ವಿಷಯಕ್ಕೆ ಹೋಗು

ಪುಟ:ರೂಲ್ಸ್ ಮೇಸ್ಟ್ರು.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರೂಲ್ಸ್ ಮೇಷ್ಟ್ರು


ನಮಗೆ ಆಗಾಗ ತಿಳಿವಳಿಕೆ ಕೊಟ್ಟು ನಮ್ಮ ಮಕ್ಕಳಿಗೆ ವಿದ್ಯೆ ಹೇಳಿಕೊಟ್ಟು ಮುಂದಕ್ಕೆ ತರೋ ಭಾರ ತಮ್ಮದೇ ಆಗಿದೆ ಸ್ವಾಮಿ,

(ಚಪ್ಪಾಳೆ)

(ಬಿನ್ನವತ್ತಳೆ ಒಪ್ಪಿಸುವನು)

ಇನ್ಸ್‌ಪೆಕ್ಟರ್

ಈ ಊರಿನಲ್ಲಿ ಪಾಠಶಾಲೆ ಪ್ರಾರಂಭ ಮಾಡು ವ ಈ ಉತ್ಸವದಲ್ಲಿ ಭಾಗಿಯಾಗಲು ಬಹಳ ಸಂತೋಷವಾಗುತ್ತದೆ. ಮುಖ್ಯವಾಗಿ ವಿದ್ಯೆ ಎಲ್ಲ ಜನರಿಗೂ ಬೇಕು. ಪಾಶ್ಚಾತ್ಯ ದೇಶಗಳಲ್ಲಿ ೧೦೦ಕ್ಕೆ ೯೬-೯೮ ಮಂದಿ ಓದುಬರೆಹ ತಿಳಿದವರಿದ್ದಾರೆ. ನಮ್ಮ ದೇಶದಲ್ಲಿ ೧೩ ಮಂದಿಯೂ ಇಲ್ಲ. ಆದ್ದರಿಂದ ಗ್ರಾಮಸ್ಥರು ಪಾಠಶಾಲೆಯಿಂದ ಹೆಚ್ಚು ಪ್ರಯೋಜನ ಪಡೆಯಬೇಕು, ಸ್ಕೂಲಿಗೆ ಸರಿಯಾಗಿ ಮಕ್ಕಳನ್ನು ಕಳುಹಿಸಬೇಕು. ಅವರನ್ನು ಚೊಕ್ಕಟವಾಗಿ ಕಳುಹಿಸಿಕೊಡಬೇಕು. ಸ್ಟೇಟು ಪುಸ್ತಕ ಅವರಿಗೆ ತೆಗೆದುಕೊಡಬೇಕು. ಮೇಷ್ಟರಿಗೆ ಮನೆ ಮಾಡಿಕೊಟ್ಟು ಆದರದಿಂದ ನೋಡಿಕೊಳ್ಳಬೇಕು. ಈ ದಿನ ನಿಮಗೆಲ್ಲ ಇರುವ ಉತ್ಸಾಹ ತಗ್ಗದೆ ಕೊನೆತನಕ ಇರಬೇಕು. ಕಟ್ಟಡವನ್ನು ಬೇಗ ಮಾಡಿಕೊಡೋದು ಒಳ್ಳೆಯದು, ಈಗಿನ್ನೂ ಪಂಚಾಯಿತಿಕಟ್ಟಡ ಪೂರೈಸಿಲ್ಲ. ಅದು ಮುಗಿದಮೇಲೆ ಸ್ಕೂಲನ್ನು ಅಲ್ಲಿ ಮಾಡಿಕೊಳ್ಳ ಬಹುದು. ಈಗ ಸದ್ಯಕ್ಕೆ ರಾಮಣ್ಣಗೌಡರು ಸ್ಕೂಲಿಗಾಗಿ ತಮ್ಮ ಮನೆ ಭಾಗವನ್ನು ಬಿಟ್ಟು ಕೊಟ್ಟಿರುವುದಕ್ಕಾಗಿ ನೀವುಗಳೆಲ್ಲ ಅವರಿಗೆ ಕೃತಜ್ಞರಾಗಿರಬೇಕು ( ಚಪ್ಪಾಳೆ ). ಇನ್ನೊಬ್ಬರು ಮೇಷ್ಟ್ರು ಹೆಚ್ಚಾಗಿ ಬೇಕು ಎಂದು ಹೇಳಿದ್ದೀರಿ. ಹುಡುಗರು ಸರಿಯಾಗಿ ಬರುತ್ತಾ ಹಾಜರಿ ಸಂಖ್ಯೆ ಹೆಚ್ಚಿದರೆ ಖಂಡಿತ ಮತ್ತೊಬ್ಬ