ಪುಟ:ರಾಮರಾಜ್ಯ.djvu/೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾ ಮ ರ ಜ. ಮನಸ್ತಾಪವನ್ನು ಏಟುಮಾಡಿದ ರಜಕನನ್ನು ದಂಡಿಸಿ ಲೋಕ ಮರಾ ದೆಯನ್ನು ಪಾಲಿಸುವುದು ಪ್ರಸಕ್ತವಾಗಿರುವಲ್ಲಿ ಅಪರಾಧಿಯನ್ನು ಸುಮ್ಮನೆ ಬಿಟ್ಟು ನಿರಪರಾಧಿನಿಯಾದ ನನ್ನ ತಾಯಿಯನ್ನು ಕಾಡು ಹಾಲು ಮಾಡುವುದು ಸಮುಚಿತವಲ್ಲವ, ಅಣಾ ! ನಿನ್ನಡಿಗಳಿಗಾಗಿ ಪ್ರಾಕ್ಟಿಸುವನು. ಈ ವಿಚಾರದಲ್ಲಿ ಧರವು ಪರಿಪಾಲಿಸಲ್ಪಡಬೇಕೆಂದು ಬಾರಿಬಾರಿಗೂ ಬಿನ್ನವಿಸುವೆನು ! ಶ್ರೀರಾಮ:-(ಅತೃಪ್ತಿಯಿಂದ) ಲಕ್ಷ್ಮಣಾ! ನನ್ನ ಮಾತಿನಂತ ನೀನಾದರು ನಡೆಯಿಸುವೆಯೋ ಇಲ್ಲವೋ ? ಲಕ್ಷಣ:-ಅಗ್ರಜಾ ! ಎಂದೆಂದಿಗೂ ನಿನ್ನಾಜ್ಞೆಯನ್ನುಲ್ಲಂಘಿ ಸತಕ್ಕವನಲ್ಲ, ಈ ನನ್ನ ಮನೋನಿಕ್ತ ಯಕ್ಕೆ ಭೂಮ್ಯಾಕಾಶಾದಿ ಪಂಚಭೂತಗಳೇ ಸಾಕ್ಷಿಯಾಗಿರುವುವು. ಆದಾಗ್ಯೂ ಜಾನಕೀದೇವಿ ಯು ಮನೋವಾಕ್ಕಾಯಗಳೆಂಬ ತ್ರಿಕರಣಗಳಲ್ಲಿಯೂ ಯಾವ ಪಾಪ ವನ್ನೂ ಅರಿಯದ ಪರಮ ಪಾವನಚರಿತ್ರಳೆಂದು ಭಗವಂತನಾದ ಅಗ್ನಿ ದೇವನು ನನ್ನ ಸಮಕದಲ್ಲಿಯೂ ಹೇಳಿ ನಿನಗೊಪ್ಪಿಸಿದನಲ್ಲವೆ ! ಅಗ್ನಿ ಪೂತರೂ, ನಿರಪರಾಧಿನಿಯೂ ಆದ ನನ್ನ ತಾಯಿಯನ್ನು ಘೋರಾರಣ್ಯದಲ್ಲಿ ಬಿಟ್ಟು ಬರಲು ನನ್ನ ಮನಸ್ಕೊಪ್ಪುವುದೆ ? ಅಣ್ಣಾ! ವರಮಹಾಂತಪ್ಪುಭಾವನಾದ ನೀನು ಈ ದಿವಸವೇಕಿಷ್ಟುಕಾಠಿನವನ್ನು ವಹಿಸಿರುವ ? ಪೂರಾವರಪರಿಜ್ಞಾನವಿಲ್ಲದ ದುರಾತ್ಮರ ಮಾತಿಗೆ ಹೆದರಿ ಕುಲಸ್ತಿಯರನ್ನು ಕಾಡುವಾಲು ಮಾಡುವುದಾದರೆ, ಲೋಕದಲ್ಲಿ ಸಾಧೀಮಣಿಯರಾದ ಕುಲಾಂಗನೆಯರೆಲ್ಲರೂ ನಿಲವಾಗತಕ್ಕ ಪ್ರಳಯ ಕರವಾಗುವುದಲ್ಲವ ? ಕ್ಷಮಾಗುಣಾಭಿರಾಮಾ | ಶ್ರೀರಾಮಾ| ಈ ವಿಚಾರವನ್ನು ಪ್ರಶಾಂತಚಿತ್ತದಿಂದ ಮತ್ತೊಂದು ಸಾರಿ ಯೋಚಿಸ ಬೇಕಾಗಿ ಪ್ರಾಕ್ಟಿಸುವನು! ಶ್ರೀರಾಮ:-(ಕಪದಿಂದ) ಲಕ್ಷಣಾ ! ಸಾಕು! ಸಾಕು !! ನಿಲ್ಲಿಸು ನಿನ್ನ ಹಿತೋಪದೇಶವನ್ನು !!! ನಿನಗಿಷ್ಟವಿದ್ದರೆ ನನ್ನಾಜಿಯ ನ್ನು ಪರಿಪಾಲಿಸು | ಇಲ್ಲವಾದರೆ ಸುಮ್ಮನಿರು ! ಆಜ್ಞೆಯನ್ನುಲ್ಲಂಘಿಸಿ ಅವಿಧೇಯನಾದುದಲ್ಲದೆ ನನಗೆ ಧಕ್ಕೂವದೇಶವನ್ನು ಸಹ ಮಾಡು ತಿರುವೆಯಲ್ಲವೆ !