ವಿಷಯಕ್ಕೆ ಹೋಗು

ಪುಟ:ರೂಲ್ಸ್ ಮೇಸ್ಟ್ರು.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರೂಲ್ಸ್ ಮೇಷ್ಟ್ರು

ರಾಮಣ್ಣಗೌಡ

( ಓದುವನು )

ಮೈಸೂರು ಸಂಸ್ಥಾನದ ವಿದ್ಯಾಭ್ಯಾಸದ ಇಲಾಖೆಯ ಮೆಹರ್ಬಾನ್ ಹೊಸಮಂಗಲದ ರೇಂಜ್ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ ಸಾಹೇಬರ ಹುಜೂರು ಜನಾಬಿನಲ್ಲಿ ಅತ್ತಿಸಂದ್ರದ ಪಂಚಾಯಿತಿ ಮುಂಬರುಗಳು ಮತ್ತು ಗ್ರಾಮಸ್ಥರು ಕೃತಜ್ಞತೆಯಿಂದ ಒಪ್ಪಿಸಿದ ಬಿನ್ನವತ್ತಳೆ:

ಸ್ವಾಮಿ,

ನಮ್ಮೂರ ಜನಸಂಖ್ಯೆ ೫೦೦ಕ್ಕೆ ಮೇಲ್ಪಟ್ಟಿದ್ದರೂ ಇದುವರೆಗೂ ಸರ್ಕಾರದವರು ನಮಗೊಂದು ಸ್ಕೂಲು ದಯಪಾಲಿಸಿರಲಿಲ್ಲ. ನಾವು ಸೆಸ್ ಹಣ ಪ್ರತಿವರ್ಷ ಕಟ್ಟ ಕಟ್ಟಿ ಅರ್ಜಿ ಹಾಕಿ ಹಾಕಿ ಸಾಕಾಯ್ತು. ಕಡೆಗೆ ತಮ್ಮ ಸಹಾಯದಿಂದ ನಮಗೊಂದು ಸ್ಕೂಲು ದೊರೆಯಿತು. ಇದಕ್ಕಾಗಿ ನಾವೆಲ್ಲ ತಮಗೆ ಕೃತಜ್ಞರಾಗಿದ್ದೇವೆ (ಚಪ್ಪಾಳೆ, ನಮಸ್ಕಾರಗಳು), ಸತ್ಕಾರ ನಮಗೆಲ್ಲ ತಾಯಿ ತಂದೆ. ನಮಗೆ ವಿದ್ಯೆ ಬುದ್ಧಿ ಹೇಳಿಕೊಟ್ಟು ಹೊಟ್ಟೆಗೆ ಹಿಟ್ಟು ಕಾಣಿಸೋ ಜವಾಬ್ದಾರಿ ಸರ್ಕಾರದ್ದು ಸ್ವಾಮಿ. ನಾವು ಬಡರೈತರು. ಆದರೂನೂವೆ ಸ್ಕೂಲಿಗೆ ತಕ್ಕ ಕಟ್ಟಡ ಇನ್ನೊಂದು ವರ್ಷದೊಳಗಾಗಿ ನಮ್ಮ ಸ್ವಂತ ಲಾಗೋಡಿನಿಂದ ಕಟ್ಟಿಸಿಕೊಡುತ್ತೇವೆ ಸ್ವಾಮಿ.

ಈ ಊರಿನಲ್ಲಿ ಬಹಳ ಜನ ಮಕ್ಕಳಿದ್ದಾರೆ. ಈಗಾಗಲೆ ಮೂವತ್ತೈದು ಮಕ್ಕಳು ಸೇರಿದ್ದಾರೆ. ಇನ್ನೂ ಸೇರುವ ಹುಡುಗರು ಬಹಳ ಇದ್ದಾರೆ. ಆದ್ದರಿಂದ ತಾವು ದಯವಿಟ್ಟು ಇನ್ನೊಬ್ಬರು ಮೇಷ್ಟರನ್ನು ಕೊಡಬೇಕೆಂದು ಪ್ರಾರ್ಥಿಸುತ್ತೇವೆ ಸ್ವಾ ಮಿ.