ಈ ಪುಟವನ್ನು ಪ್ರಕಟಿಸಲಾಗಿದೆ
೧೮
ರೂಲ್ಸ್ ಮೇಷ್ಟ್ರು
೧ನೇಯವ
ನೀವೆಂತಾ ಬಡವ್ರು ಮೇಷ್ಟೆ ! ಹಿಂಗು ತಿಂಗಕ್ಕೆ ಬೆಳ್ಳಗೆ ಹದಿನೋದು ರುಪಾಯಿ ಕೈಗೆ ಬರ್ತೈತೆ. ನಾವು ರೈತೊರು ವರ್ಷಕ್ಕೆ ನಾಲ್ಕು ಕಾಳು ಕಾಣೋದೇ ಕಷ್ಟ. ಹತ್ತು ಖಂಡುಗ ಬೆಳೆಯೋ ಕಡೆ ಎರಡು ಖಂಡುಗ ಬರ್ತಾ ಇಲ್ಲ. ಕಂದಾಯ ಗಿಂದಾಯ ಕೊಟ್ಟೇಕೆ ನಮೋನುಳೀ ತೈತೆ. ನೀವೇ ಬಡವರಾದ್ರೆ ನಾವು ಏನೂ ಅಂತ ಹೇಳಿ?
ಉಪಾಧ್ಯಾಯ
ಅದೇನು ನನಗೆ ಗೊತ್ತಿಲ್ಲ. ನನಗೆ ಐದು ಮಕ್ಕಳು, ಸಾಲದ್ದಕ್ಕೆ ಭಾಮೈದ ಒಬ್ಬ, ನನ್ನ ತಾಯಿ ಒಬ್ಬಳು ಮುದುಕಿ. ನನ್ನ ಸಂಸಾರ ಹೇಗೆ ನಡೀಬೇಕು. ನಿಮಗೇನು ಎಲ್ಲಾ ರೂ ಗೆರಿ, ಕೂಲಿ ಕೀಲಿ ಮಾಡಿಕೊಂಡು ಜೀವನ ಮಾಡ್ತೀರಿ. ನನ್ನ ಮನೆಗೆ ನಾನೊಬ್ಬನೇ ದುಡೀಬೇಕು. ರೂಪಾಯಿ ಗೀಪಾಯಿ ಕೊಡೋದಕ್ಕೆ ಆಗೋದಿಲ್ಲ.
೨ನೇಯವ
ಇಲ್ಲ ಮೇಷ್ಟೇ ದಮ್ಮಯ್ಯ, ಅಗಲ್ಲ ಅನ್ನಬೇಡಿ. ಕಂಡಿತ ಬೀರೇ ದೇವ್ರಾಣೆ. ಒಂದು ವಾರ ದಾಕೆ ಕೊಟ್ಟು ಬಿಡ್ತೀನಿ. ಇವನ್ಕೈಲೂ ನಿಮ್ಮ ಸಾಲ ಕೊಡ್ತಿತೀನಿ.
ಉಪಾಧ್ಯಾಯ
- ಆಗೋದಿಲ್ಲ ಆಗೋದಿಲ್ಲ. ನಾನು ಪಾಠ ಮಾಡಬೇಕು ನೀವೆಲ್ಲ ಹೊರಟುಹೋಗಿ,