ಈ ಪುಟವನ್ನು ಪ್ರಕಟಿಸಲಾಗಿದೆ
ರೂಲ್ಸ್ ಮೇಷ್ಟ್ರು
೧೧
ಹೆಂಗಸು
- ಸೋಮಿ, ಮಗನ್ನ ತಂಗಳೂಟಕ್ಕೆ ಕಳಸ್ರಲಾ.
ಉಪಾಧ್ಯಾಯ
- ಹಾಗೆಲ್ಲ ಮಧ್ಯೆ ಕಳಿಸೋದಕ್ಕೆ ರೂಲ್ಸಿಲ್ಲ. ಮೊದಲೇ ಊಟ ಹೌಕಿ ಕಳಿಸಬೇಕೋ ಬೇಡವೋ ? ಒಂಬತ್ತು ಗಂಟೆಗೆ ಬಿಡುತ್ತೇನೆ ಹೋಗು.
ಹೆಂಗಸು
- ಆಗಾಕಿಲ್ಲ ಸೋಮಿ ಹಸಿದುಕೊಂಡ, ಬಾರೋ ಮಗ.
( ಹುಡುಗನೂ ಹೆಂಗಸೂ ಹೊರಟುಹೋಗುವರು. ಇಬ್ಬರು ಗೌಡರು ಸಣ್ಣ ಮಕ್ಕಳೊಡನೆ ಪ್ರವೇಶ )
೧ ನೇ ಗೌಡ
- ಈ ಮಕ್ಕಕ್ಕೆ ಸೇರಿಸಿಕೊಳ್ಳಿ ಮೇಷ್ಟೆ.
ಉಪಾಧ್ಯಾಯ
- ಇವರಿಗಿನ್ನೂ ವಯಸ್ಸಾಗಿಲ್ಲ; ಆರು ವರ್ಷ ಆದರೂ ಆಗಿರಬೇಕು ಅಂತ ರೂಲ್ಸಿದೆ,
೨ನೇ ಗೌಡ
- ಆಗಯ್ತಿ ಮೇಷ್ಟೇ ! ನೋಡಾಕೆ ಅಂಗವೈ. ಇವನು ಹುಟ್ಟಿ ಓಟೊರಸ ಆಗೋಯ್ತೋ!