ವಿಷಯಕ್ಕೆ ಹೋಗು

ಪುಟ:ರೂಲ್ಸ್ ಮೇಸ್ಟ್ರು.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರೂಲ್ಸ್ ಮೇಷ್ಟ್ರು
೧೯

೧ನೇಯವ

ಇಂಗೆಲ್ಲ ಒಳ್ಳೇ ಮಾತಾಗೆ ಕೇಳಿದ್ರೆ ಈ ಮೇಷ್ಟು ಕೊಟ್ಟಾನಾ |

ಉಪಾಧ್ಯಾಯ

ಮತ್ತೆ ಏನು ಮಾಡ್ತೀಯಾ ? ಅರ್ಜಿ ಬರೀತೀಯ, ಅಷ್ಟೇ ತಾನೆ. ದೇವರಿದ್ದಾನೆ, ನೊಡ್ಕೊತಾನೆ. ಹಗಲೂ ರಾತ್ರಿ ಈ ಹಳ್ಳಿಯವರಿಗೆ ದುಡಿದೂ ದುಡಿದ ಹಣ ಕಳಕೊಂಡು, ಬೈಸ್ಕೂಲ್ ಕಳಕೊಂಡು, ಜನಕ್ಕೆ ಹೆದರಿ, ದೇವರಿಗೆ ಹೆದರಿ, ಕೆಲಸ ಮಾಡಿದರೆ ಕಡೆಗೆ ಇವರು ಮಾಡೋ ಉಪಕಾರ. ನನ್ನ ಮೇಲೆ ಅರ್ಜಿ ಬರೆಯೋದು. ಅದಕ್ಕೇನೆ ಮಳೆಯಿಲ್ಲ, ಬೆರೆ ಯಿಲ್ಲ, ರೋಗರುಜಿನ ಹಿಡಿದುಕೊಂಡು ತಿಂತಿದೆ.

೨ನೇಯುವ

ಏನೋ ಕಷ್ಟ ಕಾಲ ಎಲ್ಲು ರುಪಾಯಿ ಕೊಟ್ಟಪ್ಪ, ಆಮೇಲೆ ಕಬಡ್ತಿವಿ ಎಂದರೆ ನಮ್ಮೆಲ್ಲ ಬೈ ಹೀಯಾ ? ನೀನು ಮನೆ ಸೇರೋದು ನೋಡ್ತಿನ್ನಿ ಚಾಳು.

ಉಪಾಧ್ಯಾಯ

( ಸ್ವಗತ ) ಈ ಒರಟು ಜನರ ಮಧ್ಯೆ ಬಾಳೋದು ಬಲು ಕಷ್ಟ, ಬಲು ಕಷ್ಟ, ನಮ್ಮಪ್ಪ ದೇವರೇ ! ಮೇಳಿನವರಿಗೆ ಏನು ಗೊತ್ತಾಗುತ್ತೆ. ಇಲ್ಲಿ ಒಂದೆರಡು ದಿವಸ ಇವರ ಹತ್ತಿರ ಎಲ್ಲ ಏಗಿದರೆ ಆಗ ತಿಳಿಯುತ್ತೆ. ಇಷ್ಟೆಲ್ಲ ತಾಳಿಕೊಂಡು ಕಷ್ಟ ಪಟೂ ಹಾಳು ಸ್ಕೂಲು ಉದ್ಧಾರವಾಗೊದಿಲ್ಲ ಹೊಗೊದಿಲ್ಲ.