ಪುಟ:ರಾಮರಾಜ್ಯ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಕು 8. ಹತ್ತನಯ ಪ್ರಕರಣ ಪ್ರದೇಶ:-ಶ್ರೀರಾಮನ ಅಂತಃಪುರ, ಲಕ್ಷ್ಮಣನು, ದಿವ್ಯವಾದ ರಥವನ್ನು ಸಜ್ಗಳು, ಅಂತಃಪುರದ ಮುಂಭಾಗದಲ್ಲಿ ಪ್ರಯಾಣ ಸಂಸಿದ್ಧನಾಗಿರುವನು. ಲಕ್ಷಣ:-(ತನ್ನಲ್ಲಿ) ಆಹಾ | ಪ್ರಪಂಚವನ್ನು ವಿಚಿತ್ರವಾದು ದು | ಇದಿವಸ ನಾನು ಮಾಡತಕ್ಕ ಕತ್ರವ್ಯವು ಘೋರಕಿರಾತರ ಕಾರ್ ಕ್ಕಿಂತಲೂ ನೀಚವಾದುದು, ಇಂತಹ ಕರಕಾರಗಳನ್ನು ಮಾಡು ವುದಕ್ಕಾಗಿಯೇ ನಾನು ಜನ್ನಿಸಿರುವನೆಂದು ಕಾಣುತ್ತದೆ. ಪೂರ್ಣಗ ರ್ಭವತಿಯೂ, ನಿರಪರಾಧಿನಿಯೂ, ಸುಧೀಶಿರೋಮಣಿಯೂ ಆದ ಜಾನಕೀದೇವಿಯನ್ನು ನಿಷ್ಕಾರಣವಾಗಿ ಕಾಡುವಾಲು ಮಾಡುವ ಪಾಪ ಕಾರಕ್ಕೆ ಶ್ರೀರಾಮನು ನನ್ನ ನಿಯಮಿಸಬೇಕೇ? ಚಿಂತಿಸಿ ಫಲ ವೇನು ? ಪಾಪಕರಿಯಾದ ನಾನು ಜೀವಿಸಿರುವುದರಿಂದ ಭೂಮಿಗೆ ಭಾರವೇ ಹೊರತು ಮತ್ತಾವ ಪ್ರಯೋಜನವೂ ಇಲ್ಲವು | [ಸೀತೆಯು ಪ್ರಯಾಣಸನ್ನದ್ದಲಾಗಿ ಅಂತಃಪುರದಿಂದ ಬರುವಳು.] ಸೀತೆ:-ಅಣ್ಣಾ ಲಕ್ಷಣಾ! ನೀನಾಗಲೇ ಪ್ರಯಾಣಕ್ಕೆ ಸಂಸಿ ದ್ದನಾಗಿರುವೆ | ನನ್ನಿಂದ ಸ್ವಲ್ಪ ಸಾವಕಾಶವಾಯಿತು. ವನವಾಸಿನಿಯ ರಾದ ಮುನಿವಯರನ್ನು ಪೂಜಿಸುವುದಕ್ಕೆ ಬೇಕಾದ ಪದಾರ್ಥಗ ಳನ್ನು ಶೇಖರಿಸುತ್ತಿದ್ದೆನಾದ ಕಾರಣ ಸ್ವಲ್ಪ ಸುವಕಾಶವಾಯಿತು. ಲಕ್ಷಣ:-(ತನ್ನಳಿ) ಮಾಯವರ್ಮಗಳನ್ನೂ, ಛಲಕವಟಗಳ ನ್ನು ಲೇಶವಾದರೂ ಅರಿಯದ ಈ ಮಹಾತ್ಕಳ ಆನಂದವನ್ನು ನಾನ ನಂದು ಹೇಳಲಿ! ತನ್ನನ್ನು ಕಾಡುವಾಲು ಮಾಡುವುದಕ್ಕಾಗಿ ಈ ಪ್ರಯಾಣ ವೊದಗಿರುವುದೆಂಬುದನ್ನರಿಯದ ನಿಷ್ಕಳಂಕವಾದ ಸಂಭ್ರಮದಿಂದ ಆ ತ್ಯಾನಂದ ಮಗ್ನಳಾಗಿರುವಳು. ಇಂತಹ ಪರಮಸಾಧಿಯನ್ನು ದುರ್ಗ ತಿಗೊಳಪಡಿಸಬೇಕಾಯಿತಲ್ಲಾ! ವಿಧಿವಿಲಾಸವನ್ನು ವಿಚಿತ್ರವಾದುದು | ಸೀತ-ಲಕ್ಷಣಾ | ಕರಳೋಣವೆ? ಲಕ್ಷಣ-ಅಮ್ಮಾ! ಆಗಬಹುದು,