ಈ ಪುಟವನ್ನು ಪ್ರಕಟಿಸಲಾಗಿದೆ
೪೨
ರೋಲ್ಸ್ ಮೇಷ್ಟ್ರು
ಹಳ್ಳಿಗೆ ವರ್ಗಾಮಾತ್ತೇವೆ ಅಂತ ನೋಟೀಸ್‌ಮ್ಯಾಗೆ ನೋಟೀಸ್ ಕೊಟ್ಟವ್ರಿ.
ಇನ್ಸ್ಪಕ್ಟರ್
ಪಂಚಾಯತಿಗೆ ತಿಳಿವಳಿಕೆ ಕೊಟ್ಟಿದ್ದೇವೆ. ಪಂಚಾಯತಿ ಸ್ಕೂಲು ವಿಚಾರದಲ್ಲಿ ಮುತುವರ್ಜಿ ವಹಿಸಬೇಕು, ನೀವೆಲ್ಲ ಸ್ಕೂಲು ಕಮಿಟಿ ಮೆಂಬರುಗಳು. ಪಂಚಾಯಿತಿ ಪರ ಚೇರ್ಮನ್ನರಿಗೆ ಬರೆಯುತ್ತೇವೆ.
ಈರಣ್ಣಗೌಡ
ನಮ್ಮಮೇಲೆ ಏನದ್ರೆ ನಿಮ್ಮಧಿಕಾರ ನೋಟೀಸ್ ಕೊಡಾಕೆ ? ನಾನೇನು ನಿಮ್ಮ ತಾಪೇದಾರ ? ನಂಗೇನು ಜುಲ್ಮಾನೆ ಹಾಕೀರ, ಡಿಸ್ಮಿಸ್ ಮಾಡ್ತೀರ? ನಿಮ್ಮ ಮೇಸ್ಟ್ರವ್ರೆ ತಾಕೀತು ಮಾಡಿ.
ಇನ್ ಸ್ಪೆಕ್ಟರ್
ಸರಿ ಹಾಗಾದರೆ.
೧ನೇ ಗೌಡ
ಈರಣ್ಣ ! ಅಂಗೆಲ್ಲ ಆಡಬೇಡ. ನಮ್ಮ ಒಳ್ಳೇದಕ್ಕೆ ಅವರು ಹೇಳ್ತವ್ರೆ.
ಈರಣ್ಣಗೌಡ
ಸರಿ ಎಂದು ಸೋಮಿ ಬೆಸಿ, ಆ ರಾಮಣ್ಣ ಗೌಡ, ತನ್ನೆಲ್ಲಾ ಮಕ್ಕಳ ಪಾಟಾ ಹೇಳಿಕೊಡಾಕೆ ಒಂದಿಸ್ಕೋಲು