ಈ ಪುಟವನ್ನು ಪ್ರಕಟಿಸಲಾಗಿದೆ
ರೂಲ್ಸ್ ಮೇಷ್ಟ್ರು
೧೫
ಭೀಮಪ್ಪ
- ಇರ್ಲಿ ಮೇಷ್ಟೆ, ಈ ಚಣಿ ವಾ ಪಸ್ ತಂದ್ಯೋಡೈನೆ. ರವಷ್ಟು ಪೇಟೆಗೆ ಹೋಗಬೇಕು. ಎರಡು ಬೈಸ್ಕೂಲ್ ಅಯ್ಕೆ, ಇನ್ನೊಂದು ಬೇಕು.
ಉಪಾಧ್ಯಾಯ
ಖಂಡಿತ ಆಗೋದಿಲ್ಲ. ಬೈಸ್ಕಲ್ ಹಾಳಾಗಿಹೋದ್ರೆ ನಾನೇನು ಮಾಡಲಿ ? ಈ ಊರಲ್ಲಿ ಒಂದು ಮನೆ ಮಾಡಿಕೊಡಿ ಅಂದ್ರೆ ಇನ್ನೂ ಮಾಡಿಕೊಡ್ತಾ ಇದ್ದಾರೆ. ಎಷ್ಟು ಹೇಳಿದರೂ ಕಿವಿಯಮೇಲೆ ಹಾಕಿಕೊಳ್ಳೋದೇ ಇಲ್ಲ. ಬಿಡು ಬೈಸ್ಕಲ್,
ಭೀಮಪ್ಪ
ಬಿಡಿ ಮೇಷ್ಟೆ, ಈ ಬೈಸ್ಕೂಲ್ ಹೋದ್ರೆ ಬೇರೆ ಬೈಸ್ಕೂಲ್ ಸೊಗಸಾದ್ದು ತೆಗೆದುಕೊಡ್ತೀನಿ. ಈ ಬಾರಿ ಫಸಲು ಬರ್ಲಿ ನೋಡ್ರಾಗ.
( ಬಲವಂತವಾಗಿ ಎಳೆದುಕೊಂಡೇ ಹೋಗುವನು )
ಉಪಾಧ್ಯಾಯ
- ಈ ಹಳ್ಳಿಗೆ ಕೇಳೋರಿಲ್ಲ ಹೇಳೋರಿಲ್ಲ. ದೊಡ್ಡವರು ಹಾಗೆ, ಚಿಕ್ಕವರು ಹೀಗೆ. ನನಗೆ ಬರೋ ಸಂಬಳದಲ್ಲಿ ಹೇಗೋ ಮಿಗಿಸಿ, ಸಾಲಮಾಡಿ ಒಂದು ಸೈಕಲ್ ಕೊಂಡುಕೊಂಡ್ರೆ ಊರವರೆಲ್ಲ ಏರೋದ್ರೆ.
( ನಡುವಯಸ್ಸಿನ ಇಬ್ಬರ ಪ್ರವೇಶ )