ಈ ಪುಟವನ್ನು ಪ್ರಕಟಿಸಲಾಗಿದೆ
ರೋಲ್ಸ್ ಮೇಷ್ಟ್ರು
೩೭
ಉಪಾಧ್ಯಾಯ
ನೋಡಿದ್ದೇನೆ ಸ್ವಾಮಿ, ಎಲ್ಲಾ ಲೆಕ್ಕಾನೂ ಮಾಡ್ತಾರೆ. ಕಷ್ಟ ಪಟ್ಟು ಹೇಳಿಕೊಟ್ಟಿದ್ದೇನೆ.
ಇನ್ ಸ್ಪೆಕ್ಟರ್
ಪಾಠದ ಪಟ್ಟಿ ಪ್ರಕಾರ ಮಾಡಬೇಕು. ಸಣ್ಣ ಲೆಕ್ಕ ಹಾಕಿ.
( ಬೇರೆ ಹುಡುಗರಿಗೆ ಗದ್ಯ ಓದುವಂತೆ ಹೇಳುವರು )
ಸರಿಯಾಗಿ ಓದು, ಧಾಟಿಯಾಗಿ ಓದಬೇಕು. ಏನ್ರಿ ಮೇಷ್ಟೆ ! ಹುಡುಗರಿಗೆ ಸರಿಯಾಗಿ ಓದುವುದಕ್ಕೇ ಬರುವುದಿಲ್ಲ.
ಉಪಾಧ್ಯಾಯರು
ಬರುತ್ತೆ ಸ್ವಾಮಿ, ಭಯಬಿದ್ದಿದ್ದಾರೆ. (ಹುಡುಗರಕಡೆ ತಿರುಗಿ) ಭಯಪಡಬೇಡಿ, ಭಯಪಡಬೇಡಿ, ಇನ್‌ಸ್ಪೆಕ್ಟರ್ ಸಾಹೇಬರು ಏನೂ ಮಾಡುವುದಿಲ್ಲ, ಓದಿ.
೧ನೇ ಗೌಡ
ಗಾಬರಾಗಬಿಟ್ಟ ವರೆ ಸ್ವಾಮಿ ಸ್ವಾಮಿ ಗಾಬರಾಗಬಿಟ್ಟವ್ರೆ. ಲೇ ಹೆದರ ಬೇಡ ಮಗ, ಹೆದರಬೇಡ, ಯಾಕೊ ಮಗ ಅಳೋದು ?
( ಹುಡುಗರು ಕೆಲವರು ಹೆದರಿಕೆಯಿಂದ ಅಳುತ್ತಾರೆ)
ಇನ್ ಸ್ಪೆಕ್ಟರ್
ಇವರನ್ನು ಆಟಕ್ಕೆ ಸ್ವಲ್ಪ ಬಿಡಿ, ದೊಡ್ಡ ಹುಡುಗರ ಪರೀಕ್ಷೆ ಮಾಡುತ್ತೇನೆ.