಇಲ್ಲವು. ತಮ್ಮಾ ಜ್ಞೆಯಂತ ( ರಾಮಾಯಣವೆಲ್ಲಾ ) ಚಿತ್ರಿಸಲ್ಪಟ್ಟು ಪ್ರೇಕ್ಷಣಕ್ಕೆ ಸಿದ್ದವಾಗಿದೆ. ಶ್ರೀರಾಮು:-ಲಕ್ಷ್ಮಣಾ ! ಇದಿವಸ ಮಧ್ಯಾಹ್ಯಾ ನಂತರ ಮಾತ ಯರನ್ನೂ, ಪ್ರೇಕ್ಷಕರಾದ ಮಿಕ್ಕ ವರಿಜನರನ್ನೂ, ಪುರಜನರನ್ನು ಚಿತ್ರಶಾಲೆಗೆ ಬರಮಾಡು. ನೀತಯೂ, ನಾನೂ ಅಲ್ಲಿಗೆ ಬರುವವು. - ಲಕ್ಷಣ:-ರಾವಾಜ್ಞೆ! (ಎಂದು ಲಕ್ಷಣನು ನಿಮ್ಮ ಮಿಸುವನು. ಸೀತಾರಾಮರು ಅಂತಃಪುರದೊಳಗೆ ಪ್ರವೇಶಿಸುವರು.) ಆರನೆಯ ಪ್ರಕರಣ. ರಾಮಾಯಣ ಚಿತ್ರಭವನ, ಕೌಸಲ್ಯ ಮುಂತಾದ ರಾಜಮಾತರೂ, ನೋಟಕರಾದ ಪುರ ಜನರಾದಿಯಾಗಿ ಎಲ್ಲರೂ ಶ್ರದ್ಧೆಯಿಂದ ನೋಡುತ್ತಿರುವರು. ಲಕ್ಷಣ ನು ಸೀತಾರಾಮರ ಬಳಿಯಲ್ಲಿ ನಿಂತು ಎಲ್ಲರಿಗೂ ತಿಳಿಯುವಂತೆ ಚಿತ್ರ ಗಳನ್ನು ವಿವರಿಸಿ ಹೇಳುತ್ತಿರುವನು.