ವಿಷಯಕ್ಕೆ ಹೋಗು

ಪುಟ:ರೂಲ್ಸ್ ಮೇಸ್ಟ್ರು.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪
ರೂಲ್ಸ್ ಮೇಷ್ಟ್ರು

ಉಪಾಧ್ಯಾಯ

ಹಾಗೆಲ್ಲ ಮಧ್ಯೆ ಕಳಿಸಬಾರದು, ಪಾಠ ಹೋಗುತ್ತೆ, ರೂಲ್ಲು ಮಾರೋದಕ್ಕಾಗೋದಿಲ್ಲ.

ಹೆಂಗಸು

ನಮ್ನ್ ತಿಳೀತೈತೆ ರೋಲ್ಬು, ಕಳ್ಳಿಕೊಡಿ ಸೋಮಿ, ಆ ನಕ ಓದಿ ಏನ್ ದಿನಾನ್ಗಿರಿ ಮಾಡೈತ. "

ಉಪಾಧ್ಯಾಯ

ಕರಕೊಂಡು ಹೋಗು, ಬೇಗ ವಾಪಸ್ ಕಳಿಸಿಕೊಡು.

( ಹುಡುಗ ಹೆಂಗಸು ಹೊರಟುಹೋಗುವರು )

ಮಧ್ಯೆ ಮಧ್ಯೆ ಹುಡುಗರನ್ನ ಕರೆದುಕೊಂಡು ಹೋಗ್ತಾರೆ. ಒಂಬತ್ತು ಗಂಟೆಗೆ ವಿರಾಮ ಅಂತ ಬಿಟ್ಟರೆ ಹಾಗೇನೇ ಹೊರಟು ಹೋಗ್ತಾರೆ, ಪುನಃ ಬರೋದೇ ಇಲ್ಲ. ಪಾಠ ಸರಿಯಾಗಿ ನಡೆಯೋದಿಲ್ಲವಲ್ಲ.

( ಇಬ್ಬರು ಯುವಕರ ಪ್ರವೇಶ, ಒಬ್ಬನು ಉಪಾಧ್ಯಾಯರ ಬೈಸಿಕಲ್ಲಿಗೆ ಕೈ ಹಾಕುವನು )

ಏ! ಭೀಮಪ್ಪ ನನ್ನ ಸೈಕಲ್ ಮಡಗಲ್ಲಿ, ಇದೇ ಆಗೋಯ್ತು. ಬೇಡ ಬೇಡ ಎಂದರೂ ಎತ್ತಿಕೊಂಡೋಗೋದು, ಹಳ್ಳದಲ್ಲಿ ಕೊಳ್ಳದಲ್ಲಿ ಕೆಡವಿ ಮುರಿದು ತಂದಿಡೋದು, ಮೊನ್ನೆ ಯೆಲ್ಲ ರಿಪೇರಿಗೆ ದಂಡ ತೆತ್ತೆ. ಖಂಡಿತ ಕೊಡೋದಿಲ್ಲ ಬಿಡು.

( ಬಿಡಿಸಿಕೊಳ್ಳಲು ಯತ್ನಿಸುವನು)