ಈ ಪುಟವನ್ನು ಪ್ರಕಟಿಸಲಾಗಿದೆ
ರೋಲ್ಸ್ ಮೇಷ್ಟ್ರು
೩೦
ಕಾಡೇಗೌಡ
ಅದೆಲ್ಲಾ ಅಲ್ಲೇ ಮಾತೋಡು ಬಾಪ್ಪೋ.
ಈರಣ್ಣಗೌಡ
ಬರ್ತೀನಿ ಅಂತ ಹೇಳೋಗತ್ತ.
ಕಾಡೇಗೌಡ
ಬಿರೀನ ಬಾ,
ದ್ರಶ್ಯ ೪
( ಇನ್ಸ್ಪೆಕ್ಟರ್ ಪ್ರವೇಶ. ಉಪಾಧ್ಯಾಯರು ಗಾಬರಿಯಿಂದ ಎದ್ದು ನಮಸ್ಕಾರ ಮಾಡುವರು )
ಇ೯ಸ್ಪೆಕ್ಟರ್
ಯಾಕೆ ಹುಡುಗರ ಸಂಖ್ಯೆ ಕಡಮೆ ?
ಉಪಾಧ್ಯಾಯ
ಹಳ್ಳಿ ಹುಡುಗರು, ಬೇಗ ಬರೋದಿಲ್ಲ ಸ್ವಾಮಿ. (ಇಬ್ಬರು ಹುಡುಗರನ್ನ ಕರೆದು) ಇನ್‌ಸ್ಪೆಕ್ಟರು ಸಾಹೇಬ್ರು ಬಂದಿದ್ದಾರೆ ಹುಡುಗರನ್ನು ಕರೆದುಕೊಂಡು ಬನ್ನಿ ಹೋಗಿ.
ಇನ್ಸ್ಪೆಕ್ಟರ್
ಬೆಲ್ ಹೊಡೀರಿ ಮೇಷ್ಟ್ರೆ, ಹುಡುಗರು ಬರ್ತಾರೆ.