ಪುಟ:ರಾಮರಾಜ್ಯ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೊಂದನೆಯ ಪ್ರಕರಣ ೮೩ ಲಕ್ಷಣ :-ಕಲವು ವ್ಯತ್ಯಾಸವಾದಾಗ ಹುಲ್ಲುಕಡ್ನಿಯು ಕೂಡ ಹೆದರಿಸುವುದೆಂಬಂತ, ಲೋಕೋತ್ತರ ಪರಾಕ್ರಮಶಾಲಿಯಾದ ಕತ್ತು ಹೈನು, ಯಾರೂ ಮುನಿಕುಮಾರರಿಂದ ಪರಾಜಿತನಾದನಂತ. ಇಂತಹ ವಿಚಿತ್ರವೆಂದಾದರೂ ನಡೆದಿರುವುದೆ ? ಅರಣ್ಯದಲ್ಲಿ ಕುಟೀರ ಗಳಲ್ಲಿ ವಾಸಮಾಡುತ್ತ, ಕಂದಮೂಲಗಳನ್ನು ಭಕ್ಷಿಸುವ ಸಗುಣ ಏನಿಷ್ಟರಾದ ಮುನಿಬಾಲಕರಂದರೇನು ? ಪ್ರಚಂಡ ರಣಪಂಡಿತರಾದ ಸತಿಯರೊಂದಿಗೆ ಸಮರದಲ್ಲಿ ನಿಂತು ಹೊರುವುದೆಂದರೇನು ? ಎಲ್ಲ ಕಾಲವೈಪರೀತ್ಯವು ಯಾವ ದಿನದಲ್ಲಿ ರಘುಕುಲ ಸೌಭಾಗ್ಯ ಲಕ್ಷ್ಮಿ ಯಾದ ಜಾನಕಿಯು ಅಯೋಧ್ಯೆಯನ್ನು ಬಿಟ್ಟು ಕಾಡುವಲಾ ದಳೂ ಆ ದಿವಸವೇ ನಮಗ ಜಯಲಕ್ಷ್ಮಿಯು ದೂರವಾದಳು. ಇಲ್ಲವಾದಲ್ಲಿ ಮಹಾಪರಾಕ್ರಮಶಾಲಿಯಾದ ಲವಣಾಸುರನಂತಹ ಘೋರ ರಾಕ್ಷಸನನ್ನು ಅವಲೀಲೆಯಾಗಿ ಜಯಿಸಿದ ಶತ್ರುಘ್ನ ನು, ವನವಾಸಿಗ ಛಾದ ಮುನಿಕುಮಾರರ ಕರಧಾಟಿಗೆ ಸಿಲುಕಿ ಮೂರ್ಛಬೀಳುವುದೆಂದರೆ ಸಾಮಾನ್ಯವಾದ ವಿಷಯವೆ ಒಳ್ಳೆಯದು | ಚಿಂತಿಸಿ ಫಲವೇನು? ಆ ಮುನಿಕುಮಾರರ ಗರವವನ್ನು ಮುರಿದು ಯಜ್ಞಾಶವನ್ನು ಬಿಡಿ ಸುವನು. [Jಂದು ಸೇಲ್ಪದೂರ ಮುಂದಕ್ಕೆ ಹೋಗುವಾಗ್ಗೆ ಆರ್ಕದ ಬಳಿ ಯಲ್ಲಿ ಲವಕುಶರು ಧನುರ್ರರಾಗಿ ನಿಂತಿರುವರು.] ಲಕ್ಷಣ:-(ತನ್ನ೪) ಸವ್ರನಾಶವನ್ನು ತಡೆದಿರುವ ಬಾಲಕರು ಇವರೇ ಆಗಿರಬಹುದು. ಎಲೈ ವನಿಕವಾರರೇ | ಈ ಅಕ್ಷವನ್ನೇಕೆ ಹಿಡಿದಿರುವಿರಿ ? ಲನ:-ಹಿಡಿಯಬೇಕಂತಲೇ ಹಿಡಿದಿರುವೆವು. ಲಕ್ಷಣ-ಇದು ಯಜ್ಞಾವು, ಇದನ್ನು ಬಿಟ್ಟುಬಿಡಿರಿ. ನಿಮಗೆ ಬೇಕಾದರೆ ಇದಕ್ಕಿಂತಲೂ ಉತ್ತಮವಾದ ನೂರು ಕುದುರೆಗೆ ಇನ್ನು ಕೊಡುವನು, ಲವು-ನಿನ್ನಲ್ಲಿ ನಾವು ಭಿಕ್ಷಕ್ಕೆ ಬಂದವರಲ್ಲ, ಲಕ್ಷಣ-ಮುನಿಕುಮಾರರಂಬ ಮರಾಟಿಯಿಂದ ಹೇಳಿದ