ಈ ಪುಟವನ್ನು ಪ್ರಕಟಿಸಲಾಗಿದೆ
ರೋಲ್ಡ್ ಮೆಷ್ಟು
೨೯
ಕಾಡೇಗೌಡ
ಅಮಲ್ದಾರಲ್ ಕಣಪ್ಪೋ, ನಾಕಾಣ್ನಾ ಆಮಲ್ಲಾರನ್ನ ? ಇನ್‌ಚ್‌ಪೆಟ್ರಂತೇ ಕಾಣಪ್ಪ, ಇನ್ಚ್ ಪೆಟ್ರು.
ಈರಣ್ಣಗೌಡ
ಯಾವ ಇನ್ಚ್‌ಪೆಟ್ರಪ್ಪ ! ಮತ್ತೆ ನನ್ ತ ಲೇ ಗೆ ತಂದಾರು ! ಡ್ರಿಸ್‌ಮೇಲೆ ಬಂದಾವ್ರ ? ಪೋಲೀಚ್ ಇನ್ಚ್ಸಪೆಟ್ರಾ ?
ಕಾಡೇಗೌಡ
ಡ್ರಿಸ್ ಗಿಸ್ ಇಲ್ಲಪ್ಪ, ಸೈಕೋಲ್‌ಮ್ಯಾಗೆ ಸುಮ್ಮೆ ಬಂದವ್ರೆ.
ಈರಣ್ಣಗೌಡ
ಹೋಗಲಿ ಬಿಡು, ಇನ್ನು ಜೀವ ಉಳೀತು, ಮತ್ತಾವ ಇನ್ಚ್ ಪೆಟ್ರಾದ್ರೂನೂವೆ, ಪರವಾಯಿಲ್ಲ. ಚಾನಟರಿ ಇನ್ಚ್ ಪೆಟ್ರೋ, ಕಾಫಿ ಟೀ[೧] ಇನ್ಚೆಪೆಟ್ರೋ ಇರಬೋದು. ನಡಿ ಹೋಗಾನ, ರುಮಾಲು ಅಂಗಿ ಯಾಕ?
ಕಾಡೇಗೌಡ
ಇಸ್ಕೊಲ್ ತಾವ ಆದ್ರೆ ಒಳಕ್ಕೊದ್ರಪ್ರೊ-ಮೆಷ್ಟು ಗಾಬರಾಗಿದ್ರು.
- ↑ ಕೋ-ಆಪರೇಟಿವ್.