ಪುಟ:ರಾಮರಾಜ್ಯ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತೊಂಭತ್ತನೆಯ ಪ್ರಕರಣ ಕರುಣಾ ಪರಾಯಣರೂ, ಶಿವರೂ ಆದ ಅವರ ಮುಹೂರ ಕಾರಕ, ನಾನೇನು ಪ್ರತ್ಯುಪಕಾರ ಮಾಡಬಲ್ಲನು ? ಜನಕನು ನನ್ನ ದುಸ್ಥಿತಿಗೆ ಬಹಳವಾಗಿ ಪರಿತಪಿಸಿದನಾದಾಗ ಈ ಮಹರ್ಷಿಗಳು ನನ್ನ ನ್ನು ಸಪುತಿ ಯಂತೆ ಪೋಷಿಸುತ್ತಿರುವುದನ್ನು ಕಂಡು ಸ್ವಲ್ಪ ಧೈರದಿಂದ ಪಟ್ಟಣಕ್ಕೆ ತೆರಳಿದನು. ಈ ಆಶ್ರಮಕ್ಕೆ ಬರತಕ್ಕ ತ್ರಿಕಾ ಲಜ್ಜರಾದ ಋಷಿಮುನಿಗಳು, ನನ್ನ ಕಷ್ಟಪರಂಪರಯು ಹಿಪದಲ್ಲಿ ರ ಪರಿಹಾರವಾಗುವುದಂತಲೂ, ನಿತಾಂತ ಸುಖಸಂತೋಷಗಳುಂಟಾ ಗುವುನಂತಲೂ, ನನಗೆ ಬಾರಿ ಬಾರಿಯೂ ಶುಭೋದಯವನ್ನೇ ಸೂಚಿ ಸುತ್ತಿರುವರು | ಶುಭವೋ ಅಶುಭವೋ ಬಂದುದನ್ನ ಲ್ಲಾ ಅನುಭವಿ ಸಲೇ ಬೇಕು | - [ಎಂದು ಯೋಚಿಸುತ್ತಿರುವಾಗ್ಗೆ ಮುನಿಕುಮಾರರು ಪ್ರವೇಶಿ ಸುವರು] ಮುನಿಕುಮಾರನು:-ಅಮ್ಮಾ! ನಿನ್ನ ಮಗನಾದ ಲವಕುಮ ರನು ನಮ್ಮಂದಿಗೆ ಆಟವಾಡುತ್ತಿ ದ್ದವನು ಸುಮ್ಮನಿರದೆ ದಾರಿಯಲ್ಲಿ ಹೋಗುತ್ತಿದ್ದ ಕುದುರೆಯನ್ನು ಹಿಡಿದು ಕಟ್ಟಿಹಾಕಿದನು. ಆ ಕುದು ರಯನ್ನು ಹಿಂಬಾಲಿಸಿ ಬಂದ ಸೈನ್ಯಾಧ್ಯಕ್ಷನನ್ನು ನಿರಕವಾಗಿ ಹಂಗಿ ಸಿ ಮಾತನಾಡಿದನು. ಆ ಸೈನ್ಯದ ಪ್ರಭುವಾದ ರಾಜಕುಮಾರನು ಕುಪಿತನಾಗಿ ಲವಕುಮಾರನನ್ನು ಕರವರ್ಷದಿಂದ ವರ್ಧೆಗೊಳಿಸಿ ರಥದಲ್ಲಿಟ್ಟುಕೊಂಡು ನರಳುತ್ತಿರುವನು. ಈ ಸಮಾಚಾರವನ್ನು ನಿನಗೆ ತಿಳಿಸುವುದಕ್ಕಾಗಿ ನಾವತಿ ವೇಗವಾಗಿ ಬಂದಿರುವವು. ನೀತ:ಹಾ | ಲವಕುಮಾರಾ! ನನ್ನ ದುರ್ದಣೆಯು ಪರಿಹಾರ ವಾಗುವುದಂತಲೂ, ಶೀಘ್ರದಲ್ಲಿಯೇ ನನಗೆ ಕುಭೋದಯವಾಗುವು ದಂತಲ ಮುನಿಕುಲೋತ್ತಮರು ಸಾರ ಸಾರರೂ ಹೇಳಿದರಲ್ಲಾ! ಈಗ ಅವರ ಮಾತುಗಳೇನಾದುವು ? ಧರಾತನೂ, ಸತ್ಯಸಂಧನ ಆದ ವತಿಯಿಂದ ತಿರಸ್ಕೃತಳಾಗಿ ಘೋರತರ ವಿಪಿನ ಭೂಮಿಯಲ್ಲಿ ವಾಸ ಮಾಡುವುದಕ್ಕೆ ರಯಾಗಿ, ಪುತ್ರವಿಯೋಗವೊಂದು ಸಂಭವಿಸಿತೆ! ನನ್ನಂತಹ ನಿರ್ಭಾಗ್ಯರಿತ್ರಿಭುವನ ಗಳಲ್ಲಿಯೂ ಇರಲಾರರು ! ಅಕಟಾ| ಈ ಪುನವೇದನೆಯನ್ನೆಂತು ಸಹಿಸಲಿ | ಹಾ | ರಾಮಚಂದ್ರಾ !