ಪುಟ:ವತ್ಸರಾಜನ ಕಥೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ಬಗೆಯಾಗಿ ಹೆಚ್ಚುತ್ತಲಿರುವುದು, ಈ ಕಾರಣಗಳಿಂದ ಎನಗೆ ಮರಣವೊಂದಲ್ಲದೆ ಉಳಿಯುವ ತೆರನಂ ಕಾಣೆನೆಂದು ನುಡಿಗುದು ” ಎನಲು ; ರಾಯನು-II ಎಲೈ ಬ್ರಾಹ್ಮಣನೇ, ನಿನ್ನ೦ತೆ ವೇದಖಕ್ಕುಗಳ ಪರಿಯಂ ತಿಳಿಯುವನು ಯಾರು ? ಆದರೆ ಅದರ ಅಭಿಪ್ರಾಯವನ್ನು ಪೇಳುವೆನು ಕೇಳು. ಯಾವವಳೂ ಒಬ್ಬ ಸೊಕ್ಕು ಜವ್ವನದ ಬಾಲೆಯು ತನಗೆ ಪ್ರಾಣಕಾಂತನಾದ ಪುರುಷನಂ ಸೇರುವುದಕೆ ಉಪಾ ಯಗಳಂ ಕಾಣದೆ ತನ್ನ ಪ್ರಾಣಗಳಲ್ಲಿ ಆಸಯಂ ತೊರೆದು ನುಡಿದ ವಾಕ್ಯವಾಗಿ ತೋರುವುದಲ್ಲವೆ ? ೨” ಎನಲು ; ವಿದೂಷಕನು ಆ ವಾಕ್ಯವಂ ಕೇಳು ಗಹಗಹಿಸಿ ನಕ್ಕು, ಕೈತಪ್ಪಳೆಯಂ ಹಾಕುತ್ತ, ಇದೇನೀ ತೆರದ ವಕ್ರವಾಕ್ಯವನ್ನು ನುಡಿಯುತ್ತಿ ರುವೆ? ಆವವಳೊ ಸೊಕ್ಕು ಜವ್ವನದ ಬಾಲೆಯು ಎನ್ನ೦ ಕಂಡು ಸೇರುವುದಕೆ ತೆರನಂ ಕಾಣದೆ ಪ್ರಾಣನೊಳು ಆಸೆಯಂ ಬಿಟ್ಟು ನುಡಿದ ವಾಕ್ಯವು ಎಂದು ಪೀಳಬಾರದೇ; ಏತಕೆ ಯಾವವನೋ ಒಬ್ಬ ಪುರುಷನೆಂದು ಟಕ್ಕು ಮಾತುಗಳ೦ ಬೀರುತ್ತಿರುವೆ ? ನೀನಲ್ಲದಿರೆ ಇನ್ನೊಬ್ಬ ಪುರುಷನನ್ನು ಮನ್ನಧನಿಗೆ ಸಮಾನನೆಂದು ಹೇಳಬಹುದೆ ಪೇಳು ?” ಎಂದು ನುಡಿಯಲು ; ರಾಯನು ಮೇಲೆ ನೋಡಿ- ಎಲೈ ಮೂರ್ಖ ನೇ, ನೀನು ಘಟ್ಟಿಯಾಗಿ ನಕ್ಕು ಕೈ ತಪ್ಪಳೆಯಂ ವಾಕಿದುದರಿಂದ ಭಯವಂ ಪೊಂದಿ ಶಾರಿಕೆಯು ಹಾರಿಪೋದುದು, ಇನ್ನೇನು ಹೇಳುತ್ತಿದ್ದುದೂ ವ್ಯರ್ಥವಂಗೆಯೇ ? ಎಂದು ನುಡಿಯಲಾವಿದೂಷಕನು- ಎಲೈ ರಾಜೇ೦ದ ನೇ, ಶಾರಿಕೆಯು ಎಲ್ಲಿ ಯೂ ಪೋಗಲಿಲ್ಲ. ಪುರೋಭಾಗದಲ್ಲಿ ಪರಿಶೋಭಿಸುತ್ತಿರುವ ಸುವರ್ಣದ ಕದಳಿ ಗೃಹದೆಡೆಗೆ ಹಾರಿಪೋದುದು. ನಾವಿರ್ಬರೂ ಆ ಸ್ಥಳಕ್ಕೆ ಪೋಗಿ ಆ ವಿಶಿಷ್ಟವಾದ ಮಾತುಗಳಂ ಕೇಳುವ ನಡೆ ಎಂದು ನುಡಿಯಲು; ರಾಯನು ಅದೇರೀತಿಯಿಂದ ಬರುತ್ತ- ಎಲೈ ವಿದೂಷಕನೇ, ಕೇಳು, ಸಹಿಸುವುದಕ್ಕೆ ಅನಾಧ್ಯವಾದ ಮನ್ಮ ಥನ ಬಾಣದ ವ್ಯಥೆಯನ್ನು ವಹಿಸಿದಂಧ ಆ ಸ್ತ್ರೀಯಿಂದ ಹೇಳಲ್ಪಟ್ಟ ವಾಕ್ಯವ೦ ಕೇಳಿ ಕಲಿತು ಮುಂದಾಗಿ ನುಡಿಯುತ್ತಿರುವ ಬಾಲಕಗಿಳಿಗಳ ಮುಖದಿಂ ಪೊರಡುವ ವಾಕ್ಯ ವನ್ನು ಧನ್ಯನಾದಂಥ ಪುರುಷನು ಕೇಳುತ್ತಿರುವನು ! ' ಎಂದು ನುಡಿಯಲು ; ವಿದೂ “ಷಕನು - ಎಲೈ ರಾಜೇಂದ್ರನೇ ಇದೆ ಸುವರ್ಣದ ಕದಳಿಗೃಹವು, ಇಲ್ಲಿಗೆ ಪ್ರವೇಶವಂ ಗೆಯ್ಯಬಹುದು ?” ಎಂದು ನುಡಿದು ರಾಯನಿಂದ ಕೂಡಿ ಒಳಹೊ ಕು,-- ಎಲೈ ಸ್ವಾಮಿಯೇ, ಈ ಶಾರಿಕೆಯಿಂದ ಇನ್ನು ನಮಗೆ ಕಾರವೇನು ? ಇಲ್ಲಿ ಪರಿಮಳಡೆ ಸೂರೆಯನ್ನುಂಟುಮಾಡುತ್ತ ಕೈತ್ಯ ಸೌಲಭ್ಯ ಮಾಂದ್ಯದಿಂದೊಡ ಗೂಡಿ ಬೀಸುತ್ತಿರುವ ಮಂದಮಾರುತದಿಂದ ಸ್ವಲ್ಪವಾಗಿ ಚಲಿಸುತ್ತಲಿರುವ ಸುವರ್ಣ ದ ಕದಳೀದಳಗಳಿಂದ ಸೊಂಪಾಗಿ ತಂಪಾಗಿರುವ ಈ ಸ್ಥಳ ದಲ್ಲಿ ಕುಳಿತು ಮನಕೆ ಸಂತೋಷವನ್ನು ಎಂಟುಮಾಡಬಹುದು ” ಎನ್ನಲು ; ರಾಯನು- ನಿನ್ನ ಮನಕೆ ಬಂದಂತೆ ಮಾಡಬಹುದು ?” ಎಂದು ನುಡಿದು, - |