ವಿಷಯಕ್ಕೆ ಹೋಗು

ಪುಟ:ರೂಲ್ಸ್ ಮೇಸ್ಟ್ರು.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೮
ರೋಲ್ಸ್ ಮೇಷ್ಟ್ರು

ನಮ್ಮ ಮಹಾರಾಜರ ಮೂಲಪುರುಷರು ಯಾರು ?

( ಉತ್ತರ ಇಲ್ಲ)

ತಿರುಚನಾಪಳ್ಳಿಗೆ ಹೋಗಿ ಜಟ್ಟಿಯನ್ನು ಗೆದ್ದ ದೊರೆಯಾರು?

(ಉತ್ತರ ಇಲ್ಲ)

ಏನ್ರಿ ಮೇಷ್ಟೆ ? ಏನು ಹೇಳಿಕೊಟ್ಟಿದ್ದೀರಿ ?

ಉಪಾಧ್ಯಾಯ

ಸ್ವಾಮಿ ಎಲ್ಲಾ ಹೇಳಿಕೊಟ್ಟಿದ್ದೆ. ಮೊನ್ನೆ ಒಂದು ತಿಂಗಳು ರಜಾ ತೆಗೆದುಕೊಂಡು ಹೋಗಿದ್ದೆ. ಬದಲಿ ಮಾಸ್ಟರು ಪಾಠಾನೇ ಮಾಡಲಿಲ್ಲ. ಹುಡುಗರೆಲ್ಲ ಮರೆತುಕೊಂಡುಬಿಟ್ಟಿದ್ದಾರೆ. ನಾನು ಎಂಟು ತಿಂಗಳು ಕಷ್ಟ ಪಟ್ಟಿದ್ದು ಒಂದು ತಿಂಗಳಲ್ಲಿ ವ್ಯರ್ಥ ಆಗಿ ಹೋಯಿತು. ಹಳ್ಳೋರನ್ನ ಕೇಳಿ ಸ್ವಾಮಿ, ನನ್ನ ಕಷ್ಟ ಅವರಿಗೆ ಗೊತ್ತು.

೧ನೇ ಗೌಡ

ಹೌದು ಸ್ವಾಮಿ. ಬಹಳ ಕಷ್ಟ ಪಟ್ಟಿವೆ. ಬೆಳಗಾನ ಇಸ್ಕೂಲಿಗೆ ಬಂದ್ರೆ ಮನೆಗೇ ಹೋಗಾಕಿಲ್ಲ. ಬೈಗವರೆಗೆ ಮಕ್ಕಳೆ ಪಾಟಾಹೇಳಿ ಚೆನ್ನಾಕ ತಯಾರು ಮಾಡಿದ್ರು.

೨ನೇ ಗೌಡ

ಇಲ್ಲ ಉಣ್ಣಕೊಂಡು ಇಲ್ಲಿ ಬಿದ್ದು ಕೊಂಡಿರೋದೆ, ಯಾಕ್ ಸ್ವಾಮಿ ಮನೇಕೆ ಹೋಗಾಕಿಲ್ವಾ ಅಂದರೆ, ಮಕ್ಕಳೆ ಪಾಟಾ ನಿಂತು ಹೋಗೈತೆ ಅಂತ ಇಲ್ಲೇ ಇರುತಿದ್ರು. ಬಲ್‌ಕಸ್ಟ ಬಿದ್ದಿ ಸ್ವಾಮಿ, ತಮ್ಮ ಕಾಲದಾಗೆ ಮೇಸ್ಟಗೆ ಎಲ್ಲು ರೂಪಾಯಿ ಸರ್ ಮೋಷನ್ ಕೊಡ್ಸ ಬೇಕು ಸ್ವಾಮಿ.