ಈ ಪುಟವನ್ನು ಪ್ರಕಟಿಸಲಾಗಿದೆ
ರೂಲ್ಸ್ ಮೇಷ್ಟು
೨೩
ಅದೇನೋ ಹೇಳುತ್ತಾ ಸ್ವಾಮಿ, ಇಂಗ್ಲಿಷಿನಲ್ಲಿ ರುಜು ಮಾಡ್ತಾರೆ, ಹೆಸರು ತಿಳಿಯೋದಿಲ್ಲ.
( ಅಮಲ್ದಾರರು ಒಕೆಕ್ಕೆ ಹೋಗುವರು, ಬೆಂಚು ಜೋಡಿಸಿ
ಗ್ರಾಮಸ್ಥರು ಅಣಿಮಾಡುವರು )
೩ನೇ ಗೌಡ
ಮೆಷ್ಟ್ರೇ ಯೋಚನೆ ಮಾಡಬ್ಯಾಡಿ, ಹಳ್ಳಿ 'ಜನ ಅಂಗೇನೆ, ಒರಟು ಜನ. ನೀವು ಕಷ್ಟ ಪಟ್ಟು ಕೆಲ್ಸ ಮಾಡ್ತಿವಿ. ನಾ ಕಾಣ್ನಾ
೪ನೇ ಗೌಡ
ಬನ್ನಿ ಅಯ್ಯೋರೆ, ಮೊದಲು ಅಮಲ್ದಾರಗೆ ಕಾಪಿ ಮಾಡಿ ಕೊಡ್ರಲಾ, ಬಾಳ ದಣಿದು ಬಂದವೆ. ನಾವೆಲ್ಲ ನಿಮ್ಮ ಇನ್' ಪೆಟ್ರಗೆ ಹೇಳ್ತಿವಿ ; ಆವರೇನೂ ಮಾಡಾಕಿಲ್ಲ.
೩ನೇ ಗೌಡ
ಅಂಗೇನೆ, ದೇವಸ್ಥಾನದಾಗೆ ರವಷ್ಟು ಅಡಿಗೆ ಮಾಡಿಬಿಡಿ ಮೆಷ್ಟ್ರೇಷ್ಟೆ, ಅಮಲ್ದಾರ್ರ ಮೊಕ್ಕಾಂ ಈ ದಿನ ಇಲ್ಲೇ ಇರ್ತೈತೆ.