ಈ ಪುಟವನ್ನು ಪ್ರಕಟಿಸಲಾಗಿದೆ
ರೂಲ್ಸ್ ಮೇಷ್ಟ್ರು
೧೩
ಉಪಾಧ್ಯಾಯ
ಇನ್‌ಸ್ಪೆಕ್ಟರ್ ಬಂದರೆ ನನ್ನ ಸಸ್ಪೆಂಡ್ ಮಾಡಿಬಿಡ್ತಾರಲ್ಲಪ್ಪ. “ಸ್ವಾಮಿ, ಹಳ್ಳಿ ಸ್ಕೂಲಿಗೆ ರೂಲ್ಲು ನಡಿಯೋದಿಲ್ಲ” ಎಂದು ಎಷ್ಟೋ ಹೇಳಿದೆ, ಅವರು ಕೇಳಲಿಲ್ಲ. ಸರ್ಕ್ಯುಲರ್ ಮೇಲೆ ಸರ್ಕ್ಯುಲರ್ ಕಳ್ಸ್ತಾರೆ. ಅದರಂತೆ ನಡೆಯದಿದ್ರೆ 'ಜುಲ್ಮಾನೆ, ಸಸ್ಪೆಂಡ್' ಅಂತಾರೆ. ನಿಮ್ಮ ಹತ್ತಿರ ಹೇಳ್ಕೊಂಡ್ರೆ ಸುಂಕದವನ ಹತ್ತಿರ ಸುಖದುಃಖ ಹೇಳಿಕೊಂಡ ಹಾಗೆ.
೨ನೇ ಗೌಡ
- ಇರಲಿ ಮೇಷ್ಟೆ, ಇನ್ ಚ್ ಪೆಟ್ರ ನಾವು ಕಾಣ್ಯಾ, ಇನ್ಚ್ಪೆಟ್ರು ಬರ್ಲಿ, ನಾವೆಲ್ಲ ಹೇಳ್ತಿವಿ.
( ಮಕ್ಕಳನ್ನು ಬಿಟ್ಟು ಹೋಗುವರು, ಉಪಾಧ್ಯಾಯರು ಪಾಠ ಮಾಡುತ್ತಿರುವರು. ಹಳ್ಳಿಯ ಹೆಂಗಸು ಪ್ರವೇಶ )
ಹೆಂಗಸು
- ಸೋಮಿ, ಮಕನ್ನ ಸ್ವಲ್ಪ ಕಾಸೀಗೆ ಕಳಿಸಲಾ.
ಉಪಾಧ್ಯಾಯ
- ಕಾಫಿ ! ಹಳ್ಯಾಗೇನು ಕಾಫಿ !
ಹೆಂಗಸು
- ಇವತ್ತು ಮಾಡಿ, ಬಿರಾವೆಲ್ಲ ಕುಡಿತಾರ, ನನ್ನೂವೆ ಮಾಡಿಕೊಡು ಅಂತ ಅಟ ಮಾಡತಿದ್ದ ಮಕ. ನಾನೂವೆ ಒಸಿ ಮಾಡಿವ್ನಿ, ಕಳ್ಸಿಕೊಡ್ರಲಾ.