ಪುಟ:ರಾಮರಾಜ್ಯ.djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೦ ಈ ದು ಈ . ಶ್ರೀರಾಮು:-ವಿಭೀಷಣನ ಅಭಿಪ್ರಾಯವು ಸಮಂಜಸವಾಗಿದೆ. ಅನುಜರೇ ! ಬಹಳ ಹೊತ್ತಾಗಿದೆ. ನೀವು ಅಂತಃಪುರಕ್ಕೆ ತೆರಳಿ ನಿದ್ರಿ ಸರಿ, ನಾನು ಇನ್ನೂ ಸ್ವಲ್ಪ ಹೊತ್ತು ಇಲ್ಲಿಯೇ ವಿಶ್ರಮಿಸಿ ತರುವಾ ಯ ಕಯನಾಗಾರಕ್ಕೆ ಹೋಗುವೆನು, ಭರತ-ಲಕ್ಷಣ:-ಮಹದಾಜ್ಞೆ! [ಭರತ ಲಕ್ಷ್ಮಣರು ತರಳುವರು.] ಶ್ರೀರಾಮು:-ಪುರಜನರ ಕಣ್ಮಸುಖಗಳನ್ನೂ, ನನ್ನ ರಾಜ್ಯಭಾರ ವಿಷಯವಾದ ಅವರ ಮನೋಭಿಪ್ರಾಯಗಳನ್ನೂ ತಿಳಿದುಬರುವಂತ, ಪುರಖಾಲಕ ಸಂಘದ ಗೂಢಚಾರನಾದ ಭದ್ರನಿಗಾಜ್ಞಾಪಿಸಿದ್ದೆನು. ಅವನು ಬರುವವರೆಗೆ ನಾನಿಯೇ ಇದ್ದು ತದನಂತರ ಶಯನಾಗಾ

  • ಹೂಗುವೆನು,

[ಎಂದು ಯೋಚಿಸುತ್ತಿರುವಾಗೋ ಭದ್ರನು ಪ್ರವೇಶಿಸುವನು.] ಭದ್ರ:-ಜಯವಾಗಲಿ ಶ್ರೀರಾಮಚಂದ್ರ ಮಹಾರಾಜರ | ಶ್ರೀರಾಮು:- ಭದ್ರಾ! ನಿನಗಾಗಿಯೇ ಪ್ರತೀಕ್ಷಿಸುತ್ತಿದ್ದೆನು. ಬಾ ! ಬಾ 1 ಪಟ್ಟಣದ ವಿದ್ಯಮಾನಗಳೇನು ? ಜಾರಚೋರಕಿರಾತರಾ ದಿಯಾಗಿ ದುರ್ಜನರ ಭೀತಿಯಿಲ್ಲದೆ ಪ್ರಜೆಗಳು ನಮ್ಮದಿಯಾಗಿ ನಿದಿ ಸುತ್ತಿರುವರೆ ? ಅಥವಾ ರಾಜ್ಯಾಂಗದ ಕುಂದು ಕೊರತೆಗಳನ್ನು ಕುರಿ ತು ಯಾರಾದರೂ ಮಾತನಾಡುತ್ತಿದ್ದರೆ ? ಯಾವ ವಿಷಯವನ್ನೂ ನ ರಮಾಜದೆ ಪರಿಷ್ಕಾರವಾಗಿ ತಿಳಿಸು. ಭದ್ರ:-ಶ್ರೀರಾಮಚಂದವು ! ತಮ್ಮ ರಾಜ್ಯಭಾರವನ್ನು ಮೂಸಿ ಸತಕ್ಕವರನ್ನು ನಾನೆಲ್ಲಿಯ ನೋಡಲಿಲ್ಲವು, ಮತ್ತು ಅಂತಹ ದೂ ಪ್ರಣೆಯನ್ನು ಎಲ್ಲಿಯೂ ಕೇಳಲೂ ಇಲ್ಲವು. ರಾಮರಾಜ್ಯದಲ್ಲಿ ತಿಂಗ ೪ಗೆ ಮೂರುಸಾರಿ ಮಳೆಯಾಗುವುದರಿಂದ ಕೆರೆ ಕುಂಟೆಗಳಲ್ಲಿ ನೀರು ಸರದ ಪುಷ್ಕಲವಾಗಿರುತ್ತದೆ. ಭೂಮಿಯು ಪೈರು ಪಚ್ಚೆಗಳಿಂದ ಶೋಭಿಸುತ್ತ ನೇತ್ರೋತ್ಸವವನ್ನು ಜನರಾಡುವುದಲ್ಲದೆ, ವರ್ಷಕ್ಕೆ ಮೂರು ಬೆಳೆಗಳಾಗುತ್ತವೆ. ವ್ಯಾಧಿಬಾಧೆಗಳಿಲ್ಲದೆ ಜನರು ಆರೋಗ್ಯ ಭಾಗ್ಯವನ್ನನುಭವಿಸುತ್ತಿರುವರು. ಶಿ' - ಮಶಾಸನಕ್ಕೊಳಪಟ್ಟಿರು