ವಿಷಯಕ್ಕೆ ಹೋಗು

ಪುಟ:ರೂಲ್ಸ್ ಮೇಸ್ಟ್ರು.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೨
ರೋಲ್ಸ್ ಮೇಷ್ಟ್ರು

ಉಪಾಧ್ಯಾಯ

ಬೆಲ್ ಇಲ್ಲಿಲ್ಲ ಸ್ವಾಮಿಾ.

ಇನ್ಸ್ಪೆಕ್ಟರ್

ಇದೇಕೆ ಮೊನ್ನೆ ನಿಮ್ಮ ಸ್ಕೂಲಿಗೆ ಗಡಿಯಾರ, ಬೆಲ್ಲು ಸಪ್ಲೈ ಮಾಡಲಿಲ್ವೆ ?

ಉಪಾಧ್ಯಾಯ

ಆಯ್ತು ಸ್ವಾಮಿ. ಬೆಲ್ಲು ಮನೇಲಿಟ್ಟಿದ್ದೆನೆ.

ಇನ್ ಸ್ಪೆಕ್ಟರ್

ಅದೇಕೆ, ದೇವರ ಪೂಜೆಗೋ ?

ಉಪಾಧ್ಯಾಯ

ಅಲ್ಲ ಸ್ವಾಮಿ. ಸ್ಕೂಲಿಗೆ ಸರಿಯಾದ ಬೀಗವಿಲ್ಲ. ಎಷ್ಟು ರಿಪೋರ್ಟು ಮಾಡಿದರೂ ಸ್ವಾಮಿಯವರ ಚಿತ್ರಕ್ಕೆ ಬರಲಿಲ್ಲ. ಈ ಹಳೇ ಬೀಗ ಮುರಿದು ತುಂಟರು ಸ್ಕೂಲೊಳಕ್ಕೆ ನುಗ್ಗಿ ಸಾಮಾನೆಲ್ಲ ಎತ್ತಿಕೊಂಡು ಹೋಗ್ತಾರೆ. ಅದರಲ್ಲೂ ಗಡಿಯಾರ ಗಂಟೆ ಬಿಡೋದೇ ಇಲ್ಲ, ಕದ್ದು ಬಿಡ್ತಾರೆ.

ಇನ್ ಸ್ಪೆಕ್ಟರ್

ಒಳ್ಳೇ ಮೇಷ್ಟ್ರು ನೀವು.